Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ರಶೀದ್​ಗೆ ಸಾಹ ಮೆಚ್ಚುಗೆ

Monday, 16.04.2018, 3:04 AM       No Comments

ಕೋಲ್ಕತ: ಆಫ್ಘಾನಿಸ್ತಾನದ ಯುವ ಸ್ಪಿನ್ನರ್ ರಶೀದ್ ಖಾನ್ ಎಸೆತಗಳನ್ನು ವಿಕೆಟ್ ಹಿಂದೆ ನಿಂತು ಹಿಡಿಯವುದೇ ಒಂದು ಉತ್ತಮ ಅನುಭವ. ನನ್ನ ಆತ್ಮವಿಶ್ವಾಸ ವೃದ್ಧಿಗೂ ಇದೇ ಕಾರಣ ಎಂದು ಸನ್​ರೈಸರ್ ಹೈದರಾಬಾದ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ವೃದ್ಧಿಮಾನ್ ಸಾಹ ಹೇಳಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ವಿಶ್ವ ನಂ.1 ಹಾಗೂ ಏಕದಿನದಲ್ಲಿ ವಿಶ್ವ ನಂ.2ನೇ ಸ್ಥಾನದಲ್ಲಿರುವ ರಶೀದ್, ಏಕದಿನದಲ್ಲಿ ವೇಗವಾಗಿ 100 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದಾರೆ. ಹಲವು ದಿನಗಳ ಬಳಿಕ ರಶೀದ್ ಖಾನ್​ರಂಥ ಬೌಲರ್​ಗಳ ಎಸೆತವನ್ನು ಹಿಡಿಯುವ ಅವಕಾಶ ಸಿಕ್ಕಿದೆ. ಸ್ಪಿನ್ ಜತೆಗೆ ಅತಿಯಾದ ವೇಗವನ್ನು ಅವರ ಎಸೆತಗಳಲ್ಲಿ ಕಾಣಬಹುದು ಎಂದು ಸಾಹ ಹೇಳಿದರು.

ಈಡನ್ ಗಾರ್ಡನ್ಸ್ ಶನಿವಾರ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ 5 ವಿಕೆಟ್​ಗಳಿಂದ ಕೆಕೆಆರ್ ತಂಡವನ್ನು ಮಣಿಸುವ ಮೂಲಕ ಲೀಗ್​ನಲ್ಲಿ ಹ್ಯಾಟ್ರಿಕ್ ಜಯದ ಸಾಧನೆ ಮಾಡಿತು. ಇದರಿಂದ ಸನ್​ರೈಸರ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. 19 ವರ್ಷದ ರಶೀದ್ ಖಾನ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಾಹಾ, ರಶೀದ್​ಗೆ ಉತ್ತಮ ಭವಿಷ್ಯವಿದೆ ಎಂದರು. ಸಂಘಟಿತ ನಿರ್ವಹಣೆಯೇ ಹ್ಯಾಟ್ರಿಕ್ ಗೆಲುವಿನ ಮಂತ್ರ ಎಂದ ಸಾಹ, ಪ್ರತಿ ಪಂದ್ಯಕ್ಕೂ ವಿಶೇಷ ಮಹತ್ವ ನೀಡುತ್ತಿದ್ದೇವೆ, ಪ್ರತಿಯೊಬ್ಬರಿಗೂ ಅವರದ್ದೆ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ ಎಂದರು. ಆರಂಭಿಕನಾಗಿ ಆಡುತ್ತಿರುವುದು ಖುಷಿ ನೀಡಿದೆ. ಇದು ನನಗೆ ಹೊಸತಾದರೂ ಇನಿಂಗ್ಸ್ ಎಂಜಾಯ್ ಮಾಡುತ್ತಿದ್ದೇನೆ ಎಂದರು ಸಾಹ ತಿಳಿಸಿದರು.

ತಂಡದ ಯೋಜನೆಯಲ್ಲಿ ಯಾವುದೇ ತಪ್ಪಿರಲಿಲ್ಲ. ತಂಡದ ಅಗ್ರಕ್ರಮಾಂಕ ಕುಸಿತವಾಗಿದ್ದರಿಂದ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಸ್ಪಿನ್ನರ್​ಗಳು ಉತ್ತಮವಾಗಿ ಅವರ ಕಾರ್ಯನಿರ್ವಹಿಸಿದರು ಎಂದು ಹೇಳಿದರು.

ಟಿ20 ಕ್ರಿಕೆಟ್​ನಲ್ಲಿ ಭುವನೇಶ್ವರ್ ಕುಮಾರ್ 150 ವಿಕೆಟ್ ಸಾಧನೆ ಮಾಡಿದರು. 150 ವಿಕೆಟ್ ಉರುಳಿಸಿದ ಭಾರತದ 4ನೇ ವೇಗದ ಬೌಲರ್ ಭುವನೇಶ್ವರ್. ಇದಕ್ಕೂ ಮುನ್ನ ವಿನಯ್ ಕುಮಾರ್, ಇರ್ಫಾನ್ ಪಠಾಣ್ ಹಾಗೂ ಆಶಿಶ್ ನೆಹ್ರಾ ಈ ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top