Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ರಿಯಲ್​ ಎಸ್ಟೇಟ್​ ಪ್ರಭಾವ: ಈ ಭಾರತೀಯ ಬ್ರಿಟನ್ನಿನ ಅತ್ಯಂತ ಕಿರಿಯ ಕೋಟ್ಯಾಧಿಪತಿ!

Tuesday, 17.10.2017, 12:56 PM       No Comments

ಲಂಡನ್​: ಒಂದು ವ್ಯಾಪಾರ ಪ್ರಾರಂಭಿಸುವುದು ಒಂದಷ್ಟು ಸುಲಭ ಅಂತ್ಲೇ ಇಟ್ಕೊಳ್ಳಿ. ಆದರೆ ಅದನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಹೋಗುವುದು ತುಸು ಕಷ್ಟದ ಕೆಲಸವೇ ಸರಿ. ಹೀಗೇ … ಇಲ್ಲೊಬ್ಬ ಭಾರತೀಯ ಮೂಲದ ಲಂಡನ್​ ಯುವಕ ತನ್ನ ವ್ಯಾಪಾರ ಪ್ರಾರಂಭಿಸಿದ 16 ತಿಂಗಳಲ್ಲಿಯೇ ಬ್ರಿಟನ್​ನ ಅತ್ಯಂತ ಕಿರಿಯ ವಯಸ್ಸಿನ ಕೋಟ್ಯಾಧಿಪತಿ ಎನಿಸಿಕೊಂಡಿದ್ದಾನೆ.

19ರ ಹರೆಯದ ಅಕ್ಷಯ್​ ರೂಪರೇಲಿಯಾ ತಮ್ಮ ಶೈಕ್ಷಣಿಕ ವ್ಯಾಸಂಗದೊಂದಿಗೆ ಆನ್​ಲೈನ್​ ಪ್ರಾಪರ್ಟಿ ವ್ಯಾಪಾರ ಪ್ರಾರಂಭಿಸಿ, ಯಶಸ್ಸು ಕಂಡಿದ್ದಾರೆ. ​ ಸದ್ಯ ಅವರ ಕಂಪನಿಯ ಒಟ್ಟು ಮೌಲ್ಯ 120 ಲಕ್ಷ ಪೌಂಡ್ (12 ಮಿಲಿಯನ್​ ಪೌಂಡ್​)​ ಎಂದು ಅಂದಾಜಿಸಲಾಗಿದೆ.

ವ್ಯಾಪಾರ ಪ್ರಾರಂಭಿಸಿದ ಕೇವಲ 16 ತಿಂಗಳಲ್ಲಿಯೇ ಅಕ್ಷಯ್​ ಕಂಪನಿ ಬ್ರಿಟನಿನ 18ನೇ ಅತಿದೊಡ್ಡ ರಿಯಲ್​ ಎಸ್ಟೇಟ್​ ಏಜೆನ್ಸಿ ಎನಿಸಿಕೊಂಡಿದೆ. ಇದುವರೆಗೆ 100 ಮಿಲಿಯನ್​ ಪೌಂಡ್ ಮೊತ್ತದ ಆಸ್ತಿಗಳನ್ನು ಮಾರಾಟ ಮಾಡಿರುವುದಾಗಿ ಅಕ್ಷಯ್​ ಹೇಳುತ್ತಾರೆ.

ಸಸೆಕ್ಸ್​ ನಗರದ ಒಬ್ಬ ವ್ಯಕ್ತಿ ತಮ್ಮ ಆಸ್ತಿಯೊಂದನ್ನು ಮಾರಿಸಿಕೊಡು ಎಂದು ಕೇಳಿದ್ದೇ ಅಕ್ಷಯ್​ ಈ ವ್ಯಾಪಾರ ಪ್ರಾರಂಭಿಸಲು ಬುನಾದಿಯಾಗಿದೆ. ತಕ್ಷಣ ತಮ್ಮದೇ ವೆಬ್​ಸೈಟ್​ ಪ್ರಾರಂಭಿಸಿದ ಅವರು ಯಶಸ್ಸಿನ ಹಾದಿಯನ್ನು ಹಿಡಿದರು.

ಇಂದು ಯಶಸ್ಸಿನ ಸಂಭ್ರಮದಲ್ಲಿರುವ ಅಕ್ಷಯ್​ಗೆ ಎಲ್ಲವು ಸುಲಭವಾಗಿ ದೊರೆಯಿತು ಎಂದು ಭಾವಿಸಬೇಡಿ. ಈ ವ್ಯಾಪಾರ ಪ್ರಾರಂಭಿಸುವಾಗ ಅವರಿಗೂ ಹಣದ ಕೊರತೆಯಿತ್ತು. ತಮ್ಮ ಸಂಭಂದಿಕರಿಂದ ಸಾಲ ಪಡೆದು, 7000 ಪೌಂಡ್ ಹೂಡಿಕೆ ಮಾಡಿ ಈ ವ್ಯಾಪಾರ ಪ್ರಾರಂಭಿಸಿದ್ದಾರೆ. ತಮ್ಮ ಪಾಲಿನ ಕಷ್ಟವನ್ನು ಅನುಭವಿಸಿರುವ ಅವರು ಇಂದು 12 ಜನರಿಗೆ ಉದ್ಯೋಗ ನೀಡಿದ್ದಾರೆ.

ಮೈಕಲ್​ ಓ ಲಿಯರ್​ ಅವರ ಜೀವನ ಚರಿತ್ರೆ ಓದಿದ್ದೇ ತಾವು ಈ ಸಣ್ಣ ಉದ್ಯಮ ಪ್ರಾರಂಭಿಸಲು ಪ್ರೇರಣೆಯಾಯಿತು ಎಂದು ಅಕ್ಷಯ್​ ಹೇಳುತ್ತಾರೆ. ಅಕ್ಷಯ್​ ತಂದೆ ಕೌಶಿಕ್​ ಮತ್ತು ತಾಯಿ ರೇಣುಕಾ ಇಬ್ಬರೂ ಕಿವುಡರಿದ್ದು, ಮಗನ ಈ ಸಾಧನೆಯ ಬಗ್ಗೆ ಅತೀವ ಸಂತಸ ಮತ್ತು ಹೆಮ್ಮೆಪಟ್ಟಿದ್ದಾರೆ.

ಅಕ್ಷಯ್​ ಸಾಧನೆ ಅವರ ಶೈಕ್ಷಣಿಕ ಜೀವನಕ್ಕೂ ನೆರವಾಗಿದೆ. ಅವರ ಉದ್ಯಮದ ಯಶಸ್ಸನ್ನು ಗಮನಿಸಿರುವ ಆಕ್ಸ್​​ಫರ್ಡ್​ ವಿಶ್ವವಿದ್ಯಾಲಯ ಗಣಿತ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಆಹ್ವಾನಿಸಿದೆ. ಆದರೆ ತಮ್ಮ ಉದ್ಯಮದ ಜೀವನದ ಬಗ್ಗೆಯೇ ಗಮನಹರಿಸಿರುವ ಅಕ್ಷಯ್​ ಸದ್ಯಕ್ಕೆ ಆಕ್ಸ್​ಫರ್ಡ್​ ವಿವಿ ಅಫರ್​ ಹೋಲ್ಡ್​ನಲ್ಲಿಟ್ಟಿದ್ದಾರೆ.

ಪ್ರಾರಂಭದ ದಿನಗಳಲ್ಲಿ ತಮ್ಮ ಲಾಭದಲ್ಲಿ ತಿಂಗಳಿಗೆ 500 ಪೌಂಡ್​