Thursday, 24th May 2018  

Vijayavani

Breaking News

ಶುರುವಾಗಲಿದೆ ಕಹಾನಿ 3

Friday, 16.12.2016, 1:51 AM       No Comments

ನೂರು ಕೋಟಿ ರೂ. ಕಲೆಕ್ಷನ್ ಮಾಡದಿದ್ದರೂ ‘ಕಹಾನಿ 2’ ಚಿತ್ರ ಗೆಲುವಿನ ನಗು ಬೀರಿರುವುದಂತೂ ಸತ್ಯ. 20 ಕೋಟಿಗಿಂತಲೂ ಕಡಿಮೆ ಬಜೆಟ್​ನಲ್ಲಿ ತಯಾರಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 30 ಕೋಟಿ ರೂ. ಗಳಿಸಿದೆ. ಹಳೇ ನೋಟು ನಿಷೇಧದ ನಡುವೆಯೂ ಸಣ್ಣ ಪ್ರಮಾಣದ ಲಾಭ ಮಾಡಿರುವುದರಿಂದ ನಿರ್ವಪಕರು ಸಹಜವಾಗಿಯೇ ಖುಷಿಯಲ್ಲಿದ್ದಾರೆ. ಅಲ್ಲದೆ, ಈಗಲೂ ಥಿಯೇಟರ್​ಗಳಲ್ಲಿ ಪ್ರೇಕ್ಷಕರನ್ನು ಚಿತ್ರ ಆಕರ್ಷಿಸುತ್ತಿದ್ದು, ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ. ಪರಿಣಾಮ, ‘ಕಹಾನಿ 3’ ನಿರ್ವಣಕ್ಕೆ ಪ್ಲಾನ್ ತಯಾರಾಗುತ್ತಿದೆ. ಈಗಾಗಲೇ ಮುಂದಿನ ಅವತರಣಿಕೆಗಾಗಿ ನಿರ್ದೇಶಕ ಸುಜೋಯ್ ಘೊಷ್ ಚಿತ್ರಕಥೆ ಬರೆಯುವಲ್ಲಿ ಬಿಜಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸ್ವತಃ ನಿರ್ವಪಕ ಜಯಂತಿ ಲಾಲ್ ಗಡಾ ಹೊರಹಾಕಿದ್ದಾರೆ. ಈ ಚಿತ್ರದಲ್ಲಿಯೂ ವಿದ್ಯಾ ಬಾಲನ್ ಅವರೇ ನಾಯಕಿ ಆಗಿರುತ್ತಾರಾ? ‘ಚಿತ್ರಕಥೆ ಸಂಪೂರ್ಣಗೊಂಡ ನಂತರ ಕಲಾವಿದರ ಆಯ್ಕೆ ಬಗ್ಗೆ ಯೋಚಿಸುತ್ತೇವೆ’ ಎಂದಿದ್ದಾರೆ ನಿರ್ವಪಕರು. ಆದರೆ ಈ ಬಗ್ಗೆ ವಿದ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ಅವರು ಲೇಖಕಿ ಕಮಲಾ ದಾಸ್ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಆ ಚಿತ್ರದ ಶೂಟಿಂಗ್ ಮುಗಿದ

ನಂತರವಷ್ಟೇ ‘ಕಹಾನಿ 3’ ಚಿತ್ರಕ್ಕೆ ಅವರು ಕಾಲ್​ಶೀಟ್ ನೀಡಬೇಕಿದೆ. ಅಂದಹಾಗೆ ‘ಕಹಾನಿ 2’ ಕಲೆಕ್ಷನ್ ಕಡಿಮೆಯಾಗಲು ಕೇವಲ ನೋಟ್ ಬ್ಯಾನ್ ಮಾತ್ರ ಕಾರಣವಲ್ಲ. ಚಿತ್ರಕಥೆಯಲ್ಲಿನ ಕೆಲವು ತಪ್ಪುಗಳು ಕೂಡ ಕಾರಣ ಎಂಬುದನ್ನು ಚಿತ್ರತಂಡ ಒಪ್ಪಿಕೊಂಡಿದೆ.

ಕಾಬಿಲ್​ನಲ್ಲಿ ಐರಾವತ ಬೆಡಗಿಯ ಐಟಂ ಸಾಂಗ್!

