More

    ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ನಡೆಯದಿರಲಿ; ಜನಮತ

    ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮವಾಸ್ತವ್ಯ ಯೋಜನೆ ಆಶಾದಾಯಕವಾಗಿದ್ದರೂ, ಕಾಟಾಚಾರಕ್ಕೆ ನಡೆಯಬಾರದು. ರಾಜ್ಯದ ಹಲವಾರು ಹಳ್ಳಿಗಳು ಇಂದಿಗೂ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ನಾಗರಿಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಒಂದು ಗ್ರಾಮದಲ್ಲಿ ಒಂದು ದಿನ ಗ್ರಾಮವಾಸ್ತವ್ಯ ಮಾಡಿ ಯೋಜನೆ ಯಶಸ್ವಿಯಾಯಿತೆಂದು ಬೀಗುವುದು ಖಂಡಿತ ಸರಿಯಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ತಹಸೀಲ್ದಾರರು, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ನೈಜ ಸಮಸ್ಯೆಗಳನ್ನು ಅರಿಯಬಹುದು. ಅಭಿವೃದ್ಧಿಗೊಂಡ ಗ್ರಾಮಗಳಿಗೆ ಹೋಗಿ ವಾಸ್ತವ್ಯ ಮಾಡುವುದಕ್ಕಿಂತ ತಾಂಡಾ, ಕುಗ್ರಾಮಗಳಿಗೆ ತೆರಳಿ ವಾಸ್ತವ್ಯ ಹೂಡಿದರೆ ಅದಕ್ಕೊಂದು ಅರ್ಥವಾದರೂ ಬಂದಿತು.

    ಗ್ರಾಮೋದ್ಧಾರದ ನಿಟ್ಟಿನಲ್ಲಿ ಪ್ರಮುಖವಾಗಿ, ರಾಜ್ಯದ ಪ್ರತಿ ಹಳ್ಳಿವ್ಯಾಪ್ತಿಯ ಪಂಚಾಯಿತಿಗಳನ್ನು ಸಬಲೀಕರಣ ಮಾಡಬೇಕು. ಅಲ್ಲಿನ ಅಧಿಕಾರಿ ವರ್ಗವು ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟು, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಲ್ಲಿನ ಸಿಬ್ಬಂದಿಗೆ ಬಯೋಮೆಟ್ರಿಕ್ ಅಳವಡಿಸಬೇಕು. ನಿಗದಿತ ಕಾಲಾವಧಿಯಲ್ಲಿ ನಾಗರಿಕರಿಗೆ ಸೌಲಭ್ಯಗಳನ್ನು ತಲುಪಿಸಬೇಕು.

    | ಮಹಾಂತೇಶ ರಾಜಗೋಳಿ ಬೈಲಹೊಂಗಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts