Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಪ್ರಧಾನಿ ಬಗ್ಗೆ ಹೀಗಾ ಮಾತನಾಡುವುದು, ಸಚಿವ ರೋಷನ್ ಬೇಗ್ ?

Friday, 13.10.2017, 2:05 PM       No Comments

ಬೆಂಗಳೂರು: ಮೂಲಸೌಕರ್ಯ, ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್​ ಸಚಿವ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನ ಉಯೋಗಿಸಿ ಮಾತನಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಇದಕ್ಕೆ ಖಂಡನೆ ವ್ಯಕ್ತಪಡಿಸಿರುವ ಮಾಜಿ ಎಮ್​ಎಲ್​ಸಿ ಅಶ್ವತ್ಥ ನಾರಾಯಣ್​ ಸಿಎಂ ಸಿದ್ದರಾಮಯ್ಯ ಬೇಗ್​ ಅವರನ್ನ ಕೂಡಲೇ ವಜಾ ಮಾಡಬೇಕು ಎಂದಿದ್ದಾರೆ.

ಸಭೆಯೊಂದರಲ್ಲಿ ಮಾತನಾಡುತ್ತಾ ಸಚಿವ ರೋಷನ್​ ಬೇಗ್​ ಸ್ವಲ್ಪ ಜನ ನಂಬೋದಿಲ್ಲ, ನಮ್ಮ ಪ್ರಧಾನಿ ಮೋದಿ ಅಂತಾ… ನೋಟ್ ಬ್ಯಾನ್​​​ನಲ್ಲಿ 500 ರೂಪಾಯಿ ಕ್ಯಾನ್ಸಲ್ ಮಾಡು… 1000 ರೂಪಾಯಿ ಕ್ಯಾನ್ಸಲ್​ ಮಾಡು ಅಂತಾ ಅವರೇ ಹೇಳಿದ್ದು.. ಅದಕ್ಕೆ ಬಿಜೆಪಿಯವರೇ ಸೂ. ಮಗಾ. ಏನ್ ಮಾಡ್ಬಿಟ್ಟ ಅಂತಾ ಬೈಯ್ದುಕೊಳ್ತಿದ್ದಾರೆ ಎಂದು ತೀರಾ ಕೀಳು ಅಭಿರುಚಿಯ ಮಾತುಗಳನ್ನ ಆಡಿದ್ದಾರೆ.

ವಿಡಿಯೋ ನೋಡಿ:

ತಮ್ಮ ಮಾತನ್ನು ಮತ್ತೂ ಮುಂದುವರೆಸಿದ ಅವರು, ಆದರೆ ಕಾಂಗ್ರೆಸ್​​ನಲ್ಲಿ ಆ ಥರಾ ಬೈಯೋರಿಲ್ಲ. ಗುಜರಾತಿಯವರು, ಮಾರ್ವಾಡಿಯವರು ಯಾರೂ ಈ ಬಿಜೆಪಿಗೆ ಸಪೋರ್ಟ್​ ಮಾಡಲ್ಲ. ಅವರೇ ಬೈಯುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ಇಡೀ ಇಂಡಿಯಾಗೆ ಎಷ್ಟೋ ಗೌರವಯುತ ಕೆಲಸ ಮಾಡಿದೆ. ಇಂದಿರಾಗಾಂಧಿಯನ್ನ ಮರ್ಡರ್ ಮಾಡಿದ್ರು. ರಾಜೀವ್ ಗಾಂಧಿ ಲೈಫ್ ಸ್ಯಾಕ್ರಿಫೈಸ್ ಮಾಡಿದ್ರು. ಪಾಪ ಅವರ ಮಗನನ್ನ ಈ ಜನ ಬೈಯುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರದ ಪ್ರಧಾನಿಗಳ ವಿರುದ್ಧ ಸಚಿವರೇ ಈ ರೀತಿ ಮಾತನಾಡುವುದು ತೀರಾ ಅನಾರೋಗ್ಯಕರವಾದ ರಾಜಕೀಯ ಪರಿಸ್ಥಿತಿಯನ್ನ ಪ್ರತಿಬಿಂಬಿಸುತ್ತದೆ. ಕೇವಲ ಬಿಜೆಪಿ ಪಕ್ಷದಿಂದ ಅಷ್ಟೇ ಅಲ್ಲದೆ ಜನ ಸಾಮಾನ್ಯರಿಂದ ಕೂಡ ಈ ವರ್ತನೆಗೆ ವಿರೋಧ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top