Friday, 19th October 2018  

Vijayavani

 ಹಾಲು, ತುಪ್ಪ ಮಾರೋ ನೆಪದಲ್ಲಿ ಬರ್ತಾನೆ -ಒಂಟಿ ಮನೆಗಳಲ್ಲಿ ಚಿನ್ನ ಎಗರಿಸ್ತಾನೆ - ಸಿಕ್ಕಿಬಿದ್ದ ಚೋರ ಈಗ ಕಂಬಿ ಎಣಿಸ್ತಾನೆ         ಗೃಹಿಣಿ ಜತೆ ಅಂಕಲ್ ಸ್ನೇಹ ‘ಸಂಬಂಧ’ -ಬೇಡ ಅಂದಿದ್ದಕ್ಕೆ 18 ಬಾರಿ ಇರಿದ -ಚಾಕು ಹಿಡಿದೇ ಪೊಲೀಸರಿಗೆ ಶರಣಾದ        ಬಸ್ಸಲ್ಲಿ ಹೋಗೋ ಮಹಿಳೆಯರೇ ಹುಷಾರು -ನಿಮ್ಮ ಕೂದಲನ್ನೇ ಕತ್ತರಿಸ್ತಾರೆ ಚೋರರು - ಖದೀಮನಿಗೆ ಗ್ರಹಚಾರ ಬಿಡಿಸಿದ ಜನರು         ಸರ್ಕಾರಿ ವೈದ್ಯರ ಅಟೆಂಡೆನ್ಸ್ ಮೇಲೆ ಕಣ್ಣು -ಹಾಜರಾತಿಗೆ ಆಧಾರ್ ಕಡ್ಡಾಯ- ರೂಲ್ಸ್ ತರಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧಾರ        ರಾಜಧಾನಿಯಲ್ಲಿ ಆಯುಧ ಪೂಜೆ ಸಡಗರ -ಮಾರುಕಟ್ಟೆಗಳಲ್ಲಿ ಜೋರಾಯ್ತು ಹೂವು, ಹಣ್ಣು ವ್ಯಾಪಾರ -ಪೊಲೀಸ್ ಠಾಣೆಗಳಲ್ಲೂ ಪೂಜೆ       
Breaking News

ಮೋದಿ ಭೇಟಿ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈ ಅಲರ್ಟ್‌

Friday, 18.05.2018, 6:21 PM       No Comments

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಶ್ರೀನಗರ ಮತ್ತು ಜಮ್ಮುವಿನ ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಒಳ ಬರುವ ಮತ್ತು ಹೊರ ಹೋಗುವ ವಾಹನಗಳು ಮತ್ತು ನಿವಾಸಿಗಳನ್ನು ಕೂಡ ಪೊಲೀಸರು ಹಾಗೂ ಸಿಆರ್​ಪಿಪಿಎಫ್ ಸಿಬ್ಬಂದಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಭೇಟಿ ಸಮಯದಲ್ಲಿ ಯಾವುದೇ ಅನಧಿಕೃತ ಚಲನೆಯನ್ನು ತಡೆಗಟ್ಟಲು ಮತ್ತು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮ್ಯಾಕಿಶಿಫ್ಟ್ ಬ್ಯಾರಿಕೇಡ್‌ ಮತ್ತು ಮೊಬೈಲ್ ಬಂಕರ್‌ಗಳನ್ನು ಇರಿಸಲಾಗಿದೆ. ಒಟ್ಟಾರೆ ಮೋದಿ ಅವರಿಗೆ ಸೇನೆ ಬಾಹ್ಯ ಭದ್ರತೆ ಒದಗಿಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ನಾಳೆ ರಾಜ್ಯಾದ್ಯಂತ ಮೂರು ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ 330 ಮೆಗಾ ವ್ಯಾಟ್ ಸಾಮರ್ಥ್ಯದ ಕಿಶೆಂಗಂಗಾ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇನ್ನು ಲೇಹ್‌ನಗರದಲ್ಲಿ ನಡೆಯಲಿರುವ ಲಡಾಕ್‌ನ ಅಧ್ಯಾತ್ಮಿಕ ನಾಯಕ ಕುಶಾಕ್‌ ಬಕುಲಾ ಅವರ 100ನೇ ಜನ್ಮದಿನಾಚರಣೆಯಲ್ಲಿ ಭಾನುವಾರ ಪಾಲ್ಗೊಳ್ಳಲಿದ್ದಾರೆ.

ರಂಜಾನ್‌ ಸಮಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಕ್ಕಾಗಿ ಉಗ್ರರ ವಿರುದ್ಧ ಕದನ ವಿರಾಮ ಘೋಷಿಸಿದ ಎರಡು ದಿನಗಳ ನಂತರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆಗೆ ಆದ್ಯತೆ ನೀಡಲಾಗಿದೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top