Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ಸೊರಬ ತಾಲೂಕಿನಲ್ಲಿ ಮಂಗನ ಕಾಯಿಲೆ ಭೀತಿ

Wednesday, 10.01.2018, 6:53 PM       No Comments

<< ಮರಣೋತ್ತರ ಪರೀಕ್ಷೆಯಲ್ಲಿ ಕೆಎಫ್​ಡಿ ವೈರಾಣು ಪತ್ತೆ >>

ಸೊರಬ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಳವಿ ಹೋಬಳಿಯಲ್ಲಿ ಮಂಗಗಳು ಸಾವನ್ನಪ್ಪುತ್ತಿರುವುದರಿಂದ ಮಂಗನ ಕಾಯಿಲೆ ಭೀತಿ ಎದುರಾಗಿದೆ.

ಕಟ್ಟಿನಕೆರೆಯಲ್ಲಿ ಡಿ.22ರಂದು ಮಂಗವೊಂದು ಮೃತಪಟ್ಟಿದ್ದು, ಪಶುಸಂಗೋಪನೆ ಮತ್ತು ಆರೋಗ್ಯ ಇಲಾಖೆಯವರು ಮಂಗದ ಮರಣೋತ್ತರ ಪರೀಕ್ಷೆ ನಡೆಸಿ ಅದರ ಮಿದುಳು ಮತ್ತು ಕರುಳನ್ನು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳಿಸಿದ್ದರು. ಅದರಲ್ಲಿ ಕೆಎಫ್​ಡಿ ವೈರಾಣು ಇರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಆ ಭಾಗದ 5 ಕಿ.ಮೀ. ವ್ಯಾಪ್ತಿಯ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಲಸಿಕೆ ಹಾಕಿದೆ. ಇದಾದ ಬಳಿಕ ಸರಣಿಯಾಗಿ ಖರ್ಜಿಕೊಪ್ಪ ಗ್ರಾಮದಲ್ಲಿ ಹಾಗೂ ಜ.9ರಂದು ಹಾಲಗಳಲೆ ಮತ್ತು ಇಂಡುವಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲೂ ಮಂಗಗಳು ಸಾವನ್ನಪ್ಪಿವೆ. ಇವುಗಳ ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್​ಗಳನ್ನು ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

Back To Top