Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ಭರ್ಜರಿ ಭಾಗ್ಯಗಳಲ್ಲಿ ಮಿಂದೆದ್ದ ರಾಜ್ಯದ ಜನತೆ

Wednesday, 14.02.2018, 3:04 AM       No Comments

| ಶಿವಾನಂದ ತಗಡೂರು

ಬೆಂಗಳೂರು: ಅಧಿಕಾರಕ್ಕೆ ಬಂದ ಮೊದಲ ದಿನದಿಂದ, ಈವರೆಗೆ ನಿರಂತರವಾಗಿ ಒಂದಿಲ್ಲೊಂದು ಭಾಗ್ಯ ದಯಪಾಲಿಸಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರದ ಹೆಗ್ಗಳಿಕೆ. ಇಷ್ಟೊಂದು ಜನಪ್ರಿಯ ಭಾಗ್ಯಗಳ ಯೋಜನೆಗಳು ಹಿಂದೆಂದೂ ಬಂದಿದ್ದಿಲ್ಲ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಶೇ.90 ಭರವಸೆಯನ್ನು ಈಡೇರಿಸಲಾಗಿದೆ. ಬಜೆಟ್​ನಲ್ಲಿ ಘೋಷಿಸಿದ ಬಹುತೇಕ ಯೋಜನೆಗಳು ಜಾರಿಗೆ ಬಂದಿವೆ. ಆದರೆ ಬಹುತೇಕ ಯೋಜನೆಗಳು ಪೂರ್ವಾಪರ ಚಿಂತನೆ ಇಲ್ಲದೇ ಆರಂಭಿಸಿದ್ದರಿಂದಾಗಿ ಕುಂಟುತ್ತ ಸಾಗುತ್ತಿವೆ.

ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಅಧಿಕಾರ ಸೂತ್ರ ಹಿಡಿದ ಸಿದ್ದರಾಮಯ್ಯ ನಿರಂತರವಾಗಿ ಜನಪರ ಯೋಜನೆಗಳ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಇದರ ಪರಿಣಾಮವೇ ಆಡಳಿತ ಯಂತ್ರ ತಕ್ಕ ಬಿಗಿ ಬರಲಿಲ್ಲ.

ಅನ್ನಭಾಗ್ಯ: ಮಹತ್ವದ ಯೋಜನೆಗಳಲ್ಲಿ ಅಗ್ರ ಸ್ಥಾನ ಪಡೆದಿದ್ದು ಅನ್ನಭಾಗ್ಯ ಯೋಜನೆ. ಹಸಿವು ಮುಕ್ತ ಕರ್ನಾಟಕ ಕನಸು ಕಂಡ ಸಿಎಂ, ಅಧಿಕಾರ ಸ್ವೀಕರಿಸಿದ ದಿನವೇ 1 ರೂ.ಗೆ 1 ಕೆ.ಜಿ.ಅಕ್ಕಿ ನೀಡಿದರು. ನಂತರ ಉಚಿತವಾಗಿ ಕೊಡುತ್ತಿದ್ದಾರೆ. 3.5 ಕೋಟಿ ಜನ ಯೋಜನೆ ಫಲಾನುಭವಿಗಳಾಗಿದ್ದಾರೆ.

ಕ್ಷೀರಭಾಗ್ಯ: ಶಾಲಾ ಮಕ್ಕಳಿಗಾಗಿ ಜಾರಿಗೆ ತಂದ ಕ್ಷೀರಭಾಗ್ಯ ಯೋಜನೆ 3 ರಿಂದ 5 ದಿನಕ್ಕೆ ವಿಸ್ತರಣೆಯಾಗಿದೆ. ಅಂಗನವಾಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 1.4 ಕೋಟಿ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಕ್ಷೀರಭಾಗ್ಯಕ್ಕೆ 800 ಕೋಟಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವಾಗಿ 1200 ಕೋಟಿ ರೂ. ಸೇರಿ ಸರ್ಕಾರ 2 ಸಾವಿರ ಕೋಟಿ ನೆರವು ನೀಡುತ್ತಿದೆ.

ಸಾಲ ಮನ್ನಾ: ಸತತ ಬರದಿಂದ ಸಂಕಷ್ಟಕ್ಕೀಡಾಗಿದ್ದ ಅನ್ನದಾತರ ನೆರವಿಗೆ ಧಾವಿಸಿದ ಸರ್ಕಾರ, ಕೃಷಿ ಪತ್ತಿನ ಸಹಕಾರಿ ಬ್ಯಾಂಕ್​ಗಳಲ್ಲಿ ರೈತರು ಮಾಡಿಕೊಂಡಿದ್ದ ಸಾಲದಲ್ಲಿ 50 ಸಾವಿರ ಸಾಲದ ಹೊರೆ ಕಡಿಮೆ ಮಾಡಿದೆ. 22,27,506 ರೈತರು ಫಲಾನುಭವಿಗಳಾಗಿದ್ದು, ಸಾಲ ಮನ್ನಾದಿಂದ ಸರ್ಕಾರಕ್ಕೆ 8165 ಕೋಟಿ ರೂ. ಹೊರೆ ಬಿದ್ದಿದೆ.

