Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ಮೂರಂಕಿ ಆಟ, ಗೆದ್ರಷ್ಟೇ ಕಿರೀಟ

Saturday, 19.05.2018, 3:06 AM       No Comments

ಕರ್ನಾಟಕದ ರಾಜಕೀಯ ಚರಿತ್ರೆಗೆ ಶನಿವಾರ ಹೊಸ ಅಧ್ಯಾಯವೊಂದು ಸೇರ್ಪಡೆಯಾಗಲಿದೆ. ಶತಾಯಗತಾಯ ಬಿಜೆಪಿಗೆ ಅಧಿಕಾರ ತಪ್ಪಿಸಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್ – ಜೆಡಿಎಸ್ ತಂತ್ರಗಾರಿಕೆ ಒಂದೆಡೆ… ತಮ್ಮದೇ ಸರ್ಕಾರ, ತಮ್ಮದೇ ಅಧಿಕಾರ ಎಂದು ಸದನದಲ್ಲಿ ಬಹುಮತ ಸಾಬೀತು ಪಡಿಸಲು ಸಂಕಲ್ಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನೊಂದೆಡೆ… ಸುಪ್ರೀಂಕೋರ್ಟ್ ಆದೇಶದಂತೆ ಶನಿವಾರ ಸಂಜೆ 4 ಗಂಟೆಗೆ ನಿಗದಿಯಾಗಿರುವ ವಿಶ್ವಾಸಮತ ಹೋರಾಟದಲ್ಲಿ ಗೆಲುವು ಬಿಜೆಪಿಗೋ, ಕೈ-ದಳ ಮೈತ್ರಿಗೋ ಎನ್ನುವುದು ಸದ್ಯದ ಕುತೂಹಲ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ಹೊಸ ಹೊಸ ತಿರುವುಗಳು, ಮೂರೂ ಪಕ್ಷಗಳ ತಂತ್ರಗಾರಿಕೆಗಳು, ರಾಜಕೀಯ ಹಾಗೂ ನಾಟಕೀಯ ಸಾಧ್ಯಾಸಾಧ್ಯತೆಗಳ ಕುರಿತ ಸಮಗ್ರ ನೋಟ ಇಲ್ಲಿದೆ.

ಸದನದಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ಶೇ.100ರಷ್ಟಿದೆ. ನಮ್ಮ ಸರ್ಕಾರ ಮುಂದುವರಿಯಲಿದೆ, ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕೃಷಿ ಸಾಲ ಮನ್ನಾ, ನೇಕಾರರ ಸಾಲ ಮನ್ನಾ, ಭಾಗ್ಯಲಕ್ಷ್ಮೀ ಯೋಜನೆ ಮೊತ್ತ ಹೆಚ್ಚಳ, ಅಂಗವಿಕಲರ ಪಿಂಚಣಿ ಮೊತ್ತ ಹೆಚ್ಚಳದಂತಹ ಎಲ್ಲ ಭರವಸೆ ಈಡೇರಿಸಲಿದ್ದೇವೆ.

| ಯಡಿಯೂರಪ್ಪ ಸಿಎಂ

ಬೋಪಯ್ಯ ಸ್ಪೀಕರ್

ಬಿಜೆಪಿ ನಾಯಕ ಕೆ.ಜಿ. ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿದ್ದಾರೆ. ಈ ನಡುವೆ ಹಿರಿಯ ಶಾಸಕರನ್ನು ಪರಿಗಣಿಸದೆ ಬೋಪಯ್ಯ ಅವರನ್ನೂ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಶನಿವಾರ ಬೆಳಗ್ಗೆ ಅರ್ಜಿ ವಿಚಾರಣೆಗೆ ಬರಲಿದೆ.

ಉತ್ತರ ಸಿಗದ ಪ್ರಶ್ನೆಗಳು ಆತ್ಮವಿಶ್ವಾಸದ ಜತೆ ತಳಮಳ

1 ಬಿಜೆಪಿಗರು ವಿಶ್ವಾಸಮತ ಗೆಲ್ಲುವ ವಿಶ್ವಾಸದಲ್ಲಿರುವುದಾದರೆ ಸಭೆ ಮೇಲೆ ಸಭೆಗಳನ್ನು ನಡೆಸುತ್ತಿರುವುದೇಕೆ?

