Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ಹೇಳಿ ಸ್ವಾಮಿ, ಯಾರ ಕೊರಳಿಗೆ ಗೆಲುವಿನ ದಳ?

Sunday, 15.04.2018, 3:05 AM       No Comments

| ಮಾದರಹಳ್ಳಿ ರಾಜು ಮಂಡ್ಯ

ನಾಗಮಂಗಲ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅದಲು ಬದಲಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್​ನಿಂದ ಗೆದ್ದಿದ್ದ ಚೆಲುವರಾಯಸ್ವಾಮಿ, ಈಗ ಕಾಂಗ್ರೆಸ್ ಅಭ್ಯರ್ಥಿ, ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಸುರೇಶ್​ಗೌಡ, ಜೆಡಿಎಸ್ ಕ್ಯಾಂಡಿಡೇಟ್. ಆದರಿಲ್ಲಿ, ಚೆಲುವರಾಯಸ್ವಾಮಿಗೆ ಜೆಡಿಎಸ್ ಅಭ್ಯರ್ಥಿ ಸುರೇಶ್​ಗೌಡ ಎನ್ನುವುದಕ್ಕಿಂತ ಹೆಚ್ಚಾಗಿ ಎಚ್.ಡಿ.ಕುಮಾರಸ್ವಾಮಿಯೇ ಪ್ರತಿಸ್ಪರ್ಧಿ!

ಹಣಕಾಸು ಸಚಿವರಾಗಿದ್ದ ಟಿ. ಮರಿಯಪ್ಪ, ಎಚ್.ಟಿ. ಕೃಷ್ಣಪ್ಪ, ಚಿಗರಿಗೌಡ ಅವರಂತಹ ಸಜ್ಜನ ರಾಜಕಾರಣಿಗಳನ್ನು ನೀಡಿದ್ದ ನಾಗಮಂಗಲ ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದ ರಾಜಕಾರಣವೇ ಬದಲಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರಾಗಿದೆ.

‘ತೆನೆ’ಯ ಹೊರೆ ಇಳಿಸಿ ‘ಕೈ’ ಹಿಡಿದವರ ಪೈಕಿ ಪ್ರಮುಖರಾದ ಚೆಲುವರಾಯಸ್ವಾಮಿ ವಿರುದ್ಧ ದೇವೇಗೌಡರು ಕುಮಾರಸ್ವಾಮಿ ಸಾರಥ್ಯದಲ್ಲಿ ದೊಡ್ಡ ದಂಡನ್ನೇ ಸೃಷ್ಟಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿದ್ದ ಶಿವರಾಮೇಗೌಡ, ಸುರೇಶ್​ಗೌಡರ ಜತೆಗೆ ಐಆರ್​ಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಂದಿರುವ ಡಾ. ಲಕ್ಷ್ಮೀ ಅಶ್ವಿನ್​ಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡರ ವಿರುದ್ಧ ಚೆಲುವರಾಯಸ್ವಾಮಿ ಹೋರಾಡಬೇಕಿದೆ.

ಜತೆಗೆ ಸಂಸದ ಪುಟ್ಟರಾಜು, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಕೂಡ ಕ್ಷೇತ್ರದೊಳಗೆ ಕೈಯಾಡಿಸುತ್ತಿದ್ದಾರೆ. ಈಗಾಗಲೇ ದೇವೇಗೌಡ, ಕುಮಾರಸ್ವಾಮಿ ಹಲವು ಬಾರಿ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ ಚೆಲುವರಾಯಸ್ವಾಮಿ ಇಷ್ಟು ಮಂದಿ ವಿರುದ್ಧ ಕ್ಷೇತ್ರದೊಳಗೆ ಏಕಾಂಗಿ ಹೋರಾಟ ನಡೆಸಬೇಕಿದೆ. ಎರಡೂ ಪಕ್ಷಗಳ ಸಭೆ, ಸಮಾರಂಭಗಳಿಗೆ ಜನತೆ ಹರಿದುಬರುತ್ತಿದ್ದಾರೆ. ಆದರೆ, ಅದು ಯಾರ ಪರವಾಗಿ ಮತವಾಗಿ ಪರಿವರ್ತನೆ ಆಗುತ್ತದೆಂದು ಹೇಳಲಾಗದು.