ಶುದ್ಧ ಕುಡಿವ ನೀರಿನ ಘಟಕ

ಜನರಿಗೆ ಶುದ್ದ ಕುಡಿವ ನೀರೊದಗಿಸಲು, ಗ್ರಾಮೀಣ ಪ್ರದೇಶಗಳಲ್ಲಿ 9500 ಕುಡಿವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿ ಮನೆಗೂ ಶೌಚಾಲಯ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ನೆರವು ನೀಡಿದೆ.

ನಿವಾಸಿಗರೇ ಹಕ್ಕುದಾರರು

ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುವ ಮೂಲಕ ವಾರಸುದಾರನ್ನೇ ಮಾಲೀಕರನ್ನಾಗಿ ಮಾಡಲಾಗಿದೆ. 5 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಿದೆ. ಐತಿಹಾಸಿಕ ಕಾಯಿದೆಗಳು ಎಸ್​ಸಿಎಸ್​ಟಿ ಮತ್ತು ಟಿಎಎಸ್​ಪಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡುವ ಐತಿಹಾಸಿಕ ಕಾಯಿದೆಯನ್ನು ರಾಷ್ಟ್ರಕ್ಕೆ ಮಾದರಿಯಾಗಿ ಜಾರಿಗೆ ತರಲಾಗಿದೆ. ಇದರಿಂದಾಗಿ ಆ ಸಮುದಾಯಕ್ಕೆ ಶೇ.24.1 ಹಣ ಅಂದರೆ ಸುಮಾರು 86 ಸಾವಿರ ಕೋಟಿ ರೂ ಹಣ ಖರ್ಚಾಗಲಿದೆ. ಎಸ್​ಸಿಪಿ ಮತ್ತು ಟಿಎಸ್​ಪಿ ಸಮುದಾಯಕ್ಕೆ 50 ಲಕ್ಷ ರೂ.ವರೆಗಿನ ಕಾಮಗಾರಿಗಳಲ್ಲಿ ಶೇ.24.1 ಮೀಸಲು ಮಾಡಿರುವುದು ಕೂಡ ಮಹತ್ವದ ನಿರ್ಣಯ. ಜಯಂತಿಗಳಿಗೆ ಚಾಲನೆ ಟಿಪು್ಪ, ಅಂಬಿಗರ ಚೌಡಯ್ಯ, ಹೇಮರೆಡ್ಡಿ ಮಲ್ಲಮ್ಮ, ಕೇಂಪೇಗೌಡ, ಅಕ್ಕಮಹಾದೇವಿ ಜಯಂತಿಗಳನ್ನು ಆಚರಣೆಗೆ ತರಲಾಗಿದೆ. ಎಲ್ಲ ಸರ್ಕಾರಿ ಕಚೇರಿಯಲ್ಲೂ ಬಸವಣ್ಣನ ಭಾವಚಿತ್ರ ಹಾಕುವಂತೆ ಸೂಚಿಸಲಾಗಿದೆ.

ಇಂದಿರಾ ಕ್ಯಾಂಟೀನ್

ಬಿಬಿಎಂಪಿಯ 198 ವಾರ್ಡ್​ಗಳಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಕ್ರಮ ಕೈಗೊಂಡ ಸರ್ಕಾರ ಈಗ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಿಗೂ ಯೋಜನೆ ವಿಸ್ತರಿಸಿದೆ.

ವಿದ್ಯಾಸಿರಿ: ವಿದ್ಯಾಸಿರಿ ಯೋಜನೆ ಅಡಿ ಹಾಸ್ಟೆಲ್ ವಂಚಿತ 2.7 ಲಕ್ಷ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಸಲು ಅನುಕೂಲವಾಗುವಂತೆ ವಾರ್ಷಿಕ 15 ಸಾವಿರ ರೂ. ನೀಡಲಾಗುತ್ತಿದೆ. ನಾನಾ ರೀತಿ ಸ್ಕಾಲರ್​ಶಿಪ್ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 63 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ನೀಡುತ್ತಿದೆ. 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, 54 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಲಾಗಿದೆ.