2 ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಎಲ್ಲವೂ ಸರಿಯಿದ್ದರೆ, ಎಚ್​ಡಿಕೆ, ಸಿದ್ದರಾಮಯ್ಯ ದಿಢೀರ್ ಹೈದ್ರಾಬಾದ್​ಗೆ ತೆರಳಿದ್ದೇಕೆ?

3 ತಮ್ಮ ರಾಜ್ಯದಲ್ಲೇ ಪಕ್ಷದ ಶಾಸಕರಿಗೆ ಭದ್ರತೆ ನೀಡಲಾಗದಷ್ಟು ವಿಫಲರಾಗಿದ್ದಾರೆಯೇ?

4 ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡ ಕೆ.ಜಿ.ಬೋಪಯ್ಯ ಅವರ ವಿಚಾರದಲ್ಲಿ ಆತಂಕಕ್ಕೀಡಾಗಿ ಮಿತ್ರಪಕ್ಷಗಳ ನಾಯಕರು ರಾತ್ರೋ ರಾತ್ರಿ ಮತ್ತೆ ಸುಪ್ರೀಂ ಕದಬಡಿದಿದ್ದೇಕೆ.

5 ಕಾಂಗ್ರೆಸ್ ನಾಯಕರು ಆಗಿಂದಾಗ್ಗೆ ಮಾಧ್ಯಮಗಳಲ್ಲಿ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದೇಕೆ?

ವಿಶ್ವಾಸಮತ ಪ್ರಕ್ರಿಯೆ…

# ಸದನ ಸೇರುತ್ತಿದ್ದಂತೆಯೇ ಎಲ್ಲ ಬಾಗಿಲುಗಳನ್ನೂ ತೆಗೆದು, ಒಳಬರುವವರು, ಹೊರ ಹೋಗಲು ಬಯಸುವವರಿಗೆ ಸ್ಪೀಕರ್ ಮುಕ್ತ ಅವಕಾಶ ನೀಡುತ್ತಾರೆ.

# ನಿರ್ದಿಷ್ಟ ಸಮಯದ ನಂತರ ಸದನದ ಎಲ್ಲ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಸಿಎಂ ಯಡಿಯೂರಪ್ಪ ಮಾತನಾಡಿ, ತಮ್ಮ ಪ್ರಸ್ತಾವದ ಅವಶ್ಯಕತೆ, ಗಂಭೀರತೆ, ಸದಸ್ಯರು ಬೆಂಬಲ ಏಕೆ ನೀಡಬೇಕೆಂದು ವಿವರಿಸುತ್ತಾರೆ.

# ಬಹುಮತ ಸಾಬೀತಿಗೆ ಪ್ರಸ್ತಾವ ಸಲ್ಲಿಸುವಂತೆ ಸರ್ಕಾರಕ್ಕೆ ಸ್ಪೀಕರ್ ಸೂಚಿಸುತ್ತಾರೆ, ಯಡಿಯೂರಪ್ಪ ಎದ್ದುನಿಂತು ಪ್ರಸ್ತಾವ ಮಂಡಿಸುತ್ತಾರೆ.

# ಪ್ರಸ್ತಾವದ ಪರವಾಗಿರುವವರು ಎದ್ದು ನಿಲ್ಲುವಂತೆ ಸ್ಪೀಕರ್ ಸೂಚಿಸುತ್ತಾರೆ, ಎಲ್ಲರನ್ನೂ ಎಣಿಕೆ ಮಾಡಲಾಗುತ್ತದೆ, ಪ್ರಸ್ತಾವದ ವಿರೋಧವಾಗಿರುವವರು ಎದ್ದು ನಿಲ್ಲುವಂತೆ ಸ್ಪೀಕರ್ ಸೂಚಿಸುತ್ತಾರೆ, ಎಲ್ಲರನ್ನೂ ಎಣಿಕೆ ಮಾಡಲಾಗುತ್ತದೆ.

# ಎರಡೂ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ, ಪ್ರಸ್ತಾವ ಒಪ್ಪಿಗೆ ಪಡೆದಿದೆಯೇ ಅಥವಾ ತಿರಸ್ಕೃತವಾಗಿದೆಯೇ ಎಂಬ ಫಲಿತಾಂಶ ಪ್ರಕಟಿಸಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತದೆ.

Leave a Reply

Your email address will not be published. Required fields are marked *

Back To Top