Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಗುಪ್ತಚರ ಇಲಾಖೆ ನಿದ್ದೆ ಮಾಡ್ತಿತ್ತಾ? ಸಿಎಂ ಸಿದ್ದುಗೆ ಕಾಡುತ್ತಿರುವ ಪ್ರಶ್ನೆ!

Thursday, 03.08.2017, 10:01 AM       No Comments

ಬೆಂಗಳೂರು: ತಮ್ಮ ಪವರ್​ಫುಲ್​ ಸಚಿವ ಡಿಕೆಶಿ ಮೇಲೆ ಐಟಿ ರೇಡ್​ ಸುನಾಮಿಯಮತೆ ಅಪ್ಪಳಿಸಿದಾಗ ಖುದ್ದು ಸಿಎಂ ಸಿದ್ದು ಸೇರಿದಂತೆ ಇಡೀ ಕಾಂಗ್ರೆಸ್​ ಪಡೆ ಕಂಗಾಲಾಗಿತ್ತು. ಮುಂದುವರಿದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆಯೇ ಐಟಿ ದಾಳಿ ನಡೆಸಿದೆ’ ಎಂದು ಕಿಡಿಕಾರಿದ್ದರು. ಇನ್ನು, ಸಂಜೆಯ ವೇಳೆಗೆ ಜನಾರ್ಧನ ಪೂಜಾರಿ ಅವರಂತೂ ಡಿಕೆಶಿ ಮನೆ ಸುತ್ತಮುತ್ತ ಸೇನಾ ಸಮವಸ್ತ್ರದ ಭದ್ರತಾ ಸಿಬ್ಬಂದಿ ಠಳಾಯಿಸುತ್ತಿದಿದ್ದನ್ನು ಕಂಡು ಡಿಕೆಶಿ ಏನು ಟೆರರಿಸ್ಟಾ ಎಂದು ಟೆರರ್​ ಧ್ವನಿಯಲ್ಲಿ ಪೂಜಾರಿ ಕಂಪಿಸಿದ್ದರು.

ಆದರೆ, ಸ್ಥಳೀಯ ಸದಾಶಿವ ನಗರ ಪೊಲೀಸರಿಗೆ ರಣವೀಳ್ಯ ಕೊಟ್ಟು ಸದಾಶಿವ ನಗರದ ಭದ್ರ ಕೋಟೆಯೊಳಕ್ಕೆ ಪ್ರವೇಶಿಸಲು ಐಟಿ ಅವರೇನು ಬುದ್ದುಗಳಾ? ಜ್ಞಾಪಿಸಿಕೊಳ್ಳಿ, ಅಂದು ಸೆಪ್ಟೆಂಬರ್​ 8 ರಂದು ಸಚಿವ ಜನಾರ್ಧನ ರೆಡ್ಡಿಯನ್ನು ಹಲ್ಲುಜ್ಜಿ, ಮುಖ ತೊಳೆಯೋಕೂ ಬಿಡದೆ ಸೀದಾ ಚಂಚಲಗೂಡ ಕಡೆಗೆ ಎಬ್ಬಿಸಿಕೊಂಡು ಹೋಗಿದ್ದರು. ಅದಕ್ಕೂ ಮುನ್ನ ಹಿಂದಿನ ರಾತ್ರಿ ನೂರೈವತ್ತು ಸಿಬಿಐ ಪೊಲೀಸರು ಖಡಕ್​ ಅಧಿಕಾರಿ ಲಕ್ಷ್ಮಿ ನಾರಾಯಣ ಸಾರಥ್ಯದಲ್ಲಿ ಸ್ಥಳೀಯ ಪೊಲೀಸರಿಗೆ ಕಿಂಚಿತ್ತೂ ಸುಳಿವು ನೀಡದೆ ರೆಡ್ಡಿ ಮನೆಯ ಸುತ್ತಮುತ್ತ ಠಿಕಾಣಿ ಹೂಡಿದ್ದರು.

ಐಟಿಯದ್ದೆ ಆಗಿರಲಿ, ಸಿಬಿಐಯದ್ದೆ ಆಗಿರಲಿ – ಅದರ ತಾಕತ್ತೇ ಅಂಥಹುದು. ಲಕ್ಷ್ಮಿನಾರಾಯಣ ಅಂತಹ ಅಧಿಕಾರಿಗಳಿಗೆ Free- Hand ಕೊಟ್ರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಈ ಪ್ರಕರಣಗಳೇ ಸಾಕ್ಷಿ.

ಆದರೆ, ವಿಷಯ ಅದಲ್ಲ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ‘ತಮ್ಮದೆ ಗುಪ್ತಚರ ಇಲಾಖೆ ಏನ್ಮಾಡ್ತಿತ್ತು. ಐಟಿ ರೇಡ್​ ಬಗ್ಗೆ ಚಿಕ್ಕ ಸುಳಿವೂ ನೀಡದಷ್ಟು ಚಿಕ್ಕದಾಗಿ ಹೋಯಿತೆ? – ಎಂದು ಗರಂ ಆಗಿದ್ದಾರಂತೆ. ಈ ಸುದ್ದಿ ಇಂದು ಬೆಳಗ್ಗೆ ಹೊರಬಿದ್ದಿದೆ. ಸಿದ್ದರಾಮಯ್ಯನವರ ಈ ವರ್ತನೆ ಏನನ್ನು ಸೂಚಿಸುತ್ತದೆ? By Chance, ಇಂಟಲಿಜೆನ್ಸಿಗೆ ಏನಾದರು ಐಟಿ ರೇಡ್​ ಬಗ್ಗೆ ಸಣ್ಣ ಸುಳಿವು ಸಿಕ್ಕಿ ಬಿಟ್ಟಿದ್ದಿದ್ದರೆ ಸಿಎಂ ಸಿದ್ದು ಏನ್ಮಾಡ್ಬಿಡ್ತಿದ್ರೋ, ಅಲ್ವಾ !? (ದಿಗ್ವಿಜಯ ನ್ಯೂಸ್​)

 

 

Leave a Reply

Your email address will not be published. Required fields are marked *

Back To Top