Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಪೊಲೀಸರಿಗೆ ಇಪ್ಪತ್ತು ಲಕ್ಷ ರೂ. ವಿಮೆ

Saturday, 13.01.2018, 3:04 AM       No Comments

ಕೀರ್ತಿನಾರಾಯಣ ಸಿ. ಬೆಂಗಳೂರು

ವೇತನ, ಭತ್ಯೆ ಹೆಚ್ಚಳ ಸೇರಿದಂತೆ ರಾಜ್ಯ ಪೊಲೀಸರಿಗೆ ಹಲವಾರು ಭಾಗ್ಯ ಕರುಣಿಸಿರುವ ಸರ್ಕಾರವೀಗ ಕರ್ತವ್ಯದ ವೇಳೆ ಮೃತಪಡುವ ಸಿಬ್ಬಂದಿಗೆ 20 ಲಕ್ಷ ರೂ.ವಿಶೇಷ ಗುಂಪು ವಿಮೆ ಮೊತ್ತ ನೀಡಲು ತೀರ್ವನಿಸಿ ಆದೇಶ ಹೊರಡಿಸಿದೆ.

ಸದ್ಯ ಇಲಾಖೆಯಲ್ಲಿ 87,906 ಪೊಲೀಸರಿದ್ದು, ಈವರೆಗೆ 5 ಲಕ್ಷ ರೂ. ವಿಮೆ ನೀಡಲಾಗುತ್ತಿತ್ತು. ಇದೀಗ ನಿಯಮ ಬದಲಾಗಿದ್ದು, ಸಿಬ್ಬಂದಿ ಕರ್ತವ್ಯದ ಮೇಲಿ ರುವಾಗ ಆಕಸ್ಮಿಕ ಅಥವಾ ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ವಿಮಾ ಕಂಪನಿ ಮೂಲಕ 20 ಲಕ್ಷ ರೂ. ಪಾವತಿ ಮಾಡಲಾಗುತ್ತದೆ.ವಿಮಾ ಹಣ ನೀಡಲು 2017ರ ಅ.9ರಿಂದ 2018ರ ಅ.8ರ ಅವಧಿಯವರೆಗೆ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಜತೆ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ.

ಯಾರ್ಯಾರಿಗೆ ಸಿಗುತ್ತೆ?: ಅನುಯಾಯಿ, ಕಾನ್ಸ್​ಟೆಬಲ್, ಹೆಡ್ ಕಾನ್ಸ್​ಟೆಬಲ್, ಸಹಾಯಕ ಸಬ್ ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್ ಹಾಗೂ ಇನ್ಸ್​ಪೆಕ್ಟರ್​ಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ಆಂತರಿಕ ಭದ್ರತಾ ವಿಭಾಗದ ಅಧೀನದಲ್ಲಿರುವ ಎಲ್ಲ ಘಟಕಗಳ ಅಧಿಕಾರಿ ಹಾಗೂ ಸಿಬ್ಬಂದಿ ಸಹ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.

ತಿಂಗಳ 5ಕ್ಕೆ ವಿವರ ಸಲ್ಲಿಕೆ ಕಡ್ಡಾಯ

ಮೃತ ಅಧಿಕಾರಿ/ಸಿಬ್ಬಂದಿಯ ಮಾಹಿತಿಯನ್ನು ವಿಮಾ ಕಂಪನಿಗೆ ಸಲ್ಲಿಸದೆ ಘಟಕಾಧಿಕಾರಿಗಳು ವಿಳಂಬ ಮಾಡುತ್ತಿರುವುದು ಡಿಜಿಪಿ ನೀಲಮಣಿ ಎನ್.ರಾಜು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಡೆತ್ ಕ್ಲೈಂ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳ ಸಂಬಂಧ ಅಗತ್ಯ ದಾಖಲೆ ಸಲ್ಲಿಸಿ ಶೀಘ್ರ ಇತ್ಯರ್ಥಪಡಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವಿವರ ಹಾಗೂ ಈ ಬಗ್ಗೆ ವಿಮಾ ಕಂಪನಿಗೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಘಟಕವಾರು ವಿವರಗಳನ್ನು ಕಡ್ಡಾಯವಾಗಿ ಡಿಜಿಪಿ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ಮರಣ ಹೊಂದದಿರುವ ಸಂದರ್ಭದಲ್ಲಿ ಶೂನ್ಯ ವರದಿ ಸಹ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಪೊಲೀಸ್ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬ ಅನಾಥವಾಗುತ್ತದೆ. ಸಮಾಜದ ರಕ್ಷಣೆಗಾಗಿ ಜೀವತೆತ್ತವರ ಕುಟುಂಬಕ್ಕೆ 20 ಲಕ್ಷ ರೂ. ಗುಂಪು ವಿಮಾ ಮೊತ್ತ ಅನುಕೂಲವಾಗಲಿದೆ.

