Monday, 16th July 2018  

Vijayavani

ಡ್ಯಾಂಗಳು ತುಂಬಿವೆ, ಸಿಎಂ ರಿಂದ ಕಣ್ಣೀರಧಾರೆ - ಸಿಎಂ ಕಣ್ಣೀರಿಗೆ ಆಯನೂರು ವ್ಯಂಗ್ಯ - ಕಲ್ಲು ಹೃದಯಗಳಿಗೆ ಕಣ್ಣೀರು ಬರಲ್ಲ ಅಂತಾ ಸಚಿವ ನಾಡಗೌಡ ಟಾಂಗ್‌        ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವೆ, ಪ್ರಮುಖ ಖಾತೆ ಬಿಟ್ಟಿದ್ದೇವೆ - ಸಿಎಂ ‘ವಿಷಕಂಠ’ ಹೇಳಿಕೆಗೆ ಎ. ಮಂಜು ಟಾಂಗ್‌ - ದೋಸ್ತಿ ಸರ್ಕಾರದಲ್ಲಿ ಮತ್ತೇ ಜಂಗೀ ಕುಸ್ತಿ        ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆಶಿ - ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ - ಉಪಚುನಾವಣೆಗೆ ದೋಸ್ತಿಗಳ ಅಡಿಪಾಯ        ಸಿದ್ದು ಅನ್ನಭಾಗ್ಯದಲ್ಲಿ ಮಿಂಚಿದ್ದವನಿಗೆ ದೌರ್ಭಾಗ್ಯ - ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯ ಪರದಾಟ - ಜಾಹೀರಾತಿಗೆ ಬಳಸಿಕೊಂಡು ಕೈಬಿಟ್ಟ ಸರ್ಕಾರ        ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮಹಾದಾಯಿ ಹೋರಾಟ - ದಯಾಮರಣಕ್ಕಾಗಿ ರೈತರಿಂದ ಮನವಿ - ರಾಜ್ಯ ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ        ಮುಂದಿನ ಲೋಕಸಭೆ ಚುನಾವಣೆ ಭರ್ಜರಿ ತಯಾರಿ- 25 ಸ್ಥಾನ ಗೆಲ್ಲಲು ಬಿಜೆಪಿ ಬಿಗ್‌ ಪ್ಲಾನ್‌ - ಜುಲೈ 28 ಕ್ಕೆ ಅಮಿತ್‌ ಷಾ ರಾಜ್ಯಕ್ಕೆ ಆಗಮನ       
Breaking News

‘ಶ್ರವಣಬೆಳಗೊಳಕ್ಕೆ ಹೋಗಿ ಬನ್ರಿ’ ; ರಾಹುಲ್​ಗೆ ಅನಂತ್​ಕುಮಾರ್​ ಹೆಗಡೆ ಟಾಂಗ್​

Sunday, 29.04.2018, 5:10 PM       No Comments

<< ಎಐಸಿಸಿ ಅಧ್ಯಕ್ಷ ರಾಹುಲ್​ಗೆ ಏಕವಚನ ಪ್ರಯೋಗ ಮಾಡಿ ಛೇಡಿಸಿದ ಕೇಂದ್ರ ಸಚಿವ>>

ಬೆಳಗಾವಿ: ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಯ ದೇವಸ್ಥಾನಗಳ ಭೇಟಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಏಕವಚನ ಪ್ರಯೋಗದ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, ‘ರಾಹುಲ್​ ಗಾಂಧಿಗೆ ದೇಶದಲ್ಲಿ ಹಿಂದು ಧರ್ಮವಿದೆ ಎಂಬುದು ಈಗ ಗೊತ್ತಾಗಿದೆ. ಹಾಗಾಗಿ ಮಠ, ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಯಾರೋ ಹೇಳಿದರು ಎಂದು ಕಾವಿ ತೊಟ್ಟು ದೇಗುಲಕ್ಕೆ ಹೋದ, ಮಠಕ್ಕೆ ಹೋಗುವಾಗ ರುದ್ರಾಕ್ಷಿ ಧರಿಸಿಕೊಂಡು ಹೋದ, ಮಸೀದಿಗೆ ಕೋಳಿಪುಕ್ಕ ಹಾಕಿಕೊಂಡು ಹೋದ, ಚರ್ಚ್​ ಗೆ ಹೋಗುವಾಗ ಕೊರಳಲ್ಲಿ ಶಿಲುಬೆ ಕಟ್ಟಿಕೊಂಡು ಹೋದ ಎಂದು ಏಕವಚನ ಪ್ರಯೋಗ ಮಾಡಿದ ಸಚಿವರು, ‘ರಾಹುಲ್​ ಅವರಿಗೆ ನಾನು ಹೇಳುತ್ತೇನೆ ನಮ್ಮ ದೇಶದ ಅತ್ಯಂತ ದೊಡ್ಡ ಶ್ರದ್ಧಾಕೇಂದ್ರ ಶ್ರವಣಬೆಳಗೊಳಕ್ಕೂ ಹೋಗಿಬನ್ನಿ’ ಎನ್ನುವ ಮೂಲಕ ಪರೋಕ್ಷವಾಗಿ ಮೈಮೇಲೆ ಬಟ್ಟೆಯಿಲ್ಲದೆ ಹೋಗಬೇಕು ಎಂದು ಛೇಡಿಸಿದ್ದಾರೆ.

ಧರ್ಮದ ವಿಚಾರ ಬಂದಾಗ ಬಿಜೆಪಿಯವರು ರಾಜಿಯಾಗುವುದಿಲ್ಲ. ಆದರೆ ಕಾಂಗ್ರೆಸ್​ ಹಾಗಲ್ಲ. ಬರೀ ನಾಟಕ. ಶ್ರದ್ಧೆಯಿಲ್ಲ. ಒಟ್ಟು ನಾವೂ ಹೋಗಬೇಕು ಎಂದು ದೇಗುಲ, ಮಠ, ಮಂದಿರಗಳಿಗೆ ತೆರಳುತ್ತಾರೆ. ಈ ನಾಟಕದ ಕಂಪನಿ ಕಳೆದ 70 ವರ್ಷಗಳಿಂದ ದೇಶವನ್ನು ಆಳಿದೆ. ಮುಂದಿನ ದಿನಗಳಲ್ಲಿ ಇದು ಇರಬಾರದು. ಎಲ್ಲಿವರೆಗೆ ನಮ್ಮ ದೇಶದಲ್ಲಿ ಕಾಂಗ್ರೆಸ್​ ಇರುತ್ತದೆಯೋ ಅಲ್ಲಿವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ದೇಶ ಲೂಟಿ ಹೊಡೆಯುವುದು, ಧರ್ಮ ಅಪಮಾನ ಮಾಡುವುದೇ ಕಾಂಗ್ರೆಸ್ ಕೆಲಸ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

Back To Top