Friday, 21st September 2018  

Vijayavani

Breaking News

ನಾಳೆ ಅಥವಾ ನಾಡಿದ್ದು ಬಿಜೆಪಿ 3ನೇ ಪಟ್ಟಿ ಪ್ರಕಟ: ಬಿಎಸ್​ವೈ

Monday, 16.04.2018, 6:32 PM       No Comments

ಬೆಂಗಳೂರು: ಬಿಜೆಪಿಯ 3ನೇ ಪಟ್ಟಿಯನ್ನು ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ತಿಳಿಸಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳು ಬೇಕಾಗಿದೆ. ಗೆಲ್ಲುವ ಅಭ್ಯರ್ಥಿಗಳು ಪಕ್ಷಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್​ ನೀಡಲಾಗುತ್ತಿದೆ. ಟಿಕೆಟ್​ ಸಿಗದವರಿಗೆ ಬೇಸರವಾಗುವುದು ಸ್ವಾಭಾವಿಕ. ಟಿಕೆಟ್​ ಸಿಗದವರಿಗೆ ನಮ್ಮ ಸರ್ಕಾರ ಬಂದಾಗ ಸೂಕ್ತ ಹೊಣೆಗಾರಿಕೆ ನೀಡುತ್ತೇವೆ ಎಂದು ಬಿಎಸ್​ವೈ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿತ್ತು. ಈ ಮೂಲಕ ಇದುವರೆಗೂ ಒಟ್ಟು 154 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಬಾಕಿ ಉಳಿದಿರುವ 70 ಅಭ್ಯರ್ಥಿಗಳ 3ನೇ ಪಟ್ಟಿ ಶೀಘ್ರ ಬಿಡುಗಡೆಯಾಗಲಿದೆ. 3ನೇ ಪಟ್ಟಿಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ರೆಡ್ಡಿ ಸೋದರರಿಗೆ ಟಿಕೆಟ್

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಬಳ್ಳಾರಿಯ ಜನಾರ್ದನ ರೆಡ್ಡಿ ಸಹೋದರರಿಗೆ ಟಿಕೆಟ್​ ನೀಡಲಾಗಿದೆ. ಬಳ್ಳಾರಿ ನಗರದಿಂದ ಮಾಜಿ ಸಚಿವ. ಜಿ. ಸೋಮಶೇಖರ ರೆಡ್ಡಿಗೆ ಟಿಕೆಟ್​ ಸಿಕ್ಕಿದೆ. ಅಂತೆಯೇ ಎರಡನೇ ಪಟ್ಟಿಯಲ್ಲಿ ವಲಸೆ ಬಂದಿರುವ ನಾಯಕರಾದ ಕುಮಾರ್​ ಬಂಗಾರಪ್ಪ, ಸಂದೇಶ್​ ಸ್ವಾಮಿ ಮತ್ತು ನೆ.ಲ. ನರೇಂದ್ರಬಾಬು ಅವರಿಗೆ ಟಿಕೆಟ್​ ನೀಡಲಾಗಿದೆ.

ಸೊರಗಿದ ಬೇಳೂರು, ಸೊಗಡು

ಸಾಗರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್​ ಕೈತಪ್ಪಿದೆ. ಇಂಡಿಯ ರವಿಕಾಂತ್​ ಪಾಟೀಲ್​ ಹಾಗೂ ತುಮಕೂರು ಕ್ಷೇತ್ರದಲ್ಲಿ ಸೊಗಡು ಶಿವಣ್ಣಗೆ ಟಿಕೆಟ್​ ಸಿಕ್ಕಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಯಾರು?

ಭಾರೀ ಕುತೂಹಲ ಕೆರಳಿಸಿರುವ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಅವರ ಪುತ್ರ ಯತೀಂದ್ರ ಅವರು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ಎರಡನೇ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ.

ವರುಣಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ಕ್ಷೇತ್ರದಲ್ಲಿ ಮನೆ ಮಾಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top