Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಐಟಿ ಅಧಿಕಾರಿ ಮಗನ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ರೌಡಿಶೀಟ್‌ ದಾಖಲು

Thursday, 07.12.2017, 9:22 AM       No Comments

 

ಬೆಂಗಳೂರು: ಕಳೆದ ಸೆಪ್ಟೆಂಬರ್‌ 12ರಂದು ನಡೆದಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಅವರ ಪುತ್ರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸರು ರೌಡಿಶೀಟ್ ದಾಖಲಿಸಿದ್ದಾರೆ.

ಆರೋಪಿಗಳಾದ ಎಚ್.ಪಿ.ವಿಶಾಲ್, ವಿನಯ್ ಪ್ರಸಾದ್, ಕರಣ್ ಪೈ, ವಿನೋದ್ ಕುಮಾರ್ ಮತ್ತು ಶಾಂತಕುಮಾರ್ ಎಂಬುವವರ ವಿರುದ್ಧ ರೌಡಿಶೀಟ್​ ದಾಖಲಿಸಲಾಗಿದೆ.

ಕಳೆದ ಸೆಪ್ಟೆಂಬರ್​ 12 ರಂದು ಶರತ್​ನನ್ನು ಹಣಕ್ಕಾಗಿ ಅಪಹರಣ ಮಾಡಿ ನಂತರ ಸಿಕ್ಕಿಬೀಳುತ್ತೇವೆಂದು ಹೆದರಿ ಕೊಲೆ ಮಾಡಿ ಕೆರೆಯೊಂದರಲ್ಲಿ ಬಿಸಾಡಿದ್ದರು. ಸ್ವತಃ ಶರತ್​ ಸ್ನೇಹಿತರೇ ಈ ದುಷ್ಕೃತ್ಯವನ್ನು ಎಸಗಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top