Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಸುಳ್ಳು ಹೇಳುವುದರಲ್ಲಿ ಎಕ್ಸ್​ಪರ್ಟ್​ ಕಾಂಗ್ರೆಸ್​: ಅಮಿತ್ ಷಾ

Tuesday, 01.05.2018, 6:50 PM       No Comments

ಹಾಸನ : ಕಾಂಗ್ರೆಸ್​ ಸರ್ಕಾರ ಸುಳ್ಳು ಹೇಳುವುದರಲ್ಲಿ ಎಕ್ಸ್​ಪರ್ಟ್​. ಸಿದ್ದರಾಮಯ್ಯನವರದ್ದು ಭ್ರಷ್ಟ ಮಾತ್ರವಲ್ಲ. ಕೊಲೆಗಡುಕ ಸರ್ಕಾರ. ರಾಜ್ಯದಲ್ಲಿ ಇಷ್ಟೊಂದು ಹಿಂದುಗಳ ಕೊಲೆಯಾದರೂ ಇದುವರೆಗೂ ಒಬ್ಬರನ್ನೂ ಬಂಧಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಆರೋಪ ಮಾಡಿದರು.

ಅರಕಲಗೂಡಿನಲ್ಲಿ ಮಾತನಾಡಿ, ರೈತರ ಒಳಿತಿಗಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದು ದೇವೇಗೌಡರ ಕ್ಷೇತ್ರ. ಅವರನ್ನು ನಾನು ಗೌರವಿಸುತ್ತೇನೆ. ಅಂದಮೇಲೆ ಜೆಡಿಎಸ್​ ಪಕ್ಷವನ್ನು ಸೋಲಿಸಲು ಆಗುತ್ತಾ? ಕಾಂಗ್ರೆಸ್​ ಸೋಲಿಸಬೇಕು ಎಂದರೆ ಜೆಡಿಎಸ್​ಗೆ ಮತ ಹಾಕಬಾರದು. ದೇವೇಗೌಡರು ಬಿಜೆಪಿಗೆ ಸಾಥ್​ ನೀಡಲ್ಲ ಎಂದಿದ್ದಾರೆ. ಆದರೆ, ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ ಎಂದು ತಿಳಿಸಿದರು.

ನರೇಂದ್ರ ಮೋದಿ ರೈತರಿಗೆ ಉತ್ತಮ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ. 10 ಲಕ್ಷ ಕುಟುಂಬದ ಆರೋಗ್ಯ ಖರ್ಚು ಭರಿಸಲು ಮೋದಿ ತೀರ್ಮಾನಿಸಿದ್ದಾರೆ. ಮೋದಿ ವಿದ್ಯುತ್​ ಕಾರ್ಖಾನೆಯಂತೆ. ಆದರೆ, ಬೆಂಗಳೂರಿನಲ್ಲಿ ವಿದ್ಯುತ್​ ಸ್ವೀಕರಿಸೋ ಟ್ರಾನ್ಸ್​ಫಾರ್ಮರ್​ ಸುಟ್ಟು ಹೋಗಿದೆ. ಈ ಸುಟ್ಟುಹೋದ ಕಾಂಗ್ರೆಸ್​ ಸರ್ಕಾರವನ್ನು ನದಿಗೆ ಬಿಸಾಡಬೇಕು ಎಂದು ಹೇಳಿದರು.
ಚಿಕ್ಕಮಗಳೂರಲ್ಲಿ ಅಂಬೇಡ್ಕರ್​ ಅಧ್ಯಯನ ಕೇಂದ್ರ
ಇನ್ನು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಷಾ, ಯಡಿಯೂರಪ್ಪ ಸರ್ಕಾರ ಬಂದ ನಂತರ ಇಲ್ಲಿ ಅಂಬೇಡ್ಕರ್​ ಅಧ್ಯಯನ ಕೇಂದ್ರ ತೆರೆಯಲಾಗುವುದು. ಚಿಕ್ಕಮಗಳೂರು ಫೆಸ್ಟಿವಲ್​ ನಡೆಸಲಾಗುವುದು ಎಂದು ಭರವಸೆ ನೀಡಿದರು.

ರಂಭಾಪುರಿ ಮಠಕ್ಕೆ ಭೇಟಿ

ಬಾಳೇಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ಮಠಕ್ಕೆ ತೆರಳಿ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳನ್ನು ಭೇಟಿ ಮಾಡಿದರು. ಸ್ವಾಮೀಜಿಗಳು ಷಾ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿದರು. ಶ್ರೀಗಳ ಕಾಲಿಗೆರಗಿ ಆಶೀರ್ವಾದ ಪಡೆದರು.
ಇದಕ್ಕೂ ಮೊದಲು ಶೃಂಗೇರಿ ಮಠಕ್ಕೆ ಆಗಮಿಸಿದ ಅಮಿತ್​ ಷಾ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ಗೌರಿಶಂಕರ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.

Leave a Reply

Your email address will not be published. Required fields are marked *

Back To Top