Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ಸಂತನ ಮನ ಹರಿಯಲ್ಲೇ ಇರಬೇಕು

Thursday, 15.02.2018, 3:02 AM       No Comments

| ಗಂಗಾವತಿ ಪ್ರಾಣೇಶ್​

ಸಂತನೊಬ್ಬ ಭಗವನ್ನಾಮಗಳನ್ನು ಹೇಳುತ್ತ ಉನ್ಮತ್ತನಾಗಿ ದಾರಿಯಲ್ಲಿ ಬರುತ್ತಿದ್ದ. ಜನರೆಲ್ಲ ಅವನನ್ನು ಹಿಂಬಾಲಿಸುತ್ತಿದ್ದರು. ಅಷ್ಟರಲ್ಲೇ ಒಬ್ಬ ಯುವತಿ ತನ್ನ ಪತಿಯನ್ನು ಹುಡುಕುತ್ತ ಮುನ್ನುಗ್ಗಿ ಬರುತ್ತಿದ್ದಳು. ಸ್ವಾಮಿ, ನನ್ನ ಪತಿಯನ್ನು ಹುಡುಕುತ್ತ ಬಂದಿರುವೆ. ಅವರೆಲ್ಲಿ ದೊರಕಬಹುದೆಂದು ಹೇಳುವಿರಾ? ಎಂದು ಕೇಳಿದಳು. ಆಗ ಸಂತ ಮೊದಲು ನಿನ್ನ ಮೋರೆಯನ್ನು ಮುಚ್ಚಿಕೋ, ನಾನು ಪರ ಸ್ತ್ರೀ ದರ್ಶನ ಮಾಡಲಾರೆ ಎಂದ. ಕೂಡಲೇ ಆಕೆ ಅಯ್ಯಾ ಸಂತ, ನಾನು ಪತಿಯ ಹುಡುಕಾಟದ ಆತಂಕದಲ್ಲಿದ್ದೇನೆ. ಜಗತ್ಪತಿಯಲ್ಲಿ ಸದಾ ಮನವಿಡುವ ನಿಮಗೆ ನನ್ನ ಆತಂಕದ ಸ್ಥಿತಿ ಎದುರಿಸುವ ಧೈರ್ಯವಿಲ್ಲವೇ? ಇಂಥ ಡಾಂಭಿಕತನದ ಭಕ್ತಿ, ವೈರಾಗ್ಯಗಳು ಶೀಘ್ರ ಪತನವಾಗುವುದು ನಿಶ್ಚಯ ಎಂದುಬಿಟ್ಟಳು! ಸಂತ ‘ತಾಯೇ ನೀನು ನನ್ನ ನನ್ನ ಕಣ್ಣು ತೆರೆಸಿದೆ’ ಎಂದ. ಸಂತನ ದೃಷ್ಟಿ ಸತತ ಹರಿಯಲ್ಲಿರಬೇಕು ಎಂಬುದು ಪ್ರಸಂಗದ ನೀತಿ. ಸಾಮಾನ್ಯ ಸ್ತ್ರೀಯರೂ ಇತಿಹಾಸದಲ್ಲಿ ಸಂತ, ಮಹಾಂತರ ಜ್ಞಾನೋದಯಕ್ಕೆ ಕಾರಣರಾಗಿದ್ದಾರೆ ಎಂಬುದು ತಾತ್ಪರ್ಯ.

 

Leave a Reply

Your email address will not be published. Required fields are marked *

Back To Top