Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಮೋದಿ-ಅಬೆ ರೋಡ್ ಶೋ: ಜಪಾನ್​ ಪ್ರಧಾನಿ ಸ್ವಾಗತಕ್ಕೆ ಅದ್ಧೂರಿ ಸಿದ್ಧತೆ

Wednesday, 13.09.2017, 9:03 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಬುಧವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಕಾಂಗ್ರೆಸ್‌ ಜತೆ ಮುಂದುವರಿಯುತ್ತೆ ದಳದ ದೋಸ್ತಿ- ಪಾಲಿಕೆಯಲ್ಲಿ ಮತ್ತೆ ಸಮ್ಮಿಶ್ರ ಆಡಳಿತ- ಮೇಯರ್ ಸೀಟ್‌ ಮೇಲೆ ಮಾಜಿ ಪ್ರಧಾನಿ ಕಣ್ಣು

2. ನಾಲ್ಕು ರೂಪಾಯಿಗೆ ಬೇಡ ಐದೂವರೆ ಆದ್ರೆ ಕೊಡಿ- ಮೊಟ್ಟೆ ಭಾಗ್ಯಕ್ಕೆ ಯರಾಽಬಿರಿಽ ಖರ್ಚು- ಕೊಪ್ಪಳದಲ್ಲಿ ಭಾರಿ ಟೆಂಡರ್‌ ಗೋಲ್‌ಮಾಲ್

3. ದೇಶ ಕಾಯೋ ಯೋಧನಿಗೇ ರಕ್ಷಣೆ ಇಲ್ಲ- ಆಸ್ತಿಗಾಗಿ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ- ಬೆಳಗಾವಿಯ ದೊಡ್ಡವರ ದೌರ್ಜನ್ಯ ಕೇಳೋರಿಲ್ಲ

4. 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ- ಖಾಸಗಿ ಶಾಲೆಯ ಸೆಕ್ಯೂರಿಟಿ ಗಾರ್ಡ್​ನಿಂದ ಕೃತ್ಯ- ರಾತ್ರೋರಾತ್ರಿ ಪೋಷಕರಿಂದ ಪ್ರತಿಭಟನೆ


ಜಪಾನ್​ ಪ್ರಧಾನಿ ಸ್ವಾಗತಕ್ಕೆ ಅದ್ಧೂರಿ ಸಿದ್ಧತೆ: ಗುಜರಾತ್​​ನಲ್ಲಿ ಮೋದಿ-ಅಬೆ ರೋಡ್ ಶೋ

ನವದೆಹಲಿ: ಎರಡು ದಿನದ ಭಾರತ ಪ್ರವಾಸ ಕೈಗೊಂಡಿರುವ ಜಪಾನ್​ ಪ್ರಧಾನಿ ಶಿಂಜೊ ಅಬೆ ಸ್ವಾಗತಕ್ಕೆ ಭಾರತ ಸಜ್ಜಾಗಿದೆ.

ಇಂದು ಮಧ್ಯಾಹ್ನದ ವೇಳೆಗೆ ಗುಜರಾತ್​ನ ಅಹಮದಾಬಾದ್​ಗೆ ಜಪಾನ್ ಪ್ರಧಾನಿ ಆಗಮಿಸಲಿದ್ದಾರೆ. ಇದರ ನಿಮಿತ್ತ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಾದ್ಯಂತ ಒಟ್ಟು 9 ಸಾವಿರ ಮಂದಿ ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಅಷ್ಟೇ ಅಲ್ಲದೆ ಬಾಂಬ್ ನಿಷ್ಕ್ರಿಯ ದಳ, ಎನ್​ಎಸ್​​ಜಿ ಪಡೆ ಕೂಡಾ ಅಹಮದಾಬಾದ್​​ನಲ್ಲಿ ಬೀಡುಬಿಟ್ಟಿದೆ. ಭದ್ರತೆಯ ಉಸ್ತುವಾರಿಗೆ 6 ಮಂದಿ ಎಸ್​​ಪಿ, 35 ಮಂದಿ ಡಿವೈಎಸ್​​​​ಪಿ, 70 ಇನ್ಸ್​​ಪೆಕ್ಟರ್​ಗೆ ವಹಿಸಲಾಗಿದೆ.

ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ಜತೆ ಜಪಾನ್ ಪ್ರಧಾನಿ 8 ಕಿ.ಮೀ. ಜಂಟಿ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೆ, ಸಬರಮತಿ ಆಶ್ರಮಕ್ಕೆ ಶಿಂಜೊ ಅಬೆ ಭೇಟಿ ನೀಡಲಿದ್ದು, ಇದಕ್ಕಾಗಿ ಸಾಕಷ್ಟು ಸಿದ್ದತೆಗಳನ್ನ ಮಾಡಲಾಗಿದೆ. ರೈಲ್ವೆ ಸ್ಟೇಷನ್​​ ಸೇರಿದಂತೆ ನಗರದಾದ್ಯಂತ ಪೊಲೀಸ್​ ಸರ್ಪಗಾವಲನ್ನ ಹಾಕಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top