Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಬಿಜೆಪಿಯಂತೇ ನಮಗೂ ಅವಕಾಶ ಕೊಡಿ; ಗೋವಾ, ಬಿಹಾರದಲ್ಲಿ ಅತಿದೊಡ್ಡ ಪಕ್ಷಗಳ ಹಕ್ಕೊತ್ತಾಯ

Friday, 18.05.2018, 5:04 PM       No Comments

ನವದೆಹಲಿ: ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದ್ದರಿಂದ ಪ್ರೇರಣೆಗೊಂಡ ಬಿಹಾರ ಮತ್ತು ಗೋವಾದ ಅತಿ ದೊಡ್ಡ ಪಕ್ಷಗಳಾದ ಆರ್​ಜೆಡಿ ಮತ್ತು ಕಾಂಗ್ರೆಸ್​ ಪಕ್ಷಗಳು ಸರ್ಕಾರ ರಚಿಸಲು ನಮಗೆ ಅವಕಾಶ ನೀಡಬೇಕು ಎಂದು ಆಯಾ ರಾಜ್ಯಗಳ ರಾಜ್ಯಪಾಲರಿಗೆ ಶುಕ್ರವಾರ ಮನವಿ ಸಲ್ಲಿಸಿವೆ.

ಗೋವಾದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತಾದರೂ, ಅದಕ್ಕೆ ಅವಕಾಶ ನೀಡದೇ ಬಹುಮತವಿದ್ದ ಬಿಜೆಪಿ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಲಾಗಿತ್ತು. ಅದರಂತೆ, ಬಿಹಾರದಲ್ಲೂ ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಕೂಡ ಅತಿದೊಡ್ಡ ಪಕ್ಷವಾಗಿ ಗೆದ್ದಿತ್ತು. ಆದರೆ, ಅಲ್ಲಿಯೂ ಜೆಡಿಯು ಮತ್ತು ಬಿಜೆಪಿ ಸರ್ಕಾರ ರಚಿಸಿವೆ.

ಹೀಗಿರುವಾಗಲೇ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಹುಮತವಿದ್ದ ಜೆಡಿಎಸ್​-ಕಾಂಗ್ರೆಸ್​ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡದೇ, ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಬಿಜೆಪಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅನುಸರಿಸಿದ ಮಾದರಿಯನ್ನೇ ನಮ್ಮ ರಾಜ್ಯದಲ್ಲೂ ಅನುಸರಿಸಬೇಕು ಎಂದು ಗೋವಾದಲ್ಲಿ ಕಾಂಗ್ರೆಸ್​ ಮತ್ತು ಬಿಹಾರದಲ್ಲಿ ಆರ್​ಜೆಡಿ ತನ್ನ ಹಕ್ಕು ಮಂಡಿಸಿದೆ.
ಇಂದು ಬೆಳಗ್ಗೆ 13 ಕಾಂಗ್ರೆಸ್​ ಶಾಸಕರೊಂದಿಗೆ ಗೋವಾ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್​ ನಾಯಕ ಚೆಲ್ಲಕುಮಾರ್​ ಅವರ ನೇತೃತ್ವದ ನಿಯೋಗ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿತು.

ಅದರಂತೆ, ಬಿಹಾರದಲ್ಲಿಯೂ ಕೂಡ ಬಹುದೊಡ್ಡ ಪಕ್ಷವಾಗಿರುವ ಆರ್​ಜೆಡಿಯ ನಾಯಕ ತೇಜಸ್ವಿ ಯಾದವ್​ ತನ್ನ ಶಾಸಕರೊಂದಿಗೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ಇದೇ ರೀತಿ, ಮಣಿಪುರದಲ್ಲೂ ಕಾಂಗ್ರೆಸ್​ ನಾಯಕರ ನಿಯೋಗ ಹಂಗಾಮಿ ರಾಜ್ಯಪಾಲ ಜಗದೀಶ್​ ಮುಖಿ ಅವರನ್ನು ಭೇಟಿಯಾಗಿ, ಬಹುದೊಡ್ಡ ಪಕ್ಷವಾಗಿರುವ ನಮಗೆ ಸರ್ಕಾರ ರಚನೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.

ಈ ನಡುವೆ, ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​ಗೆ ಅಧಿಕಾರ ರಚಿಸಲು ಅವಕಾಶ ಕಲ್ಪಿಸುವಂತೆ ಗೋವಾದ ಕಾಂಗ್ರೆಸ್​ ಮುಖಂಡರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದೂ ತಿಳಿದು ಬಂದಿದೆ.

ನಮಗೆ ಅವಕಾಶ ಕೊಟ್ಟರೆ ಸದನದಲ್ಲಿ ಸುಲಭವಾಗಿ ಬಹುಮತ ಸಾಬೀತು ಮಾಡುತ್ತೇವೆ. ನಮಗೆ 111 ಮಂದಿ ಶಾಸಕರ ಬೆಂಬಲವಿದೆ. ಜೆಡಿಯುನ ಅತೃಪ್ತ ಶಾಸಕರೂ ನಮ್ಮೊಂದಿಗೆ ಬರಲಿದ್ದಾರೆ. ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಂತೆ ಯು ಟರ್ನ್​ ತೆಗೆದುಕೊಳ್ಳುವಂಥ ಶಾಸಕರು ಯಾರೂ ನಮ್ಮ ಬಳಿ ಇಲ್ಲ.
– ತೇಜಸ್ವಿ ಯಾದವ್​, ಆರ್​ಜೆಡಿ ಮುಖ್ಯಸ್ಥ

ಅತಿ ದೊಡ್ಡ ಪಕ್ಷವಾಗಿ ನಮ್ಮ ಹಕ್ಕನ್ನು ನಾವು ರಾಜ್ಯಪಾಲರ ಬಳಿ ಮಂಡಿಸಿದ್ದೇವೆ. ನಮಗೆ ಏಳು ದಿನ ಅವಕಾಶ ನೀಡಿದರೆ ಸಾಕು. ನಾವು ಬಹುಮತ ಸಾಬೀತು ಮಾಡುತ್ತೇವೆ. ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಸರ್ಕಾರ ರಚನೆಗೆ ಅವಕಾಶ ಪಡೆದಿದೆ. ಗೋವಾದಲ್ಲಿ ಕಾಂಗ್ರೆಸ್​ ಅತಿ ದೊಡ್ಡ ಪಕ್ಷವಾಗಿದ್ದು, ಕರ್ನಾಟಕದ ಮಾದರಿಯಲ್ಲೇ ನಮಗೂ ಅವಕಾಶ ನೀಡಬೇಕು.
– ಚೆಲ್ಲಕುಮಾರ್​, ಗೋವಾ ಕಾಂಗ್ರೆಸ್​ ನಾಯಕ 

https://twitter.com/ANI/status/997408548928696320

Leave a Reply

Your email address will not be published. Required fields are marked *

Back To Top