Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಬಿಗ್ ಬಾಸ್ ಸುದೀಪ್​ ಕೊಟ್ರು ಬಿಗ್ ಬ್ರೇಕಿಂಗ್ ನ್ಯೂಸ್‌!

Wednesday, 15.08.2018, 1:24 PM       No Comments

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್ ಖಾನ್ ಜತೆ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಇದೀಗ ಈ ವಿಚಾರವಾಗಿ ಸ್ವತಃ ಸುದೀಪ್​ ಅವರೇ ಮಾತನಾಡಿದ್ದಾರೆ.

ದಿಗ್ವಿಜಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್, ಸಲ್ಮಾನ್​ ಖಾನ್​ ಅಭಿನಯದ ‘ದಬಾಂಗ್​-3’ ಸಿನಿಮಾದಲ್ಲಿ ನಟಿಸುವಂತೆ ನನಗೆ ಆಫರ್ ಬಂದಿದೆ ಎಂದು ತಿಳಿಸಿದ್ದಾರೆ. ಹಾಗಂತ ಈ ಸಿನಿಮಾದಲ್ಲಿ ನಾನು ಖಂಡಿತವಾಗಿಯೂ ವಿಲನ್ ಪಾತ್ರ ಮಾಡುತ್ತಿಲ್ಲ. ಬದಲಾಗಿ ಅದ್ಭುತವಾದ ಪಾತ್ರ ಮಾಡುತ್ತಿದ್ದು, ಯಾವುದು ಎಂದು ತಿಳಿಯಬೇಕಾದರೆ ಕಾದು ನೋಡಿ ಎಂದರು.

ಪಾತ್ರದ ಬಗ್ಗೆ ಮಾಹಿತಿ ಸಿಕ್ಕ ಮೇಲೆ ಮಾತನಾಡುತ್ತೇನೆ. ಸಲ್ಮಾನ್ ಖಾನ್ ಸಿನಿಮಾದಲ್ಲಿ ಮಾಡುತ್ತಿರುವುದಂತೂ ನಿಜ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಜತೆಗೆ ಅಭಿನಯ ಚಕ್ರವರ್ತಿ ಪುಸ್ತಕವೊಂದನ್ನು ಬರೆಯುತ್ತಿರುವ ಬಗ್ಗೆ ಬಿಗ್ ಬ್ರೇಕಿಂಗ್ ನೀಡಿದ್ದಾರೆ. ಇನ್ನೂ ಹಲವಾರು ಕುತೂಹಲಕಾರಿ ವಿಚಾರಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದು, ಅದನ್ನು ತಿಳಿಯಲು ಇಂದು ರಾತ್ರಿ 7.30ಕ್ಕೆ ನಿಮ್ಮ ದಿಗ್ವಿಜಯ ನ್ಯೂಸ್​ನಲ್ಲಿ ಪ್ರಸಾರವಾಗುವ “ಸುದೀಪ್​ ಸರೋವರ” ಎಂಬ ವಿಶೇಷ ಕಾರ್ಯಕ್ರಮವನ್ನು ನೋಡಿ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top