Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ರೇಸ್​ನಲ್ಲಿ ಮಮತಾ, ಜೋಶಿ

Friday, 10.08.2018, 3:04 AM       No Comments

ನವದೆಹಲಿ: ಭಾರತ ತಂಡದ ಮಾಜಿ ಸ್ಪಿನ್ನರ್​ಗಳಾದ ಕನ್ನಡಿಗ ಸುನೀಲ್ ಜೋಶಿ, ರಮೇಶ್ ಪೊವಾರ್ ಹಾಗೂ ಮಾಜಿ ನಾಯಕಿ ಮಮತಾ ಮಾಬೆನ್ ಸಹಿತ 20 ಅಭ್ಯರ್ಥಿಗಳು ಮುಂಬೈನಲ್ಲಿ ಶುಕ್ರವಾರ ನಡೆಯಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಯ ಸಂದರ್ಶನಕ್ಕೆ ಹಾಜರಾಗಲಿದ್ದಾರೆ. ಭಾರತ ತಂಡದ ಮಾಜಿ ವಿಕೆಟ್ ಕೀಪರ್​ಗಳಾದ ಅಜಯ್ ರಾತ್ರ, ವಿಜಯ್ ಯಾದವ್, ಮಹಿಳಾ ತಂಡದ ಮಾಜಿ ಸಹಾಯಕ ಕೋಚ್ ಸುಮನ್ ಶರ್ಮ ಸಂದರ್ಶನಕ್ಕೆ ಹಾಜರಾಗಲಿರುವ ಇತರ ಪ್ರಮುಖರು.

ನ್ಯೂಜಿಲೆಂಡ್ ಪರ 51 ಏಕದಿನ ಹಾಗೂ 2 ಟೆಸ್ಟ್ ಪಂದ್ಯ ಗಳನ್ನಾಡಿರುವ ಮಾರಿಯಾ ಫಾಹೀ ಕೂಡ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಫಾಹೀ ಸದ್ಯ ಗುಂಟೂರಿನ ಎಸಿಎ ಅಕಾಡೆಮಿಯಲ್ಲಿ ಕೋಚ್ ಆಗಿದ್ದಾರೆ. ಕನ್ನಡಿಗ ಸುನೀಲ್ ಜೋಶಿ ಹಾಗೂ ರಮೇಶ್ ಪೊವಾರ್ ನಡುವೆ ನಿಕಟ ಪೈಪೋಟಿ ಏರ್ಪಡಲಿದೆ ಎನ್ನಲಾಗಿದೆ. ಮಾಜಿ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ, ಪೊವಾರ್​ಗಿಂತ ಹೆಚ್ಚು ಅನುಭವಿಯಾಗಿದ್ದಾರೆ. 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನಾಡಿರುವ ಜೋಶಿ, ಓಮನ್ ಕೋಚ್ ಆಗಿದ್ದರು. ಬಾಂಗ್ಲಾದೇಶ ತಂಡಕ್ಕೆ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿದ್ದರು. 160 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಜೋಶಿ, ಜಮ್ಮುಕಾಶ್ಮೀರ, ಅಸ್ಸಾಂ ಹಾಗೂ ಹೈದರಾಬಾದ್ ತಂಡಗಳಿಗೆ ತರಬೇತುದಾರರಾಗಿದ್ದರು. ಸದ್ಯ ಮಹಿಳಾ ತಂಡದ ಹಂಗಾಮಿ ಕೋಚ್ ಆಗಿರುವ ಮುಂಬೈ ಮಾಜಿ ಸ್ಪಿನ್ನರ್ ಪೊವಾರ್ ಭಾರತ ಪರ 2 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಸಿಒಎ ಸದಸ್ಯೆ ಡಯಾನಾ ಎಡುಲ್ಜಿ, ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ಬಿಸಿಸಿಐ ಕ್ರಿಕೆಟ್ ವ್ಯವಹಾರಗಳ ಅಧಿಕಾರಿ ಸಾಬಾ ಕರೀಮ್ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಂದರ್ಶನ ನಡೆಸಲಿದ್ದಾರೆ.

ಕಳೆದ ವರ್ಷ ಭಾರತ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದಿನ ಕೋಚ್ ತುಷಾರ್ ಅರೋಥೆ ವಿರುದ್ಧ ಇತ್ತೀಚೆಗೆ ಏಷ್ಯಾಕಪ್ ವೈಫಲ್ಯದ ಬಳಿಕ ಕೆಲ ಹಿರಿಯ ಆಟಗಾರ್ತಿಯರು ಬಿಸಿಸಿಐಗೆ ದೂರು ನೀಡಿದ್ದರು. ಬಳಿಕ ತುಷಾರ್ ರಾಜೀನಾಮೆ ಸಲ್ಲಿಸಿದ್ದರು.

ನೂತನ ಕೋಚ್​ಗಿದೆ ದೊಡ್ಡ ಸವಾಲು!

ಭಾರತ ಮಹಿಳಾ ತಂಡಕ್ಕೆ ನೇಮಕಗೊಳ್ಳುವ ನೂತನ ಕೋಚ್​ಗೆ ದೊಡ್ಡ ಸವಾಲುಗಳೇ ಎದುರಾಗಲಿವೆ. ಮುಂದಿನ ನವೆಂಬರ್​ನಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ತಂಡ ಸಿದ್ಧಗೊಳಿಸುವುದೇ ನೂತನ ಕೋಚ್​ನ ಬಹು ದೊಡ್ಡ ಜವಾಬ್ದಾರಿಯಾಗಿದೆ. ಜತೆಗೆ ತಂಡದ ಹಿರಿಯ ಆಟಗಾರ್ತಿಯರೊಂದಿಗೆ ಸಮನ್ವಯತೆ ಕೂಡ ಮುಖ್ಯವಾಗಲಿದೆ.

ರೇಸ್​ನಲ್ಲಿ ಪ್ರಮುಖರು

ಸುನೀಲ್ ಜೋಶಿ, ಅಜಯ್ ರಾತ್ರಾ, ರಮೇಶ್ ಪೊವಾರ್, ಮಮತಾ ಮಾಬೆನ್, ವಿಜಯ್ ಯಾದವ್, ಸುಮತ್ ಶರ್ಮ, ಮಾರಿಯಾ ಫಾಹೀ (ನ್ಯೂಜಿಲೆಂಡ್).

Leave a Reply

Your email address will not be published. Required fields are marked *

Back To Top