Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಧರ್ಮ ಪೇಚು

Thursday, 05.04.2018, 3:04 AM       No Comments

<<ಧರ್ಮ ವಿಭಜನೆ ಪ್ರಶ್ನೆಗೆ ರಾಹುಲ್ ತಬ್ಬಿಬ್ಬು>>

| ರಮೇಶ ಜಹಗೀರದಾರ್

ದಾವಣಗೆರೆ: ವೀರಶೈವ ಲಿಂಗಾಯತರ ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ಧರ್ಮ ರಚನೆಗೆ ಅಸ್ತು ಎಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೀಗ ಅದೇ ಧರ್ವಸ್ತ್ರ ಸುಡಲಾರಂಭಿಸಿದೆ!

ದಾವಣಗೆರೆಯಲ್ಲಿ ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೂ ಧರ್ಮ ವಿವಾದದ ಬಿಸಿ ತಟ್ಟಿತು. ವರ್ತಕರು, ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾಯಿಶ್ರಿಯಾ ಕಾಮತ್, ಪ್ರತ್ಯೇಕ ಧರ್ಮ ಕುರಿತು ಕೇಳಿದ ಪ್ರಶ್ನೆ ಕಾಂಗ್ರೆಸ್ ಅಧ್ಯಕ್ಷರನ್ನು ತಬ್ಬಿಬ್ಬಾಗಿಸಿತು. ಪ್ರಶ್ನೆ ಎದುರಾಗುತ್ತಿದ್ದಂತೆ ರಾಹುಲ್ ಇದು ತಮಗೆ ಸಂಬಂಧಿಸಿದ ಪ್ರಶ್ನೆ ಅಲ್ಲ ಎಂದು ಮೈಕನ್ನು ಸಿಎಂಗೆ ಹಸ್ತಾಂತರಿಸಿ ಜಾರಿಕೊಂಡರು. ಏಕಾಏಕಿ ಎದುರಾದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಾಗದೆ ಸಿದ್ದರಾಮಯ್ಯ ಸಹ ತಡವರಿಸಿದರು.

ಶಾಮನೂರು ಶಿವಶಂಕರಪ್ಪ ಹಾಗೂ ಮಾತೆ ಮಹಾದೇವಿ ಮನವಿಗಳ ಆನಂತರವೇ ಈ ಎಲ್ಲ ಬೆಳವಣಿಗೆಗಳು ಘಟಿಸಿವೆ ಎಂದು ಸಿಎಂ ಉತ್ತರಿಸುತ್ತಿದ್ದಂತೆಯೇ ಅಲ್ಲಿದ್ದ ಸಭಿಕರನೇಕರು ತಿರುಗಿಬೀಳುವ ಜತೆಗೆ ಅವರ ಮಾತಿಗೆ ಅಡ್ಡಿಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ತವರಲ್ಲಿ, ರಾಹುಲ್ ಎದುರೇ ಈ ಬೆಳವಣಿಗೆ ನಡೆದಿದ್ದು ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಆದಿಯಾಗಿ ಎಐಸಿಸಿ, ಕೆಪಿಸಿಸಿ ವರಿಷ್ಠರನ್ನು ಮುಜುಗರಕ್ಕೊಳಪಡಿಸಿತು.

ನಡೆದಿದ್ದಾದರೂ ಏನು?: ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಆಯೋಜಿಸಿದ್ದ ಸಂವಾದದಲ್ಲಿ, ‘ಲಿಂಗಾಯತರು ಮತ್ತು ವೀರಶೈವರು ಎಂದು ವರ್ಗೀಕರಿಸುವ ಅಗತ್ಯವೇನಿತ್ತು? ಆ ಸಮಾಜದವರ ಮಧ್ಯೆ ಭಿನ್ನಾಭಿಪ್ರಾಯ, ಜಗಳ ಇರಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡುವ ಸನ್ನಿವೇಶ ಏಕೆ ಸೃಷ್ಟಿಯಾಯಿತು’ ಎಂದು ವಿದ್ಯಾರ್ಥಿನಿ ಸಾಯಿಶ್ರಿಯಾ ಕಾಮತ್ ಪ್ರಶ್ನೆ ಕೇಳಿದರು.

