Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಜೆಡಿಎಸ್‌ ಒಂದು ಸುಳ್ಳು ಪಕ್ಷ, ಬಿಜೆಪಿ ಅಂಗಪಕ್ಷ: ಇಕ್ಬಾಲ್‌ ಅನ್ಸಾರಿ

Friday, 10.08.2018, 9:20 AM       No Comments

ಕೊಪ್ಪಳ: ಜೆಡಿಎಸ್‌, ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್‌ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.

ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಈ ಹಿಂದೆ ನೀಡಿದ ಆಡಳಿತದಂತೆ ಬೇರೆ ಯಾರು ಆಡಳಿತ ನೀಡಲು ಸಾಧ್ಯವಿಲ್ಲ. ಬಿಜೆಪಿ ಜೆಡಿಎಸ್‌ನವರು ಕೋಟಿ ಕೋಟಿ ಲೂಟಿಯಾಗಿದೆ ಎನ್ನುತ್ತಾರೆ. ಬಿಜೆಪಿ-ಜೆಡಿಎಸ್ ಎರಡೂ ಒಂದೇ ನಾಣ್ಯದ 2 ಮುಖ ಇದ್ದಂತೆ. ಬಿಜೆಪಿಯನ್ನು ಗೆಲ್ಲಿಸುವುದೇ ಜೆಡಿಎಸ್​ನ ಗುರಿಯಾಗಿದೆ. ಜೆಡಿಎಸ್ ಎನ್ನುವುದೇ ಒಂದು ಸುಳ್ಳು ಪಕ್ಷ ಎಂದು ಹೇಳಿದರು.

ಗಂಗಾವತಿಯಲ್ಲಿರುವ ಜೆಡಿಎಸ್‌ ಬಿಜೆಪಿ ಪಕ್ಷದ ಅಂಗಪಕ್ಷ. ಚುನಾವಣೆ ಬಂದಾಗ ಮುಸ್ಲಿಂ ಮತ ಇದ್ದಲ್ಲಿ ಜೆಡಿಎಸ್ ಅಂತಾರೆ. ಹಿಂದುಗಳ ಮತ ಹೆಚ್ಚಿದ್ದಲ್ಲಿ ಬಿಜೆಪಿ ಅಂತಾರೆ. ಈ ಕಾರಣಕ್ಕೆ ಜೆಡಿಎಸ್‌ನ್ನು ನಂಬಬೇಡಿ. ಇಂತ ಪಕ್ಷಗಳು ಯಾತಕ್ಕಾಗಿ ಇದ್ದಾವೆ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ಗೆಲ್ಲಿಸಲು ಇವೆ ಎಂದು ಬಿಜೆಪಿ, ಜೆಡಿಎಸ್‌ ವಿರುದ್ಧ ಕಿಡಿಕಾರಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top