More

    ಜನಮತ; ಮೌಖಿಕ ಪರೀಕ್ಷೆ ರದ್ದು ಸ್ವಾಗತಾರ್ಹ

    ಈ ಹಿಂದೆ ಪ್ರತಿಯೊಂದು ಸರ್ಕಾರಿ ಹುದ್ದೆಯ ನೇಮಕಾತಿ ವೇಳೆ ಮೌಖಿಕ ಪರೀಕ್ಷೆ ಕಡ್ಡಾಯವಾಗಿತ್ತು. ಅದರಿಂದಾಗಿ ಲಿಖಿತ ಪರೀಕ್ಷೆಯಲ್ಲಿ ಶೇಕಡ 70 ಅಂಕಗಳಿಸಿದರೂ ಇಂಟರ್​ವ್ಯೂನಲ್ಲಿ ಫೇಲ್ ಆಗುತ್ತಿದ್ದರು. ಅವರೆಲ್ಲ ಇಡೀ ವರುಷ ಓದಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದವರು. ಆದರೆ ಇಂಟರ್​ವ್ಯೂನಲ್ಲಿ ಹಣ ಅಥವಾ ದೊಡ್ಡ ವ್ಯಕ್ತಿಗಳ ಪ್ರಭಾವದ ಹೊರತು ಅಭ್ಯರ್ಥಿಗಳ ನಿಯುಕ್ತಿಯಾಗುತ್ತಿರಲಿಲ್ಲ. ಸಾಮಾನ್ಯ ಪ್ರತಿಭಾವಂತರನ್ನು ಕಡೆಗಣಿಸುತ್ತಿದ್ದರು. ಒಂದು ವೇಳೆ ಅಂತಹ ಪ್ರತಿಭಾವಂತರು ಕೆಪಿಎಸ್​ಸಿ ಪರೀಕ್ಷೆಯನ್ನು ಎದುರಿಸಿದರೆ ಕ್ಲಾಸ್-1, ಕ್ಲಾಸ್-2 ಹುದ್ದೆಗಳ ನೇಮಕದಲ್ಲಿ ಬಾರಾ ಭಾನಗಡಿ ನಡೆಯುತ್ತಲೇ ಇತ್ತು. ನಾನು ಕೂಡ 1976ರಿಂದ 1985ರವರೆಗೆ ನಾಲ್ಕು ಬಾರಿ ಹೆಚ್ಚಿನ ಅಂಕಗಳಿಸಿ ವರ್ಗ-1 ಮತ್ತು ವರ್ಗ-2 ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೆ.

    ಆದರೆ ನನಗೆ ಹಣ ಅಥವಾ ಪ್ರಭಾವ ಬಳಸುವ ಸಾಮರ್ಥ್ಯ ವಿಲ್ಲದ್ದರಿಂದ ವರ್ಗ-1 ಅಥವಾ 2ರಲ್ಲಿರುವ ಎ.ಸಿ ಅಥವಾ ಡಿವೈಎಸ್​ಪಿ ಹೋಗಲಿ ತಹಶೀಲ್ದಾರ್ ಹುದ್ದೆ ಕೂಡ ಸಿಗಲಿಲ್ಲ. ನನಗೆ ಸಿಕ್ಕ ಹುದ್ದೆ ಸರ್ಕಾರಿ ಪ್ರೌಢಶಾಲೆಯ ಹೆಡ್​ವಾಸ್ಟರ್. ಆ ಪೋಸ್ಟಿಂಗ್ ಕೂಡ ಬೀದರ್​ಗೆ. ಆವಾಗಲೇ ಪ್ರತಿಷ್ಠಿತ ಕಾಲೇಜ್​ನಲ್ಲಿ ಉಪನ್ಯಾಸಕ ಹುದ್ದೆ ದೊರೆತು ಕಾಯಂ ಆಗಿದ್ದರಿಂದ ನಾನು ಅಲ್ಲಿಗೆ ಹೋಗಲಿಲ್ಲ. ಮೌಖಿಕ ಪರಿಕ್ಷೆಯ ರದ್ದತಿಯಿಂದ ಕೆಪಿಎಸ್​ಸಿ ಕರ್ಮಕಾಂಡಕ್ಕೆ ಬ್ರೇಕ್ ಬಿದ್ದಿದೆ.

    ಈ ಪದ್ಧತಿ ಯಾವಾಗಲೋ ಬರಬೇಕಿತ್ತು. ಈಗಾದರೂ ಬಂದಿದೆ ಎಂಬುದು ಸಮಾಧಾನಕರ. ಈ ಹಿಂದೆ ‘ಸಿ’ ದರ್ಜೆ ಹುದ್ದೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ‘ನೋ ಇಂಟರ್​ವ್ಯೂ’ ಪದ್ಧತಿ ಕ್ಲಾಸ್ -1, ಕ್ಲಾಸ್-2 ಮತ್ತು ಇಂಜಿನಿಯರ್, ವೈದ್ಯರ ಆಯ್ಕೆಗೂ ಅನ್ವಯಿಸಿರುವುದು ಸ್ವಾಗತಾರ್ಹ. ಇದರಿಂದಾಗಿ ಭ್ರಷ್ಟಾಚ್ಚಾರ ಇನ್ನಷ್ಟು ಕಡಿಮೆಯಾಗಲಿದೆ. ಸರ್ಕಾರಿ ಆಡಳಿತದ ಭಾರ ಪ್ರತಿಭಾನ್ವಿತ, ಪ್ರಾಮಾಣಿಕ, ಕರ್ತವ್ಯಪ್ರಜ್ಞೆಯುಳ್ಳ ಜನರ ಕೈಗೆ ಹೋಗುವುದರಿಂದ ಅನವಶ್ಯಕ ವಿಳಂಬ, ಕಾಲಹರಣ ತಪ್ಪಲಿದೆ.

    | ಡಾ. ಎಸ್.ಡಿ. ನಾಯ್ಕ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts