Sunday, 28th May 2017  

Vijayavani

4. ಬರಿದಾಗಿದೆ ಶತಮಾನದ ಜಲಾಶಯ – ಹಿರಿಯರ ಬೇಡಿಕೆಗೆ ಸ್ಪಂದಿಸಿದ ರಾಜಕುಟುಂಬ – ಚಿತ್ರದುರ್ಗದ ವಾಣಿವಿಲಾಸ ಡ್ಯಾಂಗೆ ಗಂಗಾ ಪೂಜೆ 5. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ – ಕಿವೀಸ್‌ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ – ಮೊದಲ ಪಂದ್ಯಕ್ಕೆ ಕೊಹ್ಲಿ ಬಾಯ್ಸ್‌ ಸಿದ್ಧತೆ 1. ಪ್ರಧಾನಿಯನ್ನು ಭೇಟಿ ಮಾಡಿದ ಬಿಹಾರ ಸಿಎಂ- ಔತಣಕೂಟದಲ್ಲಿ ಮೋದಿ ಜೊತೆ ಭಾಗಿ- ಮತ್ತೆ ಎನ್‌ಡಿಎ ತೆಕ್ಕೆಗೆ ಸೇರ್ತಾರಾ ನಿತೀಶ್‌ ಕುಮಾರ್‌ 2. ರಾಹುಲ್‌ಗಾಂಧಿ ಪೊಲಿಟಿಕಲ್‌ ಸ್ಟಂಟ್‌ ಮತ್ತೆ ಶುರು- ವಿರೋಧದ ನಡುವೆ ಸಹರಾನ್‌ಪುರಕ್ಕೆ ಭೇಟಿ- ಡಿಸಿ ಆದೇಶದ ಬಳಿಕ ದೆಹಲಿಗೆ ವಾಪಾಸ್‌ 3. ಮೃತಪಟ್ಟ ಮಹಿಳೆ ಕೊಲೆ ಶಂಕೆ – ಹೆತ್ತವರ ದೂರಿನ ಮೇಲೆ ಡೆಡ್‌ಬಾಡಿ ಹೊರಕ್ಕೆ – ಕೇಸ್‌ ಆಗ್ತಿದ್ದಂತೆ ಗಂಡನ ಮನೆಯವ್ರು ಪರಾರಿ
Breaking News :

ಇಯಾನ್ ಗ್ರಿಲ್ಲೋಟ್​ಗೆ ಭಾರತೀಯರಿಂದ ಸನ್ಮಾನ

Monday, 20.03.2017, 2:35 PM       No Comments

ಹೂಸ್ಟನ್: ಅಮೆರಿಕದ ಕಾನ್ಸಾಸ್​ನ ಬಾರ್​ವೊಂದರಲ್ಲಿ ಭಾರತೀಯ ಇಂಜಿನಿಯರ್​ಗಳ ಮೇಲೆ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಗಾಯಗೊಂಡಿದ್ದ ಅಮೆರಿಕದ ಇಯಾನ್ ಗ್ರಿಲ್ಲೋಟ್ ಅವರಿಗೆ ಭಾರತೀಯ ಸಮುದಾಯವರು ಸನ್ಮಾನಿಸಲು ತೀರ್ಮಾನಿಸಿದ್ದಾರೆ.

ಬಾರ್​ನಲ್ಲಿ ಅಮೆರಿಕ ನೌಕಾಪಡೆಯ ನಿವೃತ್ತ ಯೋಧನೊಬ್ಬ ಭಾರತೀಯ ಇಂಜಿನಿಯರ್​ಗಳಾದ ಶ್ರೀನಿವಾಸ್ ಕುಚಿಬೋಟ್ಲಾ ಮತ್ತು ಅಲೋಕ್ ಮದಸಾನಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಇಯಾನ್ ಗುಂಡಿನ ದಾಳಿ ತಡೆಯಲು ಪ್ರಯತ್ನಿಸಿ ಗಾಯಗೊಂಡಿದ್ದರು. ಘಟನೆಯಲ್ಲಿ ಶ್ರೀನಿವಾಸ್ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಇಯಾನ್ ಅವರನ್ನು ‘ಎ ಟ್ರೂ ಅಮೆರಿಕನ್ ಹೀರೋ’ ಎಂದು ಗೌರವ ನೀಡಿ ಸನ್ಮಾನಿಸಲು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ನಿರ್ಧರಿಸಿದ್ದಾರೆ. ಮಾರ್ಚ್ 25 ರಂದು ಹೂಸ್ಟನ್​ನ ಇಂಡಿಯನ್ ಹೌಸ್​ನಲ್ಲಿ ನಡೆಲಿರುವ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಇಯಾನ್ ಅವರನ್ನು ಸನ್ಮಾನಿಸಲಾಗುವುದು.

ಲಕ್ಷಾಂತರ ಜನರ ಪ್ರಾರ್ಥನೆಯ ಫಲವಾಗಿ ನಾನು ಚೇತರಿಸಕೊಳ್ಳುತ್ತಿದ್ದೇನೆ. ಮಾರ್ಚ್ 25 ರಂದು ಹೂಸ್ಟನ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ನನಗೆ ಬೆಂಬಲ ಸೂಚಿಸುತ್ತಿರುವ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು ಎಂದು ಗಿಲ್ಲೋಟ್ ಪ್ರತಿಕ್ರಿಯೆ ನೀಡಿದ್ದಾರೆ.

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top