ನಟ ಹೃತಿಕ್ ರೋಷನ್ ನಟನೆಯ ‘ಕಾಬಿಲ್’ ಚಿತ್ರದ ಕುರಿತು ನಿರೀಕ್ಷೆ ಜೋರಾಗಿದೆ. ಕಾರಣ, ಈ ಹಿಂದಿನ ‘ಮೊಹೆಂಜೋ ದಾರೋ’ ಚಿತ್ರ ಹೇಳಹೆಸರಿಲ್ಲದಂತೆ ನೆಲಕಚ್ಚಿತ್ತು. ಹಾಗಾಗಿ, ಈ ಚಿತ್ರದ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಶಾರುಖ್ ಖಾನ್ ಅಭಿನಯದ ‘ರಯೀಸ್’ ಕೂಡ ‘ಕಾಬಿಲ್’ಗೆ ಪೈಪೋಟಿ ನೀಡಲು ಸಜ್ಜಾಗಿದೆ. ಕಾರಣ, 2017ರ ಜನವರಿ 25ರಂದು ಈ ಎರಡೂ ಚಿತ್ರಗಳು ರಿಲೀಸ್ ಆಗಲಿವೆ. ಇದೀಗ ‘ಕಾಬಿಲ್’ ಹೊಸದೊಂದು ಸುದ್ದಿಯ ಮುಖೇನ ಸೌಂಡು ಮಾಡುತ್ತಿದೆ. ‘ಮಿ. ಐರಾವತ’ ಖ್ಯಾತಿಯ ನಟಿ ಊರ್ವಶಿ ರೌಟೇಲ ‘ಕಾಬಿಲ್’ನ ಐಟಂ ಸಾಂಗ್​ಗೆ ಹೆಜ್ಜೆ ಹಾಕಲಿದ್ದಾರೆ.

1981ರಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ‘ಯಾರಾನಾ’ ಚಿತ್ರದ ‘ಸಾರಾ ಜಮಾನಾ..’ ಹಾಡನ್ನು ‘ಕಾಬಿಲ್’ಗಾಗಿ ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೂಲ ಚಿತ್ರದಲ್ಲಿ ಕಿಶೋರ್​ಕುಮಾರ್ ಈ ಹಾಡಿಗೆ ಧ್ವನಿ ನೀಡಿದ್ದರು. ಆದರೆ, ಈ ಬಾರಿ ವರ್ಷನ್ ಚೇಂಜ್ ಮಾಡಲಾಗಿದೆ. ಊರ್ವಶಿ ಮೇಲೆ ಹಾಡನ್ನು ಚಿತ್ರೀಕರಣ ಮಾಡುತ್ತಿರುವುದರಿಂದ ಫಿಮೇಲ್ ಸಿಂಗರ್ ಹಾಡಿದ್ದಾರೆ. ಅಮಿತಾಭ್ ನಟಿಸಿದ್ದ ಈ ಹಾಡಿನಲ್ಲಿ ನಟಿಸಲು ಮೊದಲು ಊರ್ವಶಿಗೆ ನರ್ವಸ್ ಆಯ್ತಂತೆ. ಆಮೇಲೆ ಚಿತ್ರತಂಡ ಧೈರ್ಯ ತುಂಬಿದ ಬಳಿಕ ಅದ್ಭುತವಾಗಿ ನರ್ತಿಸಿದ್ದಾರಂತೆ ಅವರು. ‘ಅಮಿತಾಭ್ ಅವರಂತಹ ಲೆಜೆಂಡ್ ನಟ ಕಾಣಿಸಿಕೊಂಡಿದ್ದ ಹಾಡಿನಲ್ಲಿ ನಾನು ಡಾನ್ಸ್ ಮಾಡಿರುವುದಕ್ಕೆ ಖುಷಿ ಇದೆ. ಹೃತಿಕ್ ಜತೆ ಕೆಲಸ ಮಾಡಿದ್ದು ಕೂಡ ಸಾಕಷ್ಟು ಅನುಭವ ನೀಡಿದೆ. ಬೇರೆ ಕಲಾವಿದರಿಗೆ ಅವರು ತುಂಬ ಸ್ಪೂರ್ತಿ ತುಂಬುತ್ತಾರೆ’ ಎನ್ನುವುದು ಊರ್ವಶಿ ಅಭಿಪ್ರಾಯ. ಅಂದಹಾಗೆ, ಈ ರೀತಿ ಐಟಂ ಸಾಂಗ್​ನಲ್ಲಿ ಊರ್ವಶಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ‘ಭಾಗ್ ಜಾನಿ’ ಚಿತ್ರದ ‘ಡ್ಯಾಡಿ ಮಮ್ಮಿ..’ ಹಾಡಿನಲ್ಲಿ ಸಖತ್ತಾಗಿಯೇ ಸ್ಟೆಪ್ ಹಾಕಿದ್ದರು. ಬೆಂಗಾಲಿ ಚಿತ್ರವೊಂದರಲ್ಲೂ ತಮ್ಮ ಡಾನ್ಸ್ ಝುಲಕ್ ತೋರಿಸಿದ್ದಾರೆ ಅವರು. 2017ರ ಸಾಲಿನ ಕ್ಲಬ್ ಸಾಂಗ್ ಆಗಿ ಈ ಹಾಡು ಜನಪ್ರಿಯಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂಬ ಆತ್ಮವಿಶ್ವಾಸದಲ್ಲಿದೆ ಚಿತ್ರತಂಡ. ಸಂಜಯ್ ಗುಪ್ತ ನಿರ್ದೇಶನದ ‘ಕಾಬಿಲ್’ ಚಿತ್ರಕ್ಕೆ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಹಣ ಹಾಕಿದ್ದಾರೆ. ಯಾಮಿ ಗೌತಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಚಿತ್ರದ ನಾಯಕ-ನಾಯಕಿಗೆ ಕಣ್ಣು ಕಾಣುವುದಿಲ್ಲ!

 

Leave a Reply

Your email address will not be published. Required fields are marked *

Back To Top