Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಎಚ್ಚರ!… ಮಕ್ಕಳು ಇಷ್ಟಪಡುವ ಪಾಪಡಿಯಲ್ಲಿದೆಯಂತೆ ಪ್ಲಾಸ್ಟಿಕ್‌?

Tuesday, 10.10.2017, 9:09 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಮಂಗಳವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ತಯಾರಿ- ಹೈಕಮಾಂಡ್‌ ಕೇಳಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ- ಟಿಕೆಟ್‌ಗಾಗಿ ಶುರುವಾಗಿದೆ ಭಾರಿ ಪೈಪೋಟಿ

2. ಇದು ಹೆಸರಿಗೆ ಮಾತ್ರ ಆಸ್ಪತ್ರೆ, ಇಲ್ಲಿ ಸಿಗಲ್ಲ ಚಿಕಿತ್ಸ- ತಿಂಗಳ ಹಿಂದೆಯೇ ಖಾಲಿಯಾಗಿದೆ ಡಿಪಿಟಿ ಇಂಜೆಕ್ಷನ್‌- ನೆಲಮಂಗಲದಲ್ಲಿ ಸಾರ್ಜನಿಕರ ಪರದಾಟ

3. ಜಮ್ಮುಕಾಶ್ಮೀರದಲ್ಲಿ ಯೋಧನ ನಿಗೂಢ ಸಾವು ಪ್ರಕರಣ- ಬೆಂಗಳೂರಿಗೆ ಪಾರ್ಥಿವ ಶರೀರ ಆಗಮನ- ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

4. ಅಮೆರಿಕದ ಟೆಕ್ಸಾಸ್‌ನಲ್ಲಿ ಮತ್ತೆ ಗುಂಡಿನ ದಾಳಿ- ಟೆಕ್‌ ವಿವಿಯಲ್ಲಿ ಆಗಂತುಕನಿಂದ ಫೈರಿಂಗ್- ಒಬ್ಬ ಪೊಲೀಸ್‌ ಅಧಿಕಾರಿ ಸಾವು, ಹಲವರಿಗೆ ಗಾಯ


5. ಪ್ಲಾಸ್ಟಿಕ್‌ ಅಕ್ಕಿ, ಸಕ್ಕರೆ ಆಯ್ತು ಈಗ ಪಾಪಡಿ ಸರದಿ- ಹುಬ್ಬಳ್ಳಿಯಲ್ಲಿ ಭಯ ಹುಟ್ಟಿಸಿದೆ ಕುರುಕಲು ತಿಂಡಿ- ಇದನ್ನ ತಿಂದ್ರೆ ಮಕ್ಕಳ ಜೀವಕ್ಕೆ ಕುತ್ತು ಗ್ಯಾರಂಟಿ

ಹುಬ್ಬಳ್ಳಿ: ಇದುವರೆಗೆ ದುಬಾರಿ ಬೆಲೆಯ ಸಕ್ಕರೆ, ಅಕ್ಕಿ ಹಾಗೂ ಮೊಟ್ಟೆಗಳು ಮಾತ್ರ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಡುತ್ತಿದ್ದವು ಹಾಗೂ ಕಲಬೆರೆಕೆಯಾಗ್ತಿದ್ವು. ಆದರೆ, ಇದೀಗ ಅಗ್ಗದ ದರದಲ್ಲಿ ಅಂದ್ರೆ ಕೇವಲ ಒಂದು ರೂಪಾಯಿಗೆ ಸಿಗೊ, ಮಕ್ಕಳು ಬಲು ಇಷ್ಟಪಟ್ಟು ತಿನ್ನೊ ಪಾಪಡಿಗಳೂ ಕೂಡ ಪ್ಲಾಸ್ಟಿಕ್ ನಿಂದ ಕೂಡಿರುತ್ತೆವೆ ಅನ್ನೋ ಸಂಗತಿ ಹುಬ್ಬಳ್ಳಿಗರಲ್ಲಿ ಭಯ ಹುಟ್ಟಿಸಿದೆ.

ರಾಸಾಯನಿಕ, ಪ್ಲಾಸ್ಟಿಕ್ ಮಿಶ್ರಿಯ ಪಾಪಡಿಗಳು ನೋಡಲು ಉದ್ದವಾಗಿ, ಅತ್ಯಂತ ಆಕರ್ಶಕವಾಗಿರುತ್ವೆ. ಈ ಪಾಪಡಿಗಳ ಆಕಾರ ಮತ್ತು ಬಣ್ಣಕ್ಕೆ ಮಕ್ಕಳು ಮರುಳಾಗ್ತಿವೆ. ಈ ಹಿಂದೆ ಪ್ಲಾಸ್ಟಿಕ್ ನ ಕೆಲ ಆಹಾರ ಪದಾರ್ಥಗಳು ಸಾಕಷ್ಟು ಪ್ರಮಾಣದಲ್ಲಿ ಸುದ್ದಿಯಾಗಿದ್ವು. ಇದರ ಬೆನ್ನಲ್ಲೇ ಈಗ ಮತ್ತೊಂದು ಪ್ಲಾಸ್ಟಿಕ್ ನ ಆಹಾರ ಪದಾರ್ಥವೊಂದು ಬೆಳಕಿಗೆ ಬಂದಿದ್ದು ಇದರಲ್ಲಿಯೂ ಕೂಡಾ ಪ್ಲಾಸ್ಟಿಕ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಪ್ಲಾಸ್ಟಿಕ್ ನ ಪಾಪಡ್ ಗಳದ್ದೇ ಮಾತು. ಈವರೆಗೆ ಇದ್ದ ಪಾಪಡ್ ಗಳೊಂದಿಗೆ ಈಗ ಕೆಂಪನೆಯ, ಉದ್ದದ ಪಾಪಡ್ ಗಳನ್ನ ನಗರದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಶಾಲೆಗಳ ಅಕ್ಕ ಪಕ್ಕದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ.

ಸಾಮಾನ್ಯ ಪಾಪಡಿ ಗಳಿಗಿಂತ ಈ ಪಾಪಡ್ ಗಳು ನೋಡಲು ತಿನ್ನಲು ವಿಭಿನ್ನವಾಗಿದ್ದು ಅಲ್ಲದೇ ತಿಂದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆಯಂತೆ. ಇನ್ನು ಇವುಗಳಿಗೆ ಬೆಂಕಿ ಹಚ್ಚಿದರೆ ಪ್ಲಾಸ್ಟಿಕ್ ಹಾಗೇ ಉರಿಯುತ್ತವೆ. ಜೊತೆಗೆ ಕೊನೆಯಲ್ಲಿ ಕೆಲ ತ್ಯಾಜ್ಯ ವಸ್ತುಗಳು ಉಳಿಯುತ್ತವೆ. ಹೀಗಾಗಿ ಇದರಲ್ಲಿ ಪ್ಲಾಸ್ಟಿಕ್ ಇದೆ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುವ ಮೊದಲು ಆಹಾರ ಇಲಾಖೆ ‌ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top