Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಭ್ರಷ್ಟರ ವಿರುದ್ಧ ನಾನಾ ಕಡೆ ಎಸಿಬಿ ತಾಂಡವ ನೃತ್ಯ

Friday, 16.06.2017, 9:18 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಗುರುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ವೈದ್ಯಕೀಯ ನಿಯಂತ್ರಣ ಕಾಯ್ದೆಗೆ ವಿರೋಧ- ಬೆಂಗಳೂರಿನಲ್ಲಿಂದು ವೈದ್ಯರ ಮುಷ್ಕರ- ರಾಜ್ಯದ ಹಲವೆಡೆ ಖಾಸಗಿ ಕ್ಲಿನಿಕ್‌ಗಳು ಬಂದ್

2. ಪೆಟ್ರೋಲ್‌ ಬಂಕ್‌ಗಳಲ್ಲಿ ಇಂದಿನಿಂದ ದಿನಕ್ಕೊಂದು ದರ- ಕೇಂದ್ರದ ಯೋಜನೆಗೆ ರಾಜ್ಯದ ಹಲವೆಡೆ ವಿರೋಧ- ರಾಮನಗರ, ಮೈಸೂರು, ಮಂಡ್ಯದಲ್ಲಿ ಪೆಟ್ರೋಲ್‌ ಬಂಕ್‌ ಬಂದ್‌

3. ಕಲಬುರಗಿಯಲ್ಲಿ ದೇವದಾಸಿ ಪದ್ದತಿ ಇನ್ನೂ ಜೀವಂತ- ಮಗಳನ್ನ ಅನಿಷ್ಟ ಪದ್ದತಿಗೆ ತಳ್ಳಿದ ಫೋಷಕರು- ಜಿಲ್ಲಾಡಳಿತದಿಂದ 9 ವರ್ಷದ ಬಾಲಕಿ ರಕ್ಷಣೆ

4. ಪದೇ ಪದೇ ದಾಳಿ ಮಾಡಿ ಉಪಟಳ ಕೊಡ್ತಿತ್ತು- ಕಬ್ಬಿನ ಗದ್ದೆಯಲ್ಲಿದ್ದ ಬೋನಿಗೆ ಕೊನೆಗೂ ಬಿತ್ತು- ಮಂಡ್ಯದ ಕದಲೂರಿನಲ್ಲಿ ಬೋನಿಗೆ ಬಿದ್ದ ಚಿರತೆ

5. ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್‌- ಕೋಲಾರ, ಕಲಬುರಗಿ, ರಾಯಚೂರಿನಲ್ಲಿ ಎಸಿಬಿ ದಾಳಿ- ತಿಮಿಂಗಿಲುಗಳ ಅಕ್ರಮ ಆಸ್ತಿಯ ಶೋಧ

ಕೋಲಾರ ಜಿಲ್ಲೆಯ ಮುಳಬಾಗಿಲಿನ ಸಾಯಿ ವಿಹಾರಿಕ ನರ್ಸಿಂಗ್ ಹೋಂ ನಡೆಸುತ್ತಿರುವ ಡಾ.ಕುಮಾರ್ ಗೌಡ ಅವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಡಿವೈಎಸ್​ಪಿ ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಅಲ್ಲದೆ ಬೆಂಗಳೂರಿನ ಕೆ.ಆರ್​.ಪುರಂನಲ್ಲಿರುವ ಅವರ ಆಪ್ತ ಸ್ನೇಹಿತ ಪ್ರಕಾಶ್​ ಮನೆ ಮೇಲು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಕಲಬುರಗಿಯಲ್ಲೂ ಎಸಿಬಿ ದಾಳಿ ನಡೆಸಿದೆ. ಜೇವರ್ಗಿ ಕಾಲನಿಯ ಜೆಸ್ಕಾಂ ಎಇಇ ಸಹಾದೇವ ಮಾನಕೆರೆ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಎಸಿಬಿ ಎಸ್​ಪಿ ಅನಿತಾ ಹದ್ದಣ್ಣನವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ರಾಯಚೂರಿನಲ್ಲೂ ಎಸಿಬಿಯಿಂದ ದಾಳಿ ನಡೆದಿದೆ. ರಾಯಚೂರಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಇ ಬಿ.ಆರ್.ಗೌಡೂರು ಅವರ ರಾಯಚೂರು ಹಾಗೂ ಕಲಬುರಗಿಯಲ್ಲಿರುವ ಮನೆಯ ಮೇಲೆ ಏಕಕಾಲದಲ್ಲಿ ಎಸಿಬಿ ಇನ್ಸ್​​ಪೆಕ್ಟರ್​ ಸಣ್ಣಮನಿ ನೇತೃತ್ವದಲ್ಲಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಆರೋಪ ಹಿನ್ನೆಲೆ ಅಧಿಕಾರಿಗಳಿಂದ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಬೀದರ್​ನಲ್ಲಿ ಕೂಡಾ ಎಸಿಬಿ ದಾಳಿ ನಡೆಸಿದೆ. ಕಲಬುರಗಿಯಲ್ಲಿನ ಸಹದೇವ್ ಮಾನಕರೆ ನಿವಾದ ಮೇಲೆ ಎಸಿಬಿ ದಾಳಿ ನಡೆಸಿದ ಬೆನ್ನಲ್ಲೆ ಬೀದರ್​ನ ಕೆಇಬಿ ರಸ್ತೆ ಹತ್ತಿರವಿರುವ ಸಹದೇವ್ ಮಾನಕರೆ ಅವರ ಮಾವ ಮಾದವರಾವ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ಎಸ್ಪಿ ಅನೀತ ಹದ್ದಣ್ಣನವರ್ ಮಾಗ೯ದಶ೯ದಲ್ಲಿ ದಾಳಿ ನಡೆಸಿರುವ ಎಸಿಬಿ ಪೊಲೀಸರು ದಾಖಲೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಏಕಕಾಲದಲ್ಲಿ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಗಳು. ಕೇಂದ್ರ ವಲಯ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ಅವರ ಬೆಂಗಳೂರಿನ ಡಾಲರ್ಸ್​ ಕಾಲೋನಿ ಹಾಗೂ ದಾವಣಗೆರೆ ಚನ್ನಗಿರಿ ತಾಲೂಕಿನ ಎನ್​. ಗಾಣದಗಟ್ಟೆ ಗ್ರಾಮದಲ್ಲಿರುವ ನಿವಾಸದ ಮೇಲೆ ದಾಳಿಸಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಎಸಿಬಿ ಅಧಿಕಾರಿ ಪ್ರಕಾಶ್ ಗೌಡ ಪಾಟೀಲ್ ಹಾಗೂ ಬೆಂಗಳೂರಿನಲ್ಲಿ ಎಸಿಬಿ ಇನ್ಸ್​ಪೆಕ್ಟರಿಂದ ತನಿಖೆ ಮುಂದಿವರಿಕೆ. ಹಾಲಸ್ವಾಮಿ ಅವರಿಗೆ ಸೇರಿದೆ ಎನ್ನಲಾದ ಗ್ರಾಮದಲ್ಲಿನ 20 ಎಕರೆ ಅಡಿಕೆ ತೋಟ, ಮನೆ, ಟ್ರಾಕ್ಟರ್ ಸೇರಿದಂತೆ ಹಲವು ಆಸ್ತಿ ದಾಳಿ ವೇಳೆ ಪತ್ತೆಯಾಗಿದೆ.

Leave a Reply

Your email address will not be published. Required fields are marked *

Back To Top