Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಸ್ವಸ್ಥ, ಸಕಾರಾತ್ಮಕ, ಶಿಸ್ತುಬದ್ಧ ಗುಣ ಹೆಚ್ಚಿಸುವ ಯೋಗ ಕಲೆ

Tuesday, 12.06.2018, 3:02 AM       No Comments

ಬೆಂಗಳೂರು: ರೋಗಿಯನ್ನು ನಿರೋಗಿಯನ್ನಾಗಿ, ಆರೋಗ್ಯವಂತನನ್ನು ಉಪಯುಕ್ತ ವ್ಯಕ್ತಿಯನ್ನಾಗಿ, ಭೋಗಿಯನ್ನು ಯೋಗಿಯನ್ನಾಗಿ ಪರಿವರ್ತಿಸುವಲ್ಲಿ ಮಹತ್ತರ ಪಾತ್ರವಹಿಸುವ ಯೋಗವನ್ನು ಒಂದು ಸಂಭ್ರಮವನ್ನಾಗಿ ಆಚರಿಸುವ ದಿನ ಸನ್ನಿಹಿತವಾಗುತ್ತಿದೆ. ಅದು, ಜೂ. 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈ ಪ್ರಯುಕ್ತ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ 24×7 ನ್ಯೂಸ್ ಸುದ್ದಿವಾಹಿನಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜಧಾನಿಯ ಹಲವು ಕ್ಷೇತ್ರಗಳ ಸಂಘ- ಸಂಸ್ಥೆಗಳು, ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳಿಸಲಾಗುತ್ತಿದೆ. ಇದರ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿಕ್ಕಾಗಿ ಶಿಕ್ಷಕರಾಗಿ, ಪಾಲ್ಗೊಳ್ಳುವವರಾಗಿ ಹೆಸರು ನೋಂದಾಯಿಸಿಕೊಳ್ಳಲು ಪ್ರಕಟಿಸಲಾಗಿತ್ತು. ವಿಜಯವಾಣಿಯ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೂರಾರು ಜನ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಯೋಗದಿನದ ಯಶಸ್ಸಿಗೆ ಶಾಲೆ, ಕಾಲೇಜು, ಐಟಿ-ಬಿಟಿ ಕಂಪನಿಗಳು, ಜನಪ್ರತಿನಿಧಿಗಳ ಪ್ರೋತ್ಸಾಹ ಮತ್ತು ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಯಾವುದೇ ಸಂಸ್ಥೆಗಳು ಬಯಸಿದರೆ ಉಚಿತವಾಗಿ ಯೋಗ ತರಬೇತಿ ಶಿಬಿರಗಳನ್ನು ಸಹ ಆಯೋಜಿಸಲಾಗುತ್ತದೆ. ಯೋಗದಿಂದ ಮನಸ್ಸು, ಕುಟುಂಬ, ಸಮಾಜ, ವಿಶ್ವದ ಶಾಂತಿ ಸಾಧ್ಯ ಎಂಬ ಆಶಯವನ್ನು ಬೆಂಗಳೂರಿನ ಮೂಲಕ ದೇಶಕ್ಕೆ, ವಿಶ್ವಕ್ಕೆ ಸಾರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಸಣ್ಣ ವಯಸ್ಸಿನಿಂದ ಪ್ರಾಣಾಯಾಮ, ಸೂರ್ಯ ನಮಸ್ಕಾರ ಮಾಡುತ್ತಿದ್ದೇನೆ. ಚಟುವಟಿಕೆಯಿಂದ ಇರಲು ನಿತ್ಯ ಅರ್ಧ ತಾಸು ಯೋಗಾಭ್ಯಾಸ ಮಾಡಬೇಕು. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಮಾತ್ರವಲ್ಲ ಏಕಾಗ್ರತೆ ಸಾಧಿಸಲು ಸಾಧ್ಯ.

| ಮಂಜುನಾಥ್ ನಾಗರಬಾವಿ ನಿವಾಸಿ

 

ಜಗತ್ತೇ ಯೋಗ ವಿದ್ಯೆಗೆ ಮಾರುಹೋಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಉತ್ತುಂಗಕ್ಕೆ ಏರಿದೆ. ಜಪಾನ್​ನ ಜನರೂ ಭಾರತೀಯ ಯೋಗಕ್ಕೆ ಮರುಳಾಗಿದ್ದಾರೆ. 38 ವರ್ಷಗಳಿಂದ ಸಂಸ್ಕಾರ ಹಾಗೂ ಸೇವೆ ಪಸರಿಸುವ ಕಾರ್ಯವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿ ಮಾಡುತ್ತಿದೆ.

| ಪ್ರಸಾದ್ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ

 

Leave a Reply

Your email address will not be published. Required fields are marked *

Back To Top