Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಕರ್ನಾಟಕದ ಋಣವನ್ನು ಎಂದಿಗೂ ತೀರಿಸಲಾಗದು

Saturday, 11.08.2018, 3:03 AM       No Comments

ಬೆಂಗಳೂರು: ಟಿಬೆಟ್ ಪ್ರಜೆಗಳನ್ನು ಚೀನಾ ಗಡಿಪಾರು ಮಾಡಿದಾಗ ನಮಗೆ ಆಶ್ರಯ ನೀಡಿದ ಕರ್ನಾಟಕಕ್ಕೆ ನಾವೆಷ್ಟು ಧನ್ಯವಾದ ಹೇಳಿದರೂ ಇಲ್ಲಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ಬೌದ್ಧಗುರು ದಲೈಲಾಮ ಹೇಳಿದ್ದಾರೆ.

ಕೇಂದ್ರ ಟಿಬೆಟಿಯನ್ ಆಡಳಿತ ಸಂಸ್ಥೆಯು ಶುಕ್ರವಾರ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ‘ಧನ್ಯವಾದಗಳು ಕರ್ನಾಟಕ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಚೀನಾ ನಮ್ಮನ್ನು ಗಡಿಪಾರು ಮಾಡಿದಾಗ ಅಂದಿನ ಪ್ರಧಾನಿ ನೆಹರು ಮತ್ತು ರಾಜ್ಯದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಮೈಸೂರು, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳ ನೀಡಿದರು. ಇದರಿಂದ ನಮ್ಮ ಸಮುದಾಯ ಅಲ್ಲಿ ಜೀವನ ನಡೆಸುವಂತಾಯಿತು ಎಂದು ಸ್ಮರಿಸಿದರು.

ಧಾರ್ವಿುಕ ಸಾಮರಸ್ಯ ಕಾಪಾಡಲು ಪ್ರಾಚೀನ ಭಾರತದಲ್ಲಿದ್ದ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ವಿಶ್ವದಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಹಕ್ಕು. ಎಲ್ಲರೂ ಏಕತೆಯಲ್ಲಿ ವಿವಿಧತೆ ಕಾಣುವಂತಾಗಬೇಕು. ತಂತ್ರಜ್ಞಾನದಿಂದಲೇ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದು ಸುಳ್ಳು. ಭಾವನಾತ್ಮಕ ಸಮಸ್ಯೆಗಳಿಗೆ ತಂತ್ರಜ್ಞಾನದಿಂದ ಪರಿಹಾರ ದೊರೆಯುವುದಿಲ್ಲ. ಸಾವಿರ ವರ್ಷಗಳ ಹಿಂದಿನ ಸಂಪ್ರದಾಯಗಳಲ್ಲಿ ಇವಕ್ಕೆ ಪರಿಹಾರವಿದೆ ಎಂಬುದನ್ನು ನಾವು ಅರಿಯಬೇಕು ಎಂದರು.

ಸಹಕಾರ ನಿರಂತರ: ಅಂದು ನಿಜಲಿಂಗಪ್ಪ ಸ್ವಾಗತ ನೀಡಿದ ಕಾರಣ ಟಿಬೆಟಿಯನ್ನರು ರಾಜ್ಯದಲ್ಲಿ ನೆಲೆ ನಿಂತರು. ನಮ್ಮ ಸಹಕಾರವೂ ಇದೇ ರೀತಿ ಮುಂದುವರಿಯಲಿದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಕೇಂದ್ರ ಟಿಬೆಟಿಯನ್ ಆಡಳಿತ ಮಂಡಳಿ ದಕ್ಷಿಣ ವಲಯದ ಮುಖ್ಯ ಪ್ರತಿನಿಧಿ ಚೋಪೆಲ್ ಥುಪ್ತೆನ್ ಮಾತನಾಡಿ, ಭಾರತ ಮತ್ತು ಕರ್ನಾಟಕದಂತಹ ರಾಜ್ಯಗಳ ಕರುಣೆಯಿಂದ ಟಿಬೆಟಿಯನ್ ಜೀವನಶೈಲಿ, ಅನನ್ಯ ಸಾಂಸ್ಕೃತಿಕ, ಧಾರ್ವಿುಕ ಮತ್ತು ಭಾಷಾ ಸಂಪ್ರದಾಯಗಳನ್ನು ಸಂರಕ್ಷಿಸಲಾಗಿದೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಕೇಂದ್ರ ಟಿಬೆಟಿಯನ್ ಆಡಳಿತ ಸಂಸ್ಥೆ ಅಧ್ಯಕ್ಷ ಡಾ. ಲೋಬ್ಸಾಂಗ್ ಮತ್ತಿತರರಿದ್ದರು.


ಹೇಳಿಕೆಗೆ ಕ್ಷಮೆಯಾಚನೆ

ಬೆಂಗಳೂರು: ಭಾರತದ ಮೊದಲ ಪ್ರಧಾನಿ ಜಿನ್ನಾ ಆಗಲಿ ಎಂದು ಗಾಂಧೀಜಿ ಬಯಸಿದ್ದರು. ಆದರೆ, ಜವಾಹರಲಾಲ್ ನೆಹರು ಇದಕ್ಕೆ ಒಪ್ಪಲಿಲ್ಲ ಎಂಬ ಹೇಳಿಕೆ ತೀವ್ರ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಬೌದ್ಧ್ದ ಧರ್ಮ ಗುರು ದಲೈ ಲಾಮಾ ಕ್ಷಮೆಯಾಚಿಸಿದ್ದಾರೆ. ನಗರದಲ್ಲಿ ನಡೆದ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಣಜಿಯಲ್ಲಿ ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸುವುದಾಗಿ ಹೇಳಿದರು. ದೇಶ ವಿಭಜನೆ ತಡೆಗೆ ಭಾರತದ ಮೊದಲ ಪ್ರಧಾನಿ ಜಿನ್ನಾ ಆಗಲಿ ಎಂದು ಗಾಂಧೀಜಿ ಬಯಸಿದ್ದರು. ಆದರೆ, ನೆಹರು ಅವರಿಗೆ ಭಾರತದ ಮೊದಲ ಪ್ರಧಾನಿ ಆಗಬೇಕು ಎಂಬ ಸ್ವಾರ್ಥವಿತ್ತು. ಹೀಗಾಗಿ ಅವರು ಗಾಂಧೀಜಿ ಸಲಹೆಯನ್ನು ತಿರಸ್ಕರಿಸಿದರು ಎಂದು ದಲೈಲಾಮಾ ಪಣಜಿಯಲ್ಲಿ ಹೇಳಿದ್ದರು.

ನಮ್ಮ ಸಂಸ್ಕೃತಿಯ ಮೂಲ ನಳಂದ ವಿಶ್ವವಿದ್ಯಾಲಯ. ಅಹಿಂಸೆ, ಕರುಣೆ ಇದು ಭಾರತೀಯ ಸಂಸ್ಕೃತಿ. ಇದನ್ನು ಟಿಬೆಟಿಯನ್ನರು ಮರಳಿ ಭಾರತಕ್ಕೆ ನೀಡಬೇಕಾಗಿದೆ.

| ದಲೈ ಲಾಮಾ ಟಿಬೆಟಿಯನ್ ಧರ್ಮಗುರು

Leave a Reply

Your email address will not be published. Required fields are marked *

Back To Top