Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ನಿಂದಕರು ಇರಬೇಕು ಊರಿನಲಿ

Thursday, 12.07.2018, 3:02 AM       No Comments

| ಗಂಗಾವತಿ ಪ್ರಾಣೇಶ್​(ಕಥಾಕಾಲ)

ನಾಮ ಸ್ಮರಣೆ ಪ್ರೇಮಿಯಾಗಿದ್ದ ಸಂತನು ದಾರಿಯಲ್ಲಿ ಬರುವಾಗ ದುಷ್ಟ ವ್ಯಕ್ತಿಯೊಬ್ಬ ಅವನನ್ನು ನಿಂದಿಸುತ್ತ ಹಿಂಬಾಲಿಸಿದ. ಬಹಳ ದೂರ ನಡೆದ ಬಳಿಕ ಸಂತ ಒಂದೆಡೆ ನಿಂತ. ‘ಮಿತ್ರನೇ, ನನ್ನ ಬಗ್ಗೆ ಏನೆಲ್ಲ ಹೇಳಬೇಕೋ ಅದನ್ನೆಲ್ಲ ಇಲ್ಲೇ, ಈಗಲೇ ಹೇಳಿಬಿಡು. ನೋಡು ಆ ಮುಂದಿನ ಮನೆಯವರು ನನ್ನ ಮೇಲೆ ಬಹಳ ಅಭಿಮಾನ ಉಳ್ಳವರು. ಅವರು ನಿನ್ನ ಬೈಗಳ ಕೇಳಿದರೆ ನಿನ್ನನ್ನು ಹಿಂಸಿಸಬಹುದು’ ಎಂದ ಸಂತ. ಅವರ ಸ್ವರದಲಿ ಕರುಣೆ ಇತ್ತು. ಸಂತನ ಕ್ಷಮಾ ಗುಣ ಕಂಡ ದುಷ್ಟನು ಲಜ್ಜಿತನಾದ. ಅವನು ತನ್ನ ಚಾಳಿಯನ್ನು ಅಂದಿನಿಂದಲೇ ಬಿಟ್ಟ. ನಮಗೆ ಎಷ್ಟೇ ಕೆಟ್ಟವರು ಸಿಗಲಿ, ನಿಂದಕರು ಎದುರಾಗಲಿ, ನಮ್ಮ ತನವನ್ನು ಎಂದೂ ಬಿಡಬಾರದು. ನಮ್ಮ ಸಾತ್ವಿಕತೆ ದುಷ್ಟರನ್ನೂ ಪರಿವರ್ತನೆ ಮಾಡುವ ಮಟ್ಟಕ್ಕೆ ಇರಬೇಕು ಎಂಬುದು ಇದರ ಒಟ್ಟಾರೆ ಸಾರ.

Leave a Reply

Your email address will not be published. Required fields are marked *

Back To Top