Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಚುನಾವಣೆ ಸಂದರ್ಭ: ಕೈಗೆ ಹ್ಯಾಕ್​ ಭೀತಿ!

Friday, 15.09.2017, 9:54 AM       No Comments

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಕ್ಕೆ ವಿ ಪ್ಯಾಕ್ ಕಡ್ಡಾಯ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡಲು ನಿರ್ಧಾರ ಮಾಡಿದ್ದಾರೆ.

ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭಯ ನಮಗಿಲ್ಲ ಎಂದಿರುವ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಸಣ್ಣ ಕಂಪನ/ದಿಗಿಲು ಶುರುವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಬಹುದು ಅನ್ನೋ ಸುಳಿವು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಿಕ್ಕಿದೆಯಂತೆ. ಹಾಗಾಗಿ ಈ ಭಯ!

ಇವಿಎಂ ಹ್ಯಾಕ್​ಗೆ Fool-Proof ವಿ ಪ್ಯಾಕ್:
ಇವಿಎಂ ಹ್ಯಾಕ್​ ಸುಳಿವು ರಾಜ್ಯ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ್ದು, ಕೂಡಲೇ ಕೆಪಿಸಿಸಿ ಇಂದ ನಿರ್ಣಯವೊಂದನ್ನು ಪಾಸ್ ಮಾಡಿ, ವಿ ಪ್ಯಾಕ್ ಕಡ್ಡಾಯ ಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮೊರೆಯಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಕಡೆ ಹೈಕೋರ್ಟ್​ನಲ್ಲಿಯೂ ರಿಟ್ ಅರ್ಜಿ ಸಲ್ಲಿಸಲು ಕೆಪಿಸಿಸಿ ಕಾನೂನು ಘಟಕ ಮುಂದಾಗಿದೆ. ಒಟ್ಟಿನಲ್ಲಿ ಇವಿಎಂ ಹ್ಯಾಕ್ ಮಾಡಬಹುದು ಅಂತ ಹೇಳಿರುವ ಕೆಲವರ ಮಾತು ಪರಮೇಶ್ವರ್ ಹಾಗು ಸಿಎಂ ಸಿದ್ದರಾಮಯ್ಯ ಅವರ ನಿದ್ದೆಗೆಡಿಸಿದ್ದು ಕೇಂದ್ರ ಚುನಾವಣಾ ಆಯೋಗ ಕದ ತಟ್ಟಲು ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top