ಕಾಂಚಾಣ ನಿರ್ಣಾಯಕ

ಚೆಲುವರಾಯಸ್ವಾಮಿ ‘ಕೈ’ ಹಿಡಿಯುತ್ತಿದ್ದಂತೆ ಕ್ಷೇತ್ರಕ್ಕೆ 3,000 ಕೋಟಿ ರೂ.ಗೂ ಅಧಿಕ ಅನುದಾನ ಹರಿದುಬಂದಿದ್ದು, ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಜತೆಗೆ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಬಲ್ಯ ಬೆಳೆಸಿಕೊಂಡಿದ್ದು ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿದ್ದ ಶೇ.85 ಪ್ರತಿನಿಧಿಗಳು ಅವರ ಜತೆಗಿದ್ದಾರೆ. ಆದರೆ, ಪ್ರತಿ ಚುನಾವಣೆಯಲ್ಲೂ ಕೊನೇ ದಿನ ಕುಣಿಯುವ ಕುರುಡು ಕಾಂಚಾಣ ಇಲ್ಲಿ ಹಣೆಬರಹ ಬರೆಯುತ್ತಿತ್ತು. ಪ್ರಸ್ತುತ ಕೂಡ ಅದೇ ಲೆಕ್ಕಾಚಾರವಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ಆಮಿಷಗಳು, ಯುವಕರಿಗೆ ಮದ್ಯ-ಬಾಡೂಟ, ಮುಖಂಡರ ಬುಕ್ಕಿಂಗ್, ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಭರವಸೆ ಸೇರಿ ನಾನಾ ಕಸರತ್ತುಗಳು ನಡೆಯುತ್ತಿವೆ.

ಬಿಜೆಪಿ ಲೆಕ್ಕಕ್ಕಿಲ್ಲ

ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿಗೆ ಕೊಂಚವಾದರೂ ನೆಲೆಯಿದೆ. ಆದರೆ, ನಾಗಮಂಗಲದಲ್ಲಿ ತೀರಾ ಕಳಪೆಯಾಗಿದೆ. 2008ರ ಚುನಾವಣೆಯಲ್ಲಿ 2,168 ಮತ ಸಿಕ್ಕಿದ್ದರೆ, 2013ರಲ್ಲಿ ಕೇವಲ 1,085. ಪ್ರಸ್ತುತ ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ, ಉದ್ಯಮಿ ಕಿಶನ್​ಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇವರು ಕಣಕ್ಕಿಳಿದಲ್ಲಿ ಕೊಂಚ ಮತಗಳು ಹೆಚ್ಚಾಗಬಹುದೇ ವಿನಃ ದೊಡ್ಡ ಬದಲಾವಣೆ ನಿರೀಕ್ಷಿಸಲಾಗದು.

ಕುಡಿಯುವ ನೀರಿನ ಸಮಸ್ಯೆ

ನಾಗಮಂಗಲ ಕ್ಷೇತ್ರವನ್ನು ಪ್ರಮುಖವಾಗಿ ಕಾಡುವುದು ಕುಡಿಯುವ ನೀರಿನ ಸಮಸ್ಯೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ಸರಿಪಡಿಸುವುದು ದೊಡ್ಡ ಸವಾಲಾಗಿದೆ. ಚೆಲುವರಾಯಸ್ವಾಮಿ ಹಿಂದೆ ಸಾರಿಗೆ ಸಚಿವರಾಗಿದ್ದರು. ಆದರೆ, ಇನ್ನೂ ಹಲವು ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ.

Leave a Reply

Your email address will not be published. Required fields are marked *

Back To Top