Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ದಾನಕ್ಕೆ ಪಾತ್ರರು ಯಾರು?

Wednesday, 21.03.2018, 3:04 AM       No Comments

| ಗಂಗಾವತಿ ಪ್ರಾಣೇಶ್​

ಶ್ರೀಮಂತನೊಬ್ಬ ಗುರುವಿಗೆ ಕೇಳಿದ. ದಾನಕ್ಕೆ ಸತ್ಪಾತ್ರರು ಯಾರು ? ನಾನು ನಿನಗೆ ಒಂದು ಬಂಗಾರದ ನಾಣ್ಯ ಕೊಡುವೆ. ಬೆಳಗ್ಗೆ ಯಾರು ನಿನ್ನ ಕಣ್ಣಿಗೆ ಬೀಳುವರೊ ಅವನಿಗೆ ಅದನ್ನು ಕೊಟ್ಟುಬಿಡು ಮತ್ತು ಅವನನ್ನು ವಿಚಾರಿಸು ಎಂದ. ಶ್ರೀಮಂತನು ಹಾಗೇ ಮಾಡಿದ. ನಡೆದು ಬರುತ್ತಿದ್ದ ಗೃಹಸ್ಥನಿಗೆ ಬಂಗಾರದ ನಾಣ್ಯ ಕೊಡಲು ಮುಂದಾದ. ಗೃಹಸ್ಥನಿಗೆ ಭಯವಾಯ್ತು. ಏಕೆ ದಾನ ಕೊಡುವೆ ನನಗೆ ಎಂದು ಪ್ರಶ್ನೆ ಮಾಡಿದ. ಗುರುವಚನ ಪಾಲಿಸಲು ಎಂದು ಶ್ರೀಮಂತ ಉತ್ತರಿಸಿದ. ಮನಸ್ಸಿಲ್ಲದ ಮನಸ್ಸಿನಿಂದ ಆತ ದಾನ ಪಡೆದ. ನಂತರ ಶ್ರೀಮಂತ ಅವನನ್ನು ಹಿಂಬಾಲಿಸಿ ಕೇಳಿದ. ‘ನಾನು ಕಡುಬಡವ. ಯಾರಲ್ಲೂ ಬೇಡಲಿಕ್ಕೆ ಇಚ್ಛೆಯಿಲ್ಲ. ಇಂದು ನಮ್ಮ ಮನೆಯಲ್ಲಿ ಮಕ್ಕಳು ಉಪವಾಸವಾಗಿದ್ದಾವೆ. ಮಹಾತ್ಮನಾದ ನಿನಗೆ ಪರಮಾತ್ಮ ಪ್ರೇರಣೆ ಕೊಟ್ಟ. ನನಗಿಂದು ಗಂಜಿ ದೊರಕಿದೆ ಎಂದು ವಿನಮ್ರನಾಗಿ ನುಡಿದ. ಶ್ರೀಮಂತನಿಗೆ ಕಣ್ಣೀರು ಬಂತು. ದಾನಕ್ಕೆ ಅರ್ಹ ಈತನೇ ಎಂದು ತೃಪ್ತಿ ಪಟ್ಟ.

Leave a Reply

Your email address will not be published. Required fields are marked *

Back To Top