Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ದಾವಣಗೆರೆ ಉತ್ತರಕ್ಕೆ ಹಾಲಿ-ಮಾಜಿಗಳ ಮಧ್ಯೆ ಹೋರಾಟ

Friday, 13.04.2018, 3:05 AM       No Comments

| ರಮೇಶ ಜಹಗೀರದಾರ್ ದಾವಣಗೆರೆ

ದಶಕದ ಹಿಂದೆ ಕ್ಷೇತ್ರ ಪುನರ್ವಿಂಗಡಣೆ ನಂತರ ರಚನೆಯಾದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಮೂರನೇ ಚುನಾವಣೆಗೆ ಸಿದ್ಧವಾಗುತ್ತಿದೆ. ರಾಜ್ಯದ ನಕ್ಷೆಯಲ್ಲಿ ನಟ್ಟನಡು ಭಾಗದಲ್ಲಿರುವ ಈ ಕ್ಷೇತ್ರ ಹಾಲಿ ಮತ್ತು ಮಾಜಿ ಸಚಿವರ ನಡುವಿನ ಕದನ ಕಣವಾಗಿದೆ.

ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚುನಾವಣೆಯಿಂದ ಚುನಾವಣೆಗೆ ಗಟ್ಟಿಯಾಗುತ್ತಿದ್ದಾರೆ, ರಾಜಕೀಯವಾಗಿ ಪಳಗುತ್ತಿದ್ದಾರೆ. ಇದು ಅವರಿಗೆ 4ನೇ ಚುನಾವಣೆ.

ವಯಸ್ಸು, ಉತ್ಸಾಹ, ಕೆಲಸದ ವೇಗ ಇವು ಮಲ್ಲಿಕಾರ್ಜುನ್​ಗಿರುವ ಪ್ಲಸ್ ಪಾಯಿಂಟ್​ಗಳು. ಜನರ ಕಣ್ಣಿಗೆ ಕಾಣುವಂಥ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಅವರು ಮತದಾರರ ಬಳಿಗೆ ಹೋಗುತ್ತಿದ್ದಾರೆ. ಕಾಂಗ್ರೆಸ್​ಗೆ ಅವರೇ ಗೆಲ್ಲುವ ಕುದುರೆ.

ಕಳೆದ ಎರಡೂ ಚುನಾವಣೆಗಳಲ್ಲಿ ಮಲ್ಲಿಕಾರ್ಜುನ್​ಗೆ ಪ್ರತಿಸ್ಪರ್ಧಿಯಾಗಿದ್ದವರು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್. ಅವರನ್ನು ಬಿಟ್ಟರೆ ಕಾಂಗ್ರೆಸ್​ಗೆ ಎದುರಾಳಿಯಾಗಬಲ್ಲವರು ಕಮಲ ಪಾಳಯದಲ್ಲಿ ಸದ್ಯದ ಮಟ್ಟಿಗಂತೂ ಯಾರೂ ಇಲ್ಲ.

ರವೀಂದ್ರನಾಥ್ ವಯಸ್ಸು, ಅನುಭವದಲ್ಲಿ ಮಲ್ಲಿಕಾರ್ಜುನ್​ಗಿಂತ ಹಿರಿಯರು. ಈ ಹಿಂದೆ ಮಾಯಕೊಂಡದಿಂದ ಸ್ಪರ್ಧಿಸುತ್ತಿದ್ದ ಅವರು ಅದು ಮೀಸಲು ಕ್ಷೇತ್ರವಾದ ನಂತರ ದಾವಣಗೆರೆ ಉತ್ತರಕ್ಕೆ ಜಿಗಿದಿದ್ದರು.

2008ರಲ್ಲಿ ಬಿ ಫಾಮ್ರ್ ಗೊಂದಲದಿಂದ ಕಾಂಗ್ರೆಸ್ ಅಭ್ಯರ್ಥಿಯೇ ಕಣದಲ್ಲಿ ಇಲ್ಲದಂತಾಗಿದ್ದು ಇದೇ ಕ್ಷೇತ್ರದಲ್ಲಿ. ಆ ಚುನಾವಣೆಯಲ್ಲಿ ರವೀಂದ್ರನಾಥ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು.

ಆದರೆ, ಅದೇ ರವೀಂದ್ರನಾಥ್ 2013ರಲ್ಲಿ ಮಲ್ಲಿಕಾರ್ಜುನ್ ವಿರುದ್ಧ 58 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್​ನ ಅಬ್ಬರವನ್ನು ಎದುರಿಸಲು ರವೀಂದ್ರನಾಥ್ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಷಾ ಅವರ ತಂತ್ರಗಾರಿಕೆ ಕೈ ಹಿಡಿಯಬೇಕಷ್ಟೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಎದುರು ಜೆಡಿಎಸ್ ಮಂಕಾಗಿ ಕಾಣುತ್ತದೆ. ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಬಲ್ಲ ಅಭ್ಯರ್ಥಿ ಆ ಪಕ್ಷದಲ್ಲಿ ಸದ್ಯಕ್ಕಂತೂ ಇಲ್ಲ.

ಏನಾಗಿದೆ, ಆಗಬೇಕಿತ್ತು?

5 ವರ್ಷಗಳಲ್ಲಿ ಸಿಮೆಂಟ್ ರಸ್ತೆಗಳು, ತೋಟಗಾರಿಕೆ ಇಲಾಖೆಯ ಅನುದಾನದಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಡಾವಣೆ ಗಳಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸಿದೆ. ಗಾಜಿನ ಮನೆ ನಿರ್ವಣವಾಗಿದೆ. ಆದರೆ, ನಗರದ ಹೊರ ವಲಯದಲ್ಲಿರುವ ಹೊಸ ಬಡಾವಣೆಗಳಲ್ಲಿ ಮೂಲಸೌಲಭ್ಯದ ಕೊರತೆ ಇದೆ. ಅಲ್ಲಿ ರಸ್ತೆ, ಒಳಚರಂಡಿ, ಕುಡಿವ ನೀರಿನ ಸೌಲಭ್ಯ ಇನ್ನಷ್ಟು ಕಲ್ಪಿಸಬೇಕಿದೆ.

ಎಸ್.ಎಸ್. ಮಲ್ಲಿಕಾರ್ಜುನ ಕೆಲಸಗಾರರು. ಆದರೆ ಅವರನ್ನು ತಲುಪುವುದು ಕಷ್ಟ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಎಸ್.ಎ. ರವೀಂದ್ರನಾಥ್ ಸರಳರು. ಎಲ್ಲರೊಂದಿಗೆ ಬೆರೆಯುತ್ತಾರೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳು ಕೆಲವು ಕಡೆ ಆಗಿವೆ, ಮತ್ತೆ ಕೆಲವೆಡೆ ಆಗಿಲ್ಲ.

| ಮಹೇಶ್ವರ ಮತದಾರ

 

Leave a Reply

Your email address will not be published. Required fields are marked *

Back To Top