Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಇಂದು ಸಮನ್ವಯ ಸಭೆ

Thursday, 14.06.2018, 3:04 AM       No Comments

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ ಗುರುವಾರ (ಜೂ.14) ನಡೆಯಲಿದ್ದು, 5 ಪ್ರಮುಖ ವಿಷಯ ಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಪರಮೇಶ್ವರ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಸದಸ್ಯರಾಗಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು 20 ದಿನ ಕಳೆದಿದ್ದು, ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಕುರಿತು ಈವರೆಗೆ ಸ್ಪಷ್ಟತೆ ಮೂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಥಮ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯುವುದೆಂದು ನಿಶ್ಚಯವಾಗಿದ್ದು, ಯಾವ ವಿಚಾರದ ಬಗ್ಗೆ ನಿಲುವೇನಾಗಿರಬೇಕೆಂದು ಎರಡೂ ಪಕ್ಷದ ನಾಯಕರೂ ಈಗಾಗಲೇ ಚರ್ಚೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪರವಾಗಿ ಡಿಸಿಎಂ ಪರಮೇಶ್ವರ್ ಪಟ್ಟಿ ಮಾಡಿಕೊಂಡಿದ್ದು, ಕೆ.ಸಿ.ವೇಣುಗೋಪಾಲ್ ಜತೆ ರ್ಚಚಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಸಲಹೆ ಪಡೆದುಕೊಂಡಿದ್ದಾರೆ.

ಜುಲೈ 5ಕ್ಕೆ ಬಜೆಟ್ ಮಂಡನೆಯಾಗಲಿದ್ದು, ಸರ್ಕಾರದ ಕಾರ್ಯಕ್ರಮ ಹಾಗೂ ಆದ್ಯತೆ ಕುರಿತು ಎರಡೂ ಪಕ್ಷದ ನಾಯಕರು ಅಭಿಪ್ರಾಯ ಮಂಡಿಸಲಿದ್ದಾರೆ. ರೈತರ ಸಾಲ ಮನ್ನಾ ಬಗ್ಗೆ ಸಾಕಷ್ಟು ಒತ್ತಡ ಇರುವ ಕಾರಣ, ಕಾಂಗ್ರೆಸ್ ನಿಲುವು ಮತ್ತು ಸರ್ಕಾರದ ಕಡೆಯಿಂದ ಈವರೆಗಿನ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಯುವುದು. ಉಳಿದಂತೆ ಯಾವ ನಿಗಮ ಮಂಡಳಿಗಳು ಯಾವ ಪಕ್ಷಕ್ಕೆ ಎಂಬುದು ನಿಶ್ಚಯವಾಗಲಿದೆ. ಪ್ರಮುಖವಾದ ನಿಗಮ ಮಂಡಳಿಗಳ ಬಗ್ಗೆ ಜಗ್ಗಾಟ ನಡೆಯುವ ಸಾಧ್ಯತೆ ಇದೆ.

ಇನ್ನೊಂದು ಪ್ರಮುಖ ಸಂಗತಿ ಎಂದರೆ ಯಾವ ಜಿಲ್ಲೆಗೆ ಯಾರನ್ನು ಜಿಲ್ಲಾ ಉಸ್ತುವಾರಿ ಮಾಡಬೇಕೆಂಬುದೂ ಸಹ ಚರ್ಚೆಗೆ ಬರಲಿದೆ. ಮುಖ್ಯವಾಗಿ ಮಂಡ್ಯ, ಹಾಸನ, ಮೈಸೂರು, ರಾಮನಗರ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಅಂತಿಮ ತೀರ್ವನವಾಗಬೇಕಾಗಿದೆ.

ಪಂಚವಿಚಾರಗಳ ಚರ್ಚೆ

1. ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?

2. ನಿಗಮ-ಮಂಡಳಿ ಯಾವ ಪಕ್ಷಕ್ಕೆಷ್ಟು?

3. ಸಾಮಾನ್ಯ ಕಾರ್ಯಕ್ರಮಗಳೇನು?

4. ರೈತರ ಸಾಲಮನ್ನಾದಲ್ಲಿ ಪ್ರಕ್ರಿಯೆಗಳು

5. ಮುಂದಿನ ಸಂಪುಟ ವಿಸ್ತರಣೆ

Leave a Reply

Your email address will not be published. Required fields are marked *

Back To Top