ಆದರೆ, ರಾಹುಲ್ ಪ್ರಶ್ನೆಗೆ ಉತ್ತರಿಸುವ ಬದಲು ‘ಇದು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಶ್ನೆ. ಇವರನ್ನು ಕೇಳಿ’ಎಂದು ಸಿದ್ದರಾಮಯ್ಯ ಅವರಿಗೆ ಮೈಕ್ ಹಸ್ತಾಂತರಿಸಿದರು. ಅನಿರೀಕ್ಷಿತ ಪ್ರಶ್ನೆಯಿಂದ ಗಲಿಬಿಲಿಗೊಂಡ ಸಿಎಂ, ವೇದಿಕೆಯಲ್ಲೇ ಇದ್ದ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೆಸರು ಎಳೆದು ತಂದರು.ಇದನ್ನು ಗಮನಿಸಿದ ಸಭಿಕರು ಸಿಎಂ ಹೇಳಿಕೆಗೆ ಆಕ್ಷೇಪಿಸಿದರು. ಸಿಎಂ ಸಿಡಿಮಿಡಿಗೊಂಡು ‘ನನ್ನ ಮಾತು ಕೇಳ್ರಿ. ನನಗೆ ಸಮಯವಿಲ್ಲ, ಸಂಕ್ಷಿಪ್ತವಾಗಿ ಹೇಳುವೆ ಎಂದು ಮಾತು ಮುಂದುವರಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟರು. ಅದೇ ವೇಳೆಗೆ ಮಾತೆ ಮಹಾದೇವಿ ಅವರು ಬೀದರ್​ನಲ್ಲಿ ಸಭೆ ನಡೆಸಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮನವಿ ಮಾಡಿದರು.ರಾಜ್ಯ ಸರ್ಕಾರಕ್ಕೆ ಗುರು-ವಿರಕ್ತರು, ಪಂಚಪೀಠದವರು,ನಿವೃತ್ತ ಐಎಎಸ್ ಅಧಿಕಾರಿ ಜಾಮ್ಾರ್ ಸೇರಿ ಒಟ್ಟು ಐದು ಮನವಿಗಳು ಬಂದಿದ್ದವು. ಎಲ್ಲರೂ ಒಟ್ಟಾಗಿ ಒಂದು ನಿರ್ಧಾರಕ್ಕೆ ಬನ್ನಿ ಎಂದಿದ್ದೆ. ಈ ವಿಚಾರವಾಗಿ ಒತ್ತಡ ಹೆಚ್ಚಾದಾಗ ತಜ್ಞರ ಸಮಿತಿ ರಚಿಸಿದೆವು. ಸಮಿತಿಯ ಶಿಫಾರಸನ್ನು ಕ್ಯಾಬಿನೆಟ್​ನಲ್ಲಿ ರ್ಚಚಿಸಿ ಕೇಂದ್ರಕ್ಕೆ ಕಳಿಸಿದ್ದೇವೆ. ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಹೇಳಿ ಕೈತೊಳೆದುಕೊಂಡರು. ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬುದು ಶಾಮನೂರು ಶಿವಶಂಕರಪ್ಪ ಅವರ ನಿಲುವಾಗಿದೆ. ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದಾಗ ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ್ದ ಅವರು ಇದು ಅನ್ಯಾಯದ ಪರಮಾವಧಿ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಹುಲ್ ಅಂತರ ಕಾಯ್ದುಕೊಂಡರೇ?

ಧಾರವಾಡದಲ್ಲಿ ಮಂಗಳವಾರ ಶಿವಯೋಗಿ ಮಂದಿರದಲ್ಲಿ ವೀರಶೈವ ಲಿಂಗಾಯತ ಮಠಾಧೀಶರೊಂದಿಗೆ ನಡೆದ ಸಂವಾದದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯಾವ ಕಾರಣಕ್ಕೂ ರಾಜಕೀಯಕ್ಕಾಗಿ ಧರ್ಮ ಒಡೆಯಲು ಬಿಡುವುದಿಲ್ಲ ಎಂದು ಹೇಳಿದ್ದರು. ಇಂಥದ್ದೇ ಸನ್ನಿವೇಶ ರಾಹುಲ್ ಗಾಂಧಿಗೆ ಎದುರಾದಾಗ ಅವರು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸುವ ಬದಲು ನುಣುಚಿಕೊಂಡರು.

Leave a Reply

Your email address will not be published. Required fields are marked *

Back To Top