Saturday, 24th March 2018  

Vijayavani

Breaking News

ಮುಂಬೈ ಯುವಕ ಜಮೈಕಾದಲ್ಲಿ ಗುಂಡೇಟಿಗೆ ಬಲಿ

Saturday, 11.02.2017, 12:23 PM       No Comments

ಮುಂಬೈ/ಜಮೈಕಾ: ನಾಲ್ವರು ಅಪರಿಚಿತ ಶಸ್ತ್ರಾಸ್ತ್ರಧಾರಿಗಳು ಮಹಾರಾಷ್ಟ್ರದ ವಸೈ ಮೂಲದ ಯುವಕನನ್ನು ಜಮೈಕಾದ ಕಿಗ್ಸ್​ಸ್ಟನ್​ನಲ್ಲಿರುವ ಫ್ಯಾ್ಲಟ್​ನಲ್ಲಿ ಗುಂಡಿಟ್ಟು ಸಾಯಿಸಿದ ಘಟನೆ ನಡೆದಿದೆ. ರಾಕೇಶ್ ತರ್ಲೆಜಾ (25) ಗುಂಡೇಟಿಗೆ ಬಲಿಯಾದ ದುರ್ದೈವಿ.

ಶುಕ್ರವಾರ ಬೆಳಗ್ಗೆ ವಸೈನಲ್ಲಿರುವ ಅವರ ಕುಟುಂಬ ಸದಸ್ಯರಿಗೆ ದೂರವಾಣಿ ಕರೆಬಂದಿದ್ದು, ನಿಮ್ಮ ಮಗ ಗುಂಡೇಟಿನಿಂದ ಸಾವನ್ನಪ್ಪಿರುವುದಾಗಿ ಆತ ಕೆಲಸ ಮಾಡುತ್ತಿದ್ದ ಜುವೆಲರ್ಸ್​ನ ಬಾಸ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ರಾಕೇಶ್ ಕೆರಿಬಿಯನ್ ಜೂವೆಲರ್ಸ್​ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಘಟನೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ ಎಂದು ಜುವೆಲರ್ಸ್ ಮಾಲೀಕ ತಿಳಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್ ತಂದೆ ಪ್ರಕಾಶ್, ‘ಯಾವ ಕಾರಣಕ್ಕಾಗಿ ಈ ಘಟನೆ ಸಂಭವಿಸಿರಬಹುದೆಂದು ನನ್ನಿಂದ ಊಹಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಮಗನ ಫ್ಲ್ಯಾಟ್​ಗೆ ಬಂದು ಸಾಯಿಸಿದ್ದೇಕೆ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಜಮೈಕಾ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಶಸ್ತ್ರಾಸ್ತ್ರಧಾರಿಗಳು ದರೋಡೆಕೋರರು ಎಂದು ಹೇಳಲಾಗುತ್ತಿದೆ.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top