Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ವಿಚ್ಛೇದನದ ಕೇಸ್​: ಸುದೀಪ್​ ದಂಪತಿಗೆ ಗೌರಿ ಗಣೇಶ ಕಡುಬು

Thursday, 24.08.2017, 11:42 AM       No Comments

ಬೆಂಗಳೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಖ್ಯಾತ ನಟ ಕಿಚ್ಚ ಸುದೀಪ್​ ಕುಟುಂಬದಲ್ಲಿ ಸಂತಸದ ಹೊನಲು ಮೂಡಿದೆ. ಸ್ಯಾಂಡಲ್​ವುಡ್​ ನಟ ಸುದೀಪ್​ ದಂಪತಿ ಕೋರ್ಟ್​ನಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ವಾಪಸ್​ ಪಡೆದಿದ್ದಾರೆ.

ಮಗಳ ಭವಿಷ್ಯದ ಹಿತದೃಷ್ಟಿಯಿಂದ ಸುದೀಪ್​ ದಂಪತಿ ವಿಚ್ಛೇದನ ಅರ್ಜಿ ವಾಪಸ್​ ಪಡೆದಿದ್ದಾರೆ. ಸುದೀಪ್​ ದಂಪತಿ 2015ರ ಸೆಪ್ಟೆಂಬರ್​ನಲ್ಲಿ ಪರಸ್ಪರ ಸಹಮತದ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆ ನಂತರ ಕಳೆದ 2 ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

2017ರ ಜೂನ್​ 14 ರಂದು ನಡೆದ ಅರ್ಜಿಯ ವಿಚಾರಣೆಯಲ್ಲಿ ಸುದೀಪ್​ ದಂಪತಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಸುದೀಪ್​ ಮತ್ತು ಪ್ರಿಯಾ ಅವರಿಗೆ ಆಗಸ್ಟ್​ 24ರೊಳಗೆ ಕೋರ್ಟ್​ಗೆ ಹಾಜರಾಗಬೇಕೆಂದು ಸೂಚಿಸಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top