ಕೃಷಿ ಭಾಗ್ಯ: ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬೆಲೆಗೆ ಬಾಡಿಗೆ ನೀಡಲಾಗುತ್ತಿದೆ. ಶೂನ್ಯ ಮತ್ತು ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲಾಗುತ್ತಿದೆ. ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ನಾನಾ ಯೋಜನೆಗಳಿಂದ 1 ಕೋಟಿಗೂ ಹೆಚ್ಚು ಜನರು ಫಲಾನುಭವಿಗಳಾಗಿದ್ದಾರೆ. ಎಪಿಎಂಸಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

ಆರೋಗ್ಯ ಭಾಗ್ಯ: ರಾಜೀವ್ ಆರೋಗ್ಯ ಭಾಗ್ಯ ಮತ್ತು ಯಶಸ್ವಿನಿ ಯೋಜನೆ ಮೂಲಕ ಸರ್ಕಾರ ವಿಮೆ ಒದಗಿಸುತ್ತಿದೆ. 33 ಲಕ್ಷ ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ ಸದಸ್ಯರನ್ನು ಉಚಿತವಾಗಿ ನೋಂದಣಿ ಮಾಡಲಾಗಿದೆ. ಯಶಸ್ವಿನಿ ಯೋಜನೆಯಲ್ಲಿ 93 ಲಕ್ಷ ಜನರು ನೋಂದಾಯಿಸಿ ಕೊಂಡಿದ್ದು, 555 ಕೋಟಿ ರೂ.ಗಳನ್ನು ಸರ್ಕಾರವೇ ಚಿಕಿತ್ಸೆಗಾಗಿ ನೀಡಿದೆ. ಪತ್ರಕರ್ತರಿಗೂ ಈ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸ ಲಾಗಿದೆ.

ಋಣಮುಕ್ತ ಭಾಗ್ಯ: ಸಿಎಂ ಸಿದ್ದರಾಮಯ್ಯ ಅವರ ಋಣಮುಕ್ತ ಯೋಜನೆಯಿಂದಾಗಿ 5 ಲಕ್ಷಗಳಷ್ಟು ಹಿಂದುಳಿದ ವರ್ಗಗಳ ಫಲಾನುಭವಿಗಳು ಪಡೆದುಕೊಂಡಿದ್ದ 514 ಕೋಟಿ ರೂ. ಸಾಲ ಮನ್ನಾ ಆಗಿದೆ.

ಶಾದಿ ಭಾಗ್ಯ: ಅಲ್ಪಸಂಖ್ಯಾತರಿಗಾಗಿ ಜಾರಿಗೆ ತಂದ ಶಾದಿ ಭಾಗ್ಯಕ್ಕೆ 50 ಸಾವಿರ ರೂ. ತನಕ ನೆರವು ನೀಡಲಾಗುತ್ತಿದ್ದು, 66,010 ಫಲಾನುಭವಿಗಳಾಗಿದ್ದಾರೆ. 2013-14ರಲ್ಲಿ 10.46 ಕೋಟಿ ರೂ. ನೀಡಿದ್ದ ಸರ್ಕಾರ ಈಗ ಪ್ರಸಕ್ತ ವರ್ಷ 159.26 ಕೋಟಿ ರೂ. ಅನುದಾನ ನೀಡುತ್ತಿದೆ.

ವಸತಿ ಭಾಗ್ಯ: ರಾಜ್ಯದಲ್ಲಿ ಎಲ್ಲರಿಗೂ ಸೂರು ಒದಗಿಸಲು 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದ ಸರ್ಕಾರ, ಸದ್ಯ 11 ಲಕ್ಷ ಮನೆ ನಿರ್ಮಾಣ ಪೂರ್ಣಗೊಳಿಸಿ ಬಡ ಫಲಾನುಭವಿಗಳಿಗೆ ಸೂರುಭಾಗ್ಯ ನೀಡಿದೆ. ಆಶ್ರಯ ಯೋಜನೆಯಡಿ ನೀಡಲಾಗಿದ್ದ 2488 ಕೋಟಿ ರೂ. ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಿದೆ. 2 ಲಕ್ಷ ಜನರಿಗೆ ನಿವೇಶನ ಕರುಣಿಸಿದೆ. 75 ಲಕ್ಷ ಜನ ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಮಾತೃಪೂರ್ಣ ಯೋಜನೆ

ಮಕ್ಕಳ ಅಪೌಷ್ಠಿಕತೆ ತಡೆಯಲು ಗರ್ಭಿಣಿಯರಿಗೆ ಮಧ್ಯಾಹ್ನ ಬಿಸಿಯೂಟ ನೀಡಲು ಯೋಜನೆ ಜಾರಿಗೆ ತಂದಿದೆ. ಆದರೆ ಈ ಯೋಜನೆ ಕುಂಟುತ್ತಾ ಸಾಗಿದೆ.

Leave a Reply

Your email address will not be published. Required fields are marked *

Back To Top