Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಪ್ರತೀಕಾರವನ್ನು ಇತಿಹಾಸ ಸ್ಮರಿಸದು

Monday, 02.07.2018, 3:03 AM       No Comments

ಹಿಂಸೆಯ ಸಾಕಾರ ಮೂರ್ತಿಯಾಗಿದ್ದ, ರಾಮನ ಪರಮ ಭಕ್ತರಾಗಿದ್ದ ಗಾಂಧಿ ಗುಂಡೇಟಿಗೆ ಬಲಿಯಾದಾಗ ಹೇಳಿದ ಕಡೇ ವಾಣಿ ‘ಹೇ ರಾಮ್ ದ್ವೇ?’ ಹತ್ಯೆ ಮಾಡಿದವನ ವಿರುದ್ಧ ಪ್ರತಿಭಟಿಸದೇ ಆ ಗುಂಡಿನಲ್ಲೂ ರಾಮನನ್ನೇ ಕಂಡರು. ಭಗವಾನ್ ಬುದ್ಧನು ತನ್ನ ಮೇಲೆ ಕೈ ಮಾಡಲು ಬಂದ ಅಂಗಲೀಮಾಲಾ ಎಂಬ ದರೋಡೆಕೋರನನ್ನು ಪರಿವರ್ತಿಸಿ ಭಿಕ್ಷುವನ್ನಾಗಿಸಿದ. ಕಳಿಂಗ ಯುದ್ಧದಲ್ಲಿ ಅದ್ಭುತ ಜಯ ಸಂಪಾದನೆ ಮಾಡಿದ ಸಾಮ್ರಾಟ ಅಶೋಕ ತನ್ನ ಅಪರಾಧ, ಹಿಂಸೆಯನ್ನು ತಿಳಿದು ಪಶ್ಚಾತ್ತಾಪ ಪಟ್ಟ. ಕಡೆಗೆ ಖಡ್ಗ ಬಿಸಾಕಿ ಅಹಿಂಸಾವ್ರತ ಕೈಗೊಂಡ. ತನ್ನ ಮಕ್ಕಳನ್ನೂ ಧರ್ಮ ಮತ್ತು ಶಾಂತಿ ಪ್ರಚಾರಕರನ್ನಾಗಿ ಮಾಡಿದ. ಆಚಾರ್ಯ ವಿನೋಬಾ ಅನೇಕಾನೇಕ ದರೋಡೆಕೋರರನ್ನು ಅಹಿಂಸಾಬಲದ ಪ್ರೇಮದಿಂದ ಪರಿವರ್ತನೆಗೊಳಿಸಿದರು. ನನ್ನ ಹಿಂದೆ ನಿಂದಿಸುವವರೇ ಎನ್ನ ಬಂಧುಬಳಗ ಎಂದರು ಪುರಂದರದಾಸರು. ನೀರೂ, ಸಾಬೂನೂ ಇಲ್ಲದೇ ನನ್ನನ್ನು ಶುದ್ಧಗೊಳಿಸುವ ಧೋಬಿಗಳೇ ನಿಂದಕರು ಎಂದರು ಸಂತ ಕಬೀರದಾಸ್. ಈಗ ಹೇಳಿ. ನಾವು ನಿತ್ಯವೂ ಮಾಡುವ ದ್ವೇಷ, ಅಸೂಯೆ, ಹಗೆತನ ಶಾಶ್ವತವೇ? ಕೊಂದ ವೈರಿ ಮನೆಗೆ ನಡೆದು ಹೋಗಲೆಬೇಕು. ಮೋಸ ಮಾಡುವವನ ಹೆಸರನ್ನು ಮಗನಿಗೆ ಇಡಬೇಕು ಎಂದವರೆಲ್ಲ ಮಹಾತ್ಮರಾದರು. ಪ್ರತೀಕಾರ ತೀರಿಸುವವರನ್ನು ಇತಿಹಾಸ ಎಂದೂ ನೆನೆಯದು. ನಾವು ಯಾವ ಪಟ್ಟಿಗೆ ಸೇರಬೇಕೆಂದು ಈಗಲೇ ನಿಶ್ಚಯಿಸಬೇಕು.

Leave a Reply

Your email address will not be published. Required fields are marked *

Back To Top