Sunday, 25th June 2017  

Vijayavani

1. ಇಂದಿನಿಂದ ಪ್ರಧಾನಿ ಅಮೆರಿಕಾ ಪ್ರವಾಸ- ವೈಟ್‌ಹೌಸ್‌ನಲ್ಲಿ ಮೋದಿಗೆ ವಿಶೇಷ ಡಿನ್ನರ್‌- ಟ್ರಂಪ್‌ರ ಮೊದಲ ಅತಿಥಿಯಾಗಲಿದ್ದಾರೆ ನರೇಂದ್ರ ಮೋದಿ 2. ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧ ವಿಚಾರ- ಹೋಟೆಲ್​, ರೆಸ್ಟೋರೆಂಟ್‌ಗಳಲ್ಲಿ ಎಣ್ಣೆಗೆ ಅವಕಾಶ- ರಂಗೋಲಿ ಕೆಳಗೆ ತೂರಿದ ಪಂಜಾಬ್​ ಸರ್ಕಾರ 3. ಇನ್ಫೋಸಿಸ್‌ ವಿರುದ್ಧ ವೀಸಾ ನಿಯಮ ಉಲ್ಲಂಘನೆ ಆರೋಪ- ಆರುವರೆ ಕೋಟಿ ದಂಡ ವಿಧಿಸಿದ ನ್ಯೂಯಾರ್ಕ್‌ ಸರ್ಕಾರ- ಆರೋಪ ಅಲ್ಲಗಳೆದ ಇನ್ಫೋಸಿಸ್‌ 4. ಕಷ್ಟ ಎದುರಾದ್ರೆ ಶಾಲೆಗೆ ಹರಕೆ- ಇಷ್ಟಾರ್ಥ ಸಿದ್ಧಿಯಾದ್ರೆ ವಿವಿಧ ಕೊಡುಗೆ- ಬಂಟ್ವಾಳದ ಸೂರಿಬೈಲ್​ನಲ್ಲಿ ಶಾಲೆಯೇ ದೇವರು 5. ಭಾರತ ವೆಸ್ಟ್‌ವಿಂಡೀಸ್‌ ಕ್ರಿಕೆಟ್‌ ಸರಣಿ- ಮೊದಲ ಪಂದ್ಯ ವರುಣನಿಗೆ ಬಲಿ- ಮಳೆಯಲ್ಲಿ ತೇಲಿಹೋದ ಶಿಖರ್‌ ಧವನ್‌, ರಹಾನೆ ಅರ್ಧ ಶತಕ
Breaking News :

ಕುಲಭೂಷಣ್ ಗಲ್ಲು ಶಿಕ್ಷೆಗೆ ತಡೆ, ಮೌನಕ್ಕೆ ಶರಣಾದ ಪಾಕ್

Wednesday, 10.05.2017, 2:25 PM       No Comments

ಇಸ್ಲಾಮಾಬಾದ್: ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್​ಗೆ ಪಾಕ್ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆ. ಈ ತೀರ್ಪಿನ ಕುರಿತು ಪಾಕ್ ಸರ್ಕಾರದ ಅಧಿಕಾರಿಗಳು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಪಾಕಿಸ್ತಾನದ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಪಾಕ್ ಮಾಧ್ಯಮಗಳೂ ಸಹ ಈ ವಿಷಯದ ಕುರಿತು ಸಂಪೂರ್ಣ ಸತ್ಯವನ್ನು ಜನರಿಗೆ ತಿಳಿಸುತ್ತಿಲ್ಲ. ಡಾನ್ ಪತ್ರಿಕೆ ಮತ್ತು ದಿ ಎಕ್ಸ್​ಪ್ರೆಸ್ ಟ್ರಿಬ್ಯೂನ್ ಪತ್ರಿಕೆಗಳು ಗಲ್ಲು ಶಿಕ್ಷೆಗೆ ತಡೆ ನೀಡಿರುವ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಮಂಡಿಸಿರುವ ವಾದದ ಕುರಿತು ಸುದ್ದಿ ಮಾಡಿಲ್ಲ. ಆದರೆ ಜಿಯೋ ಟಿವಿ ಮಾತ್ರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಪಾಕಿಸ್ತಾನದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಕಾನೂನಾತ್ಮಕ ಅಧಿಕಾರವಿಲ್ಲ ಎಂದು ವರದಿ ಮಾಡಿದೆ.

ಇನ್ನೊಂದೆಡೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿದ್ದು, ಕುಲಭೂಷಣ್ ಅವರ ಕುಟುಂಬ ಸದಸ್ಯರಿಗೆ ಈ ವಿಷಯವನ್ನು ತಿಳಿಸಿದ್ದೇನೆ. ನಾನು ಕುಲಭೂಷಣ್ ಅವರ ತಾಯಿಯೊಂದಿಗೆ ಮಾತನಾಡಿದ್ದೇನೆ ಎಂದು ಟ್ವಿಟ್ ಮಾಡಿದ್ದರು.

ದಿಗ್ವಿಜಯ ನ್ಯೂಸ್ ಫೇಸ್ ಬುಕ್ ಪೇಜ್ ಲೈಕ್ ಮಾಡಿ : https://www.facebook.com/DighvijayNews/

ಕುಲಭೂಷಣ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ಪಾಕ್​ಗೆ ಮುಖಭಂಗ

– ಪಿಟಿಐ

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

1 + seventeen =

Back To Top