Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಮುಕ್ತ ವಿವಿ ಕೊನೆಗೂ ಬಂಧಮುಕ್ತ

Friday, 10.08.2018, 3:03 AM       No Comments

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕೊನೆಗೂ ಮಾನ್ಯತೆ ಭಾಗ್ಯ ದೊರೆತಿದೆ. ಇದರಿಂದಾಗಿ ಮೂರು ವರ್ಷಗಳಿಂದ ಮಾನ್ಯತೆಯ ‘ಬಂಧನ’ಕ್ಕೊಳಗಾಗಿ ಸ್ತಬ್ಧಗೊಂಡಿದ್ದ ಮುಕ್ತ ವಿವಿ ಮತ್ತೆ ಕಾರ್ಯಾರಂಭ ಮಾಡಲಿದೆ.

ಮುಕ್ತ ವಿವಿ 2018-19ರಿಂದ 2022-23ರವರೆಗೆ ತಾಂತ್ರಿಕೇತರ ಕೋರ್ಸ್​ಗಳಿಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಮಾನ್ಯತೆಯನ್ನು ನವೀಕರಣ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಒಂದೇ ಸಲಕ್ಕೆ ಐದು ವರ್ಷ ಮಾನ್ಯತೆಯನ್ನು ಕರುಣಿಸಿ ಮಹತ್ವದ ಆದೇಶ ನೀಡಿದೆ. ಈ ಮೂಲಕ ಮುಕ್ತ ವಿವಿಗೆ ಹಿಡಿದಿದ್ದ ಗ್ರಹಣ ಬಿಟ್ಟು, ಶುಕ್ರದೆಸೆ ಪ್ರಾರಂಭವಾಗಿದೆ.

ವಿಶ್ವವಿದ್ಯಾಲಯದ 17 ಇನ್​ಹೌಸ್ ಕೋರ್ಸ್ ಗಳಿಗೆ ಮಾತ್ರ ಮಾನ್ಯತೆ ನೀಡಿದೆ. ಇವುಗಳು 2009-10ನೇ ಸಾಲಿನಲ್ಲಿದ್ದವು. ಆದರೆ, ಮಾನ್ಯತೆಗೆ ಕಾರಣವೊಂದಾಗಿದ್ದ ಅನ್ಯ ಶಿಕ್ಷಣ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದ ಕೋರ್ಸ್​ಗಳಿಗೆ ಮಾನ್ಯತೆಯ ಮುದ್ರೆ ಒತ್ತಿಲ್ಲ.

ಈಗ ಮಾನ್ಯತೆ ನವೀಕರಣವಾಗಿರುವುದರಿಂದ ಹೊಸ ವಿದ್ಯಾರ್ಥಿಗಳ ಪ್ರವೇಶಾತಿಗೆ ಮುಕ್ತ ವಿವಿಗೆ ಅವಕಾಶ ದೊರೆಯಲಿದೆ. ಆದರೆ, 3 ಲಕ್ಷದಷ್ಟು ಇರುವ ಹಳೇ ವಿದ್ಯಾರ್ಥಿಗಳ ಗತಿ ಏನು ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.

ಹಳೆಯ ಕಥೆ ಏನು?

ರಾಜ್ಯದ ವ್ಯಾಪ್ತಿಯಿಂದಾಚೆಗೆ ಶೈಕ್ಷಣಿಕ ಸೇವೆ ನೀಡಬಾರದು, ಖಾಸಗಿ ಶೈಕ್ಷಣಿಕ ಸಂಸ್ಥೆ ಜತೆ ಒಡಬಂಡಿಕೆ ಮಾಡಿಕೊಳ್ಳಕೂಡದು ಎಂಬ ಯುಜಿಸಿ ನಿಯಮ ಉಲ್ಲಂಘನೆಯಿಂದ ಮುಕ್ತ ವಿವಿ ಮಾನ್ಯತೆ ರದ್ದಾಗಿತ್ತು. ಈ ಕುರಿತು 2015ರ ಜೂ.16ರಂದು ಯುಜಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಹೀಗಾಗಿ, 2012ರಿಂದ ಪೂರ್ವಾನ್ವಯವಾಗಿ ಎಲ್ಲ ಕೋರ್ಸ್​ಗಳಿಗೆ ಮಾನ್ಯತೆ ನವೀಕರಣಗೊಂಡಿಲ್ಲ.

ಅರ್ಧ ಗೆಲುವು ಮಾತ್ರ

ಇದು ಮುಕ್ತ ವಿವಿ ಪಾಲಿಗೆ ಅರ್ಧ ಗೆಲುವು ಮಾತ್ರ. ಇದರಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಮತಿ ದೊರೆಯಲಿದೆ. ಆದರೆ, 2012ರಿಂದ ಕಲಿತ ವಿದ್ಯಾರ್ಥಿಗಳ ಗತಿ ಏನು? ಅವರ ಕೋರ್ಸ್​ಗಳಿಗೆ ಮಾನ್ಯತೆ ನೀಡಲು ಇನ್ನು ಯುಜಿಸಿ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಲಕ್ಷಾಂತರ ಭವಿಷ್ಯ ಇನ್ನು ಅತಂತ್ರ ಸ್ಥಿತಿಯಲ್ಲಿಯೇ ಮುಂದುವರಿದಿದೆ. ಈ ನಿಟ್ಟಿನಲ್ಲಿ ಮುಕ್ತ ವಿವಿ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕು.

ಮಾನ್ಯತೆಯುಳ್ಳ ಕೋರ್ಸ್​ಗಳು

ಸ್ನಾತಕ ಪದವಿಯಲ್ಲಿ ಬಿಎ, ಬಿಕಾಂ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ. ಸ್ನಾತಕೋತ್ತರ ಪದವಿಯಲ್ಲಿ ಪುರಾತತ್ವ ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್, ಹಿಂದಿ, ಇತಿಹಾಸ, ಪತ್ರಿಕೋದ್ಯಮ, ಕನ್ನಡ, ರಾಜಕೀಯ ಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ವಾಣಿಜ್ಯಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪರಿಸರ ವಿಜ್ಞಾನ.

ಸಮಸ್ಯೆ ಇನ್ನೂ ಬಗೆಹರಿದಿಲ್ಲ

ಈಗಾಗಲೇ ತೇರ್ಗಡೆಯಾಗಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ, ಅನ್ಯಕೋರ್ಸ್ ಪ್ರವೇಶಕ್ಕೂ ಈ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿಲ್ಲ. ಒಟ್ಟಿನಲ್ಲಿ ಇವರ ಭವಿಷ್ಯಕ್ಕೆ ಕತ್ತಲು ಕವಿದಿದೆ.

Leave a Reply

Your email address will not be published. Required fields are marked *

Back To Top