ಐಪಿಎಲ್​ ಬೆಟ್ಟಿಂಗ್ ದಂಧೆ: ಆರು ಮಂದಿ ಬಂಧನ, 6 ಲಕ್ಷ ರೂಪಾಯಿ ವಶ

8

ಬೆಂಗಳೂರು: ಡ್ರಗ್ಸ್ ಕೇಸ್​ ಚುರುಕಾಗಿರುವ ನಡುವೆಯೇ ಐಪಿಎಲ್​ ಬೆಟ್ಟಿಂಗ್ ದಂಧೆಯೂ ಚುರುಕಾಗಿದೆ. ದುಬೈನಲ್ಲಿ ಐಪಿಎಲ್​ ಪಂದ್ಯಗಳು ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಬೆಟ್ಟಿಂಗ್ ದಂಧೆಯೂ ಚಿಗುರಿಕೊಂಡಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಮಲ್ಲೇಶ್ವರ ಮತ್ತು ಬಾಣಸವಾಡಿಯಲ್ಲಿ ದಾಳಿ ನಡೆಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ 6 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಲೇಶ್ವರ ಮತ್ತು ಬಾಣಸವಾಡಿಯಲ್ಲಿ ಬೆಟ್ಟಿಂಗ್ ಅಡ್ಡೆ ಶುರುವಾಗಿರುವ ಮಾಹಿತಿ ಪಡೆದುಕೊಂಡು ಆರೋಪಿಗಳು ಹಣದೊಂದಿಗೆ ಅಲ್ಲಿರುವಾಗಲೇ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸೆರೆಹಿಡಿಯಲಾಗಿದೆ. ಐಪಿಎಲ್ ಕ್ರಿಕೆಟ್ ಮುಗಿಯುವ ತನಕವೂ ಇಂತಹ ದಾಳಿಗಳು ನಡೆಯುತ್ತಲೇ ಇರುತ್ತವೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತಮ ವಿದ್ಯಾರ್ಥಿ ಆಗುವುದು ಹೇಗೆ? ಉಪಾಯಗಳು ಇಲ್ಲಿವೆ ನೋಡಿ…

ಐಪಿಎಲ್​ ಪಂದ್ಯಗಳು ದಿನಗಳೆದಂತೆ ರೋಚಕವಾಗುತ್ತಿದ್ದು, ಬೆಟ್ಟಿಂಗ್ ಕೂಡ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಬೆಟ್ಟಿಂಗ್ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ಬೆಟ್ಟಿಂಗ್ ಕುರಿತ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸರನ್ನು ಎಚ್ಚರಿಸಿ ಎಂದು ಅವರು ಮನವಿ ಸಾರ್ವಜನಿಕರಲ್ಲಿ ಮಾಡಿದ್ದಾರೆ. (ಏಜೆನ್ಸೀಸ್​)

ಸ್ವಯಂ ನಿವೃತ್ತಿ ತೆಗೆದುಕೊಂಡ್ರು ಬಿಹಾರ ಡಿಜಿಪಿ; ಚುನಾವಣೆಗೆ ನಿಲ್ತಾರೆ ಅನ್ನೋ ವದಂತಿ