Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕುಂಭ ಮೇಳ, ತ್ರಿಶೂರ್​ ಪೂರಂ ಹಬ್ಬದ ವೇಳೆ ಐಸಿಸ್​ ಉಗ್ರರ ದಾಳಿ ಭೀತಿ

Wednesday, 15.11.2017, 1:29 PM       No Comments

>> ಧ್ವನಿ ಸಂದೇಶದಲ್ಲಿರುವ ಧ್ವನಿ ಕೇರಳದ 21 ಜನರನ್ನು ಐಸಿಸ್​ ಸೇರುವಂತೆ ಪ್ರೇರೆಪಿಸಿದ್ದ ಅಬ್ದುಲ್ಲಾ ರಷೀದ್​ನದ್ದಿರಬಹುದು ಎಂದ ಪೊಲೀಸರು

ತ್ರಿಶೂರ್​: ಜಿಹಾದ್​ ಮೂಲಕ ಮುಸ್ಲಿಮೇತರರನ್ನ ಕೊಲ್ಲುವುದಾಗಿ ಬೆದರಿಕೆ ಇರುವ ಧ್ವನಿ ಸಂದೇಶವೊಂದನ್ನು ಉಗ್ರ ಸಂಘಟನೆ ಐಸಿಸ್​ ಬುಧವಾರ ಬಿಡುಗಡೆ ಮಾಡಿದೆ.

ಅಮೆರಿಕದ ಲಾಸ್​ ವೆಗಾಸ್ ಮಾದರಿಯಲ್ಲಿ ಭಾರತದಲ್ಲೂ ಐಸಿಸ್​ ಉಗ್ರರು ದಾಳಿ ನಡೆಸುತ್ತೇವೆ ಎಂದಿರುವ ಐಸಿಸ್​ ಭಾರೀ ಸಂಖ್ಯೆಯಲ್ಲಿ ಹಿಂದೂಗಳು ಸೇರುವ ಕೇರಳದ ತ್ರಿಶೂರ್ ಪೂರಂ ಹಬ್ಬ, ಮಹಾ ಕುಂಭ ಮೇಳದಲ್ಲಿ ನೀರನ್ನು ವಿಷಯುಕ್ತವನ್ನಾಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಉಗ್ರನೊಬ್ಬ ಮಲಯಾಳಂ ಭಾಷೆಯಲ್ಲಿ 10 ನಿಮಿಷದ ಟೆಲಿಗ್ರಾಂ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿದ್ದಾನೆ. ಅಫ್ಘಾನಿಸ್ತಾನದಿಂದ ಈ ಸಂದೇಶ ಬಂದಿರಬಹುದು ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಡಿಯೋದಲ್ಲಿರುವ ಗಂಡು ಧ್ವನಿ, ಕಾಸರಗೋಡು ಮೂಲದ ಇಂಜಿನಿಯರ್ ಪದವೀಧರ ಉಗ್ರ ಅಬ್ದುಲ್ಲಾ ರಷೀದ್​ನದ್ದು ಆಗಿರಬಹುದು ಎಂದು ಕೂಡ ಕೇರಳ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಹೆಚ್ಚುವರಿ ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top