Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಯಮುನಾ ಹೆದ್ದಾರಿ 2500 ಕೋಟಿ ರೂ.ಗೆ ಮಾರಾಟ! ಯಾಕೆ ಗೊತ್ತಾ?

Friday, 13.10.2017, 4:13 PM       No Comments

ನವದೆಹಲಿ: ದೊಡ್ಡವ್ರು ಅನಿಸ್ಕೊಂಡವ್ರ ಕತೆಯೆಲ್ಲಾ ಇಷ್ಟೇಯಾ! ಅದು ಮಲ್ಯನೋ, ಸುಬ್ರತೋನ ಸಹಾರಾನೋ, ಅಥವಾ ಇದೀಗ ಜೇಪೀ ಕಂಪನಿಯೋ … ಎಲ್ಲರದು ದಿವಾಳಿತನವೇ.

ಭಾರತದ ಅತ್ಯಂತ ಬೃಹತ್​ ರಿಯಲ್ ಎಸ್ಟೇಟ್​ ಕಂಪನಿಗಳಲ್ಲಿ ಒಂದಾದ ಜೇಪೀ ಕಂಪನಿಯು ತಾನು ಅಭಿವೃದ್ಧಿ ಪಡಿಸಿರುವ ಯಮುನಾ ಹೆದ್ದಾರಿಯನ್ನು 2,500 ಕೋಟಿ ರೂಪಾಯಿಗೆ ಮಾರಲು ಸುಪ್ರಿಂ ಕೋರ್ಟ್​ನ ಅನುಮತಿ ಕೋರಿದೆ.

ದಿವಾಳಿಯಾಗುವ ದುಃಸ್ಥಿತಿಗೆ ಬಂದಿರುವ ಕಂಪನಿ ಹೆದ್ದಾರಿಯನ್ನು ಬೇರೊಂದು ಕಂಪನಿಗೆ ಮಾರಿ ಅದರಿಂದ ಬಂದ ಹಣವನ್ನು ಅಂದಾಜು 30,000 ಜನರಿಗೆ ನೀಡಲು ಯೋಚಿಸಿದೆ. ಈ 30,000 ಜನ ಜೇಪೀ ಇನ್​​ಫ್ರಾಟೆಕ್​ದಿಂದ ಅಪಾರ್ಟ್ಮೆಂಟ್ ಖರೀದಿಸಿದ್ದರು. ಆದರೆ ಅವರಿಗೆ ಆ ಮನೆಗಳನ್ನು ನೀಡುವಲ್ಲಿ ಜೇಪೀ ವಿಫಲವಾಗಿದೆ. ಜೇಪೀಯಿಂದ ಯಮುನಾ ಹೆದ್ದಾರಿಯನ್ನ 2,500 ಕೋಟಿ ರೂಪಾಯಿಗೆ ಖರೀದಿಸಲು ಈಗಾಗಲೇ ಮತ್ತೊಂದು ಕಂಪನಿ ಮುಂದಾಗಿದೆ.

ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ

ದೆಹಲಿಯಿಂದ ಆಗ್ರಾದ ವರೆಗಿನ ಯಮುನಾ ಹೆದ್ದಾರಿಯನ್ನು 2012ರಲ್ಲಿ ಜೇಪೀ ಇನ್​ಫ್ರಾಟೆಕ್​ 13,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಹೆದ್ದಾರಿಯ ಬದಿಯಲ್ಲಿ ತಲೆ ಎತ್ತಲಿರುವ ಟೌನ್​ಶಿಪ್​ ಯೋಜನೆಗಳಲ್ಲಿ ಕೂಡ ಜೇಪೀ ಪಾಲೂ ಹೊಂದಿದೆ ಹಾಗೂ ಹೆದ್ದಾರಿಯಲ್ಲಿ ಸಂಗ್ರಹವಾಗುವ ಸುಂಕದಿಂದ ಕೂಡ ಲಾಭ ಗಳಿಸಲಿದೆ.

ಅಕ್ಟೋಬರ್​ 27ರ ಒಳಗಾಗಿ 2,000 ಕೋಟಿ ರೂಪಾಯಿಯನ್ನು ಕೋರ್ಟ್​ನಲ್ಲಿ ಜಮೆ ಮಾಡುವಂತೆ ಸುಪ್ರಿಂ ಕೋರ್ಟ್​ ಜೇಪೀಗೆ ಹೇಳಿದೆ. ಇದರಿಂದ ಮನೆ ಖರೀದಿಸಿದವರಿಗೆ ಹಣ ಹಿಂದಿರುಗಿಸಬಹುದು ಎಂಬುದು ಕೋರ್ಟ್ ಆಲೋಚನೆ. ಇದರ ಮಧ್ಯೆಯೇ ಇನ್ನೊಂದು ಸಂಕಷ್ಟಕ್ಕೆ ಸಿಲುಕಿರುವ ಕಂಪನಿಯು ದಿವಾಳಿ ಎಂದು ಘೋಷಣೆಯಾಗುವ ಹೆದರಿಕೆಯಲ್ಲಿದೆ. ಬ್ಯಾಂಕ್​ನಿಂದ ಪಡೆದ 500 ಕೋಟಿ ರೂಪಾಯಿ ಮರಳಿಸದ ಕಾರಣ ಈ ಭೀತಿ ಈಗ ಕಂಪನಿಗೆ ಎದುರಾಗಿದೆ.

ದಿವಾಳಿಯಾದರೆ ಗ್ರಾಹಕರಿಗೆ ಹಣ ನೀಡುವುದು ಕೂಡ ತೊಂದರೆಯಾಗಲಿದೆ. ಅತ್ತ ಮನೆಯೂ ಸಿಗದೆ ಇತ್ತ ಹಣವೂ ಸಿಗದೆ ಗ್ರಾಹಕರು ಪರದಾಡುವ ಸ್ಥಿತಿ ಎದುರಾಗಬಹುದಾಗಿದೆ. ಇದಕ್ಕೆ ಕಾರಣ ಕಳೆದ ವರ್ಷ ಸರ್ಕಾರ ತಂದಿರುವ ದಿವಾಳಿ ಕುರಿತಾದ ಕಾನೂನು, ಬ್ಯಾಂಕ್​ಗಳಿಗೆ ಹೆಚ್ಚು ಅನುಕೂಲಕರವಾಗಿವೆ. ಆದ ಕಾರಣ ಉತ್ತರ ಪ್ರದೇಶದಲ್ಲಿ ಜೇಪೀಯಿಂದ ಮನೆಯನ್ನು ಖರಿದಿಸಿರುವ 40 ಗ್ರಾಹಕರು ದಿವಾಳಿ ಕುರಿತಾದ ಕಾನೂನನ್ನು ಪ್ರಶ್ನಿಸಿದ್ದಾರೆ. ಈ ಕಾನೂನು ಗ್ರಾಹಕ ಸ್ನೇಹಿ ಅಲ್ಲ ಎಂದಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top