Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ತಾವರಗೇರಾಗದಲ್ಲಿ ಕೇವಲ ಐದು ನಿಮಿಷದಲ್ಲಿ ಭಾಷಣ ಮುಗಿಸಿದ ರಾಹುಲ್ ಗಾಂಧಿ!

Sunday, 11.02.2018, 1:35 PM       No Comments

 

ಕೊಪ್ಪಳ: ಎರಡನೇ ದಿನ ಜನಾಶೀರ್ವಾದ ಯಾತ್ರೆ ಮುಂದುವರೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಾವರಗೇರಾಗದಲ್ಲಿ ಕೆವಲ ಐದು ನಿಮಿಷದಲ್ಲಿ ಭಾಷಣ ಮುಗಿಸಿದರು.

ಹೈ-ಕಕ್ಕೆ 371-ಜೆ ಅನುಷ್ಠಾನ ಮಾಡಿದ್ದೇವೆ. ರಾಜ್ಯ ಸರ್ಕಾರ ಬಡವರ ಪರ ಇದೆ. ಮುಂದಿನ ಚುನಾವಣೆಯಲ್ಲಿ ನಮಗೆ ಆಶಿರ್ವಾದ ಮಾಡಿ ಎಂದು ಮನವಿ ಮಾಡಿದರು.

ದಿಢೀರ್​ನೆ ಕನಕಗಿರಿಯಲ್ಲಿ ರಾಹುಲ್‌ಗೆ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಯಿತು. ಹೊಸಪೇಟೆಯ ಹೋಟೆಲ್ ನಿಂದ ಊಟ ತರಿಸಲಾಗಿದೆ. ಊಟದ ವ್ಯವಸ್ಥೆ ಗಂಗಾವತಿ ಅಥವಾ ಕನಕಗಿರಿ ಎಂಬ ಗೊಂದಲದಲ್ಲಿ ಆಯೋಜಕರಿದ್ದರು.

ಭದ್ರತೆಯಲ್ಲಿ ಲೋಪ

ರಾಹುಲ್‌ ಗಾಂಧಿ ಕೈಗೆ ಕಾರ್ಯಕರ್ತರು ನೀಡಿದ ಹೂವಿನ ಹಾರವನ್ನು ಯಾವುದೇ ತಪಾಸಣೆ ಮಾಡದೆ ಎಸ್‌ಪಿಜಿ ಪಡೆ ಪಡೆಯಿತು. ರಾಹುಲ್ ಸುಮಾರು 200 ಮೀಟರ್​ ಪಾದಯಾತ್ರೆ ಮಾಡಿದರು. ಈ ವೇಳೆ ಭದ್ರತೆ ನೀಡಲು ಭದ್ರತಾ ಸಿಬ್ಬಂದಿ ಜನರನ್ನು ಚದುರಿಸಲು ಮುಂದಾದಾಗ ರಾಹುಲ್ ಜನರನ್ನು ಚದುರಿಸದಂತೆ ತಾಕೀತು ಮಾಡಿದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಬಸವರಾಜ್ ರಾಯರಡ್ಡಿ ಸಾಥ್ ನೀಡಿದರು. ಆದರೆ, ಸಾರ್ವಜನಿಕರನ್ನು ನಿಯಂತ್ರಿಸಲು ಭದ್ರತಾ ಪಡೆ ಹರಸಾಹಸ ಮಾಡಿತು.

ಕುಷ್ಟಗಿಯಲ್ಲಿ ಪ್ರತಿಭಟನೆ ಬಿಸಿ

ಕುಷ್ಟಗಿಯಲ್ಲಿ ರಾಹುಲ್​ಗೆ ಪ್ರತಿಭಟನೆ ಬಿಸಿ ತಟ್ಟಿತು. ಸದಾಶಿವ ವರದಿ ಜಾರಿ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಹುಲ್ ವಿರುದ್ಧ ಘೋಷಣೆ ಕೂಗಿ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದರು.

ಕುಷ್ಟಗಿಯಲ್ಲಿ ಪೂರ್ಣ ಕುಂಭದೊಂದಿಗೆ ರಾಹುಲ್‌ ಸ್ವಾಗತ ಮಾಡಿಕೊಳ್ಳಲಾಯಿತು. ಕುಷ್ಟಗಿಯ ಬಸವೇಶ್ವರರ ವೃತ್ತ, ಗಜೇಂದ್ರಗಡ ರಸ್ತೆಯಲ್ಲಿ ಜನರತ್ತ ಕೈ ಬೀಸಿದರು. ರೋಡ್​ ಶೋ ನಡೆಸಿದರು. ಎಸ್​​ಪಿಜಿ ಲೆಕ್ಕಿಸದೇ ಜನರ ಬಳಿ ರಾಹುಲ್ ತೆರಳಿದರು. ಈ ವೇಳೆ ಅಭಿಮಾನಿಗಳು ರಾಹುಲ್​ ಬಳಿ ನುಗ್ಗಿದರು.

ರಾಹುಲ್ ಬಗ್ಗೆ ಗೊತ್ತಿಲ್ಲ!

ಯಾತ್ರೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ರಾಹುಲ್ ಗಾಂಧಿ ಬಗ್ಗೆ ಏನು ಗೊತ್ತು ಎಂದು ದಿಗ್ವಿಜಯ ನ್ಯೂಸ್​ ಪ್ರಶ್ನಿಸಿದಾಗ, ರಾಹುಲ್ ಗಾಂಧಿ ಗೊತ್ತಿಲ್ಲ. ಸಿದ್ದರಾಮಯ್ಯ ನೋಡಲು ಬಂದಿದ್ದೇವೆ ಎಂದರು. ಮಹಿಳೆಯರು ನಾಹೇಳಲ್ಲ ಎಂದು ನಾಚಿಕೊಂಡರು.

ಬಾಲಕ ನೋಡಿ ಬಸ್ ನಿಲ್ಲಿಸಿದ ರಾಹುಲ್​ !

ಕೊಪ್ಪಳದ ಕುಕನೂರ ಪ್ರವಾಸಿ ಮಂದಿರ ಮುಂಭಾಗ ರಾಹುಲ್ ಗಾಂಧಿ ನೋಡಲು ಹರಸಾಹಸ ಪಟ್ಟ ಬಾಲಕನನ್ನು ನೋಡಿದ ರಾಹುಲ್​ ಬಸ್ ನಿಲ್ಲಿಸಿ ಬಾಲಕನನ್ನು ಎತ್ತಿಕೊಂಡರು. ಅಲ್ಲದೆ, ಕ್ಯಾಮೆರಾಗೆ ಫೋಸ್ ಕೊಟ್ಟರು.

ಯಲಬುರ್ಗಾದಲ್ಲಿ ಪೂರ್ಣಕುಂಭದೊಂದಿಗೆ ರಾಹುಲ್​ಗಾಂಧಿಗೆ ಸ್ವಾಗತ ಕೋರಲಾಯಿತು. ಜನಪದ ಕಲಾಮೇಳಗಳು ಭಾಗವಹಿಸಿದ್ದವು.

Leave a Reply

Your email address will not be published. Required fields are marked *

Back To Top