Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

#MeToo ಆರೋಪಗಳ ಪರಾಮರ್ಶೆಗೆ ನ್ಯಾಯಮೂರ್ತಿಗಳ ಸಮಿತಿ ಪ್ರಸ್ತಾವನೆ

Friday, 12.10.2018, 7:31 PM       No Comments

ನವದೆಹಲಿ: ದೇಶಾದ್ಯಂತ #MeToo ಅಭಿಯಾನದಡಿ ಕೇಳಿ ಬರುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪಗಳ ಪರಾಮರ್ಶೆಗೆ ನಾಲ್ವರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಶುಕ್ರವಾರ ತಿಳಿಸಿದ್ದಾರೆ.

” ತಮ್ಮ ವೇದನೆ ನಿವೇದಿಸಿಕೊಂಡ ಎಲ್ಲರ ಮೇಲೂ ನನಗೆ ನಂಬಿಕೆ ಇದೆ. ಆರೋಪ ಮಾಡುತ್ತಿರುವ ಪ್ರತಿಯೊಬ್ಬರ ನೋವು, ಆಘಾತಗಳ ಬಗೆಗೆ ನನಗೆ ಸಹಾನುಭೂತಿ ಇದೆ,” ಎಂದು ಮೇನಕಾ ಗಾಂಧಿ ಅವರು ಹೇಳಿಕೊಂಡಿದ್ದಾರೆ.

ಅಲ್ಲದೆ, “#MeToo ಅಭಿಯಾನದಲ್ಲಿ ಕೇಳಿ ಬರುತ್ತಿರುವ ಆರೋಪಗಳನ್ನು ಪರಾಮರ್ಶೆ ಮಾಡಲು ನಾಲ್ವರು ಹಿರಿಯ ನ್ಯಾಯಮೂರ್ತಿಗಳುಳ್ಳ ಸಮಿತಿ ರಚಿಸಲು ನಾನು ಪ್ರಸ್ತಾಪಿಸಿದ್ದೇನೆ. ಇದರಲ್ಲಿ ವಕೀಲರು ಸದಸ್ಯರಾಗಿರುತ್ತಾರೆ,”ಎಂದು ಅವರು ತಿಳಿಸಿದ್ದಾರೆ.

“ಲೈಂಗಿಕ ದೌರ್ಜನ್ಯಗಳ ಆರೋಪಗಳ ಪರಾಮರ್ಶೆಯ ಕಾನೂನಾತ್ಮಕ ಮತ್ತು ಸಾಂಸ್ಥಿಕ ರಚನೆ ಮೇಲೆ ಈ ಸಮಿತಿ ಗಮನ ಹರಿಸಲಿದೆ. ಅಗತ್ಯವಿದ್ದರೆ ಕೆಲ ದೂರುದಾರರನ್ನೂ ಇದರಲ್ಲಿ ಸೇರಿಸಲಾಗುವುದು. ನಂತರ ಈ ಸಮಿತಿಯನ್ನು ಬಲಪಡಿಸಲು ಅಗತ್ಯವಿರುವ ಸಲಹೆಗಳನ್ನು ಅವರಿಂದ ಪಡೆಯಲಾಗುವುದು,” ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ್ದ ಮೇನಕಾ ಗಾಂಧಿ ಅವರು, ಮಹಿಳೆಯರು ಮಾತನಾಡಲೂ ಭಯಪಡುತ್ತಿರುವಾಗ ಅವರು, ಯಾವುದೇ ವ್ಯಕ್ತಿಯ ವಿರುದ್ಧ ಮಾಡುವ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರು.

ಇದೇ ಮಧ್ಯೆ, ವೃತ್ತಿ ನಿರತ ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ಧೈರ್ಯದಿಂದ ಹೇಳಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, www.shebox.nic.in ಗೆ ದೂರುಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, #HelpMeWCD ಅಡಿಯಲ್ಲಿ [email protected] ಮೂಲಕ ತಮ್ಮ ಇಲಾಖೆಗೆ ದೂರು ಸಲ್ಲಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

 

Leave a Reply

Your email address will not be published. Required fields are marked *

Back To Top