Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News

ಗೌರಿ ಲಂಕೇಶ್​ ಹತ್ಯೆ: ಸರ್ಕಾರದ ವಿರುದ್ಧ ಬಿಎಸ್​ವೈ ಆಕ್ರೋಶ

Wednesday, 06.09.2017, 10:08 AM       No Comments

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್​ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್​ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲದಿರುವುದು ಸಾಬೀತಾಗಿದೆ. ತನ್ನ ಮನೆಯಲ್ಲೇ ಹತ್ಯೆಯಾಗಿರುವುದು ನೈಜ ಪರಿಸ್ಥಿತಿಯನ್ನು ತೋರಿಸಿದೆ ಎಂದು ಕಿಡಿಕಾರಿದ್ದಾರೆ.

ಗೌರಿ ಲಂಕೇಶ್ ಅವರು ನಿರ್ಭೀತಿಯಿಂದ ಬರೆಯುತ್ತಿದ್ದರು. ಅಂತಹ ಪತ್ರಕರ್ತೆಯ ಹತ್ಯೆ ಅವರ ಮನೆಯಲ್ಲೇ ಆಗಿರುವುದು ಖಂಡನೀಯ. ಕೂಡಲೇ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಇದೇ ವೇಳೆ ಕಲಬುರ್ಗಿ ಹತ್ಯೆಯಲ್ಲಿಯೂ ಹಂತಕರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.(ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *

Back To Top