| ಉಮೇಶ್​ಕುಮಾರ್ ಐಜಿಪಿ (ಆಡಳಿತ)

 

ಯಾರಿಗೆ ಉಂಟು, ಇಲ್ಲ

ಸ್ವಾಭಾವಿಕ ಕಾಯಿಲೆಗಳಿಗೆ ತುತ್ತಾಗಿ ಮೃತಪಟ್ಟರೆ, ಹೃದಯಾಘಾತವಾದರೆ ಹಾಗೂ ಆತ್ಮಹತ್ಯೆ ಮಾಡಿಕೊಂಡರೆ ವಿಮೆ ಮೊತ್ತ ಸಿಗುವುದಿಲ್ಲ. ಕರ್ತವ್ಯದ ಮೇಲೆ ತೆರಳುವಾಗ ಅಪಘಾತವಾದರೆ, ಆರೋಪಿಗಳನ್ನು ಬಂಧಿಸಲು ಹೋದ ವೇಳೆ ಹಲ್ಲೆಗೊಳಗಾಗಿ ಮೃತಪಟ್ಟರೆ ಸೇರಿ ಆಕಸ್ಮಿಕ ಘಟನೆಯಲ್ಲಿ ಮೃತಪಟ್ಟರಷ್ಟೇ ಅವರ ಕುಟುಂಬಕ್ಕೆ ವಿಮೆ ಸಿಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನೆಲ್ಲ ವಿವರ ಸಲ್ಲಿಸಬೇಕು?

# ಅಧಿಕಾರಿ/ಸಿಬ್ಬಂದಿ ಮೃತಪಟ್ಟ ಬಗ್ಗೆ 7 ದಿನಗಳ ಒಳಗೆ ಮಾಹಿತಿ ನೀಡಬೇಕು.

# ಅರ್ಜಿದಾರ ಸಹಿ ಮಾಡಿರುವ ಇನ್ಶುರೆನ್ಸ್ ಕಂಪನಿಯ ಮೂಲ ಕ್ಲೇಂ ಫಾರಂ.

# ಮೃತ ನೌಕರನ ಸೇವಾ ವಿವರ ಬಗ್ಗೆ ಘಟಕಾಧಿಕಾರಿಯ ದೃಢೀಕರಣ ಪತ್ರ.

# ಸೇವಾ ಪುಸ್ತಕ ದೃಢೀಕೃತ ಪ್ರತಿ, ಪಿಂಚಣಿ ಮಂಜೂರು ಪ್ರತಿ, ಎನ್​ಪಿಎಸ್ ನಾಮನಿರ್ದೇಶನ ಪ್ರತಿ.

# ಎಫ್​ಐಆರ್, ಚಾರ್ಜ್​ಶೀಟ್, ಪಂಚನಾಮೆ/ಪತ್ರಿಕೆಯಲ್ಲಿ ಪ್ರಕಟವಾಗಿರುವ ದೃಢೀಕೃತ ಪ್ರತಿ.

# ಮರಣ ಪ್ರಮಾಣಪತ್ರದ ಮೂಲ ಪ್ರತಿ, ಶವಪರೀಕ್ಷಾ ವರದಿಯ ಪ್ರತಿ.

# ಉಪ ತಹಶೀಲ್ದಾರ್ ನೀಡಿರುವ ಕುಟುಂಬ ಜೀವಿತ ಸದಸ್ಯರ ವಿವರದ ಮೂಲ ಪತ್ರ.

# ಕ್ಲೇಮುದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್/ಪ್ಯಾನ್​ಕಾರ್ಡ್. ಬ್ಯಾಂಕ್ ಖಾತೆ ವಿವರ.

Leave a Reply

Your email address will not be published. Required fields are marked *

Back To Top