Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಮಂಡ್ಯ ರಾಜಕಾರಣಕ್ಕೆ ಎಚ್​ಡಿಕೆ ಸಹೋದರ ಡಾ. ರಮೇಶ್​ ಎಂಟ್ರಿ

Saturday, 13.01.2018, 4:56 PM       No Comments

ಮಂಡ್ಯ: ರಾಜ್ಯ ರಾಜಕಾರದಲ್ಲಿ ಸದಾ ಕುತೂಹಲದ ಕೇಂದ್ರ ಬಿಂದುವಾಗಿರುವ ಮಂಡ್ಯದಲ್ಲಿ ಜೆಡಿಎಸ್​ ಹೊಣೆಗಾರಿಕೆಯನ್ನು ಮಾಜಿ ಪ್ರಧಾನಿ ಮತ್ತು ಜೆಡಿಎಸ್​ ವರಿಷ್ಠ ಎಚ್.​ಡಿ. ದೇವೇಗೌಡ ಅವರ ಕಿರಿಯ ಪುತ್ರ ಡಾ. ಎಚ್​.ಡಿ. ರಮೇಶ್​ ಅವರಿಗೆ ವಹಿಸಲಾಗಿದೆ.

ಶನಿವಾರ ಅವರು ನಗರದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕುಮಾರ ಪರ್ವ ಬೈಕ್​ ರ‍್ಯಾಲಿಗೆ ಚಾಲನೆ ನೀಡುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ಕಾರ್ಯಕ್ಕೆ ಅಡಿಪಾಯ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಡ್ಯ ಜಿಲ್ಲೆ ಜೆಡಿಎಸ್​ ಭದ್ರಕೋಟೆ, 5 ವರ್ಷದಿಂದ ಇಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಪ್ರಸ್ತುತ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಎಲ್ಲರೂ ಒಗ್ಗೂಡಿ ಹೋಗುವಂತೆ ಹೇಳಲು ಇಂದು ಆಗಮಿಸಿದ್ದೇನೆ ಎಂದು ರಮೇಶ್​ ತಿಳಿಸಿದರು.

ರೈತ ನಾಯಕ ನಂಜುಂಡೇಗೌಡ ಅವರಿಗೆ ನಾವು ಮೋಸ ಮಾಡಿಲ್ಲ. ಪಕ್ಷ ಸೇರಿ ಸಂಘಟನೆ ಮಾಡಿ ಎಂದು ಹೇಳಿದ್ದೆವು. ಅವರು ಬಿಜೆಪಿ ಸೇರುವ ವಾರದ ಹಿಂದೆ ಅವರೊಂದಿಗೆ ಒಂದು ಘಂಟೆಗಳ ಕಾಲ ಸುದೀರ್ಘ ಚರ್ಚೆ ಮಾಡಿದೆ. ದೊಡ್ಡಗೌಡರು ಸಹ ಅರ್ಧ ಗಂಟೆ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅವರು ಒಪ್ಪದೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ದೇವರು ಒಳ್ಳೆಯರು ಮಾಡಲಿ ಎಂದು ರಮೇಶ್​ ನಂಜುಂಡೇಗೌಡರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

Back To Top