Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ನಭಕ್ಕೆ ಚಿಮ್ಮಿದ ಪಿಎಸ್​ಎಲ್​ವಿ-ಸಿ 40 ರಾಕೆಟ್, ಇಸ್ರೋದಿಂದ ಇತಿಹಾಸ ಸೃಷ್ಠಿ

Friday, 12.01.2018, 9:56 AM       No Comments

ಶ್ರೀಹರಿಕೋಟಾ: ಇಸ್ರೋದ ಮಹತ್ವಾಕಾಂಕ್ಷಿ ಭೂ ಪರಿವೀಕ್ಷಣೆ ಉದ್ದೇಶದ ಕಾರ್ಟೋಸ್ಯಾಟ್​ 2 ಉಪಗ್ರಹ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಹೊತ್ತು ಪಿಎಸ್​ಎಲ್​ವಿ 40 ರಾಕೆಟ್​ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಈ ಮೂಲಕ 100 ಉಪಗ್ರಹಗಳನ್ನು ಉಡಾವಣೆಗೊಳಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಂಧ್ರದೇಶದ ಶ್ರೀಹರ ಕೋಟಾ ಸತೀಶ್​ ಧವನ್​ ಬ್ಯಾಹಾಕಾಶ ಉಡ್ಡಯನ ಕೇಂದ್ರದಿಂದ ಪಿಎಸ್​ಎಲ್​ವಿ 40 ರಾಕೆಟ್​ ಶುಕ್ರವಾರ ಬೆಳಗ್ಗೆ 9.30 ಕ್ಕೆ ಸರಿಯಾಗಿ ನಭಕ್ಕೆ ಚಿಮ್ಮಿತು. ರಾಕೆಟ್​ ಭಾರತದ ಕಾಟೋಸ್ಯಾಟ್-2, ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳು ಹಾಗೂ ಕೆನಡಾ, ಫ್ರಾನ್ಸ್, ಫಿನ್ಲೆಂಡ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕಗಳ 28 ಉಪಗ್ರಹಗಳನ್ನು ಹೊತ್ತೊಯ್ದಿದೆ.

ಉಪಗ್ರಹ ಉಡಾವಣೆಯ ನಂತರ ಇಸ್ರೋ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕಾರ್ಟೋಸ್ಯಾಟ್-2 ವಿಶೇಷತೆ

ಕಾರ್ಟೋಸ್ಯಾಟ್-2 ಉಪಗ್ರಹವು 710 ಕೆ.ಜಿ ತೂಕದ್ದಾಗಿದ್ದು, ರೇಖಾಭೂಪಟ, ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ ಚಿತ್ರಣ, ಕರಾವಳಿ ಅಂಚಿನ ಭೂಮಿಯನ್ನು ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡುವ ಉದ್ದೇಶ ರೇಖಾಚಿತ್ರಗಳನ್ನು ಅತ್ಯಾಧುನಿಕ (ಹೈ ಬೀಮ್) ತಂತ್ರಜ್ಞಾನದಲ್ಲಿ ಸೆರೆಹಿಡಿದು ರವಾನಿಸಲಿದೆ. ಹವಾಮಾನ ಕುರಿತ ಉಪಯುಕ್ತ ಮಾಹಿತಿಯನ್ನೂ ಕಾರ್ಟೋಸ್ಯಾಟ್ ಕಳುಹಿಸಲಿದೆ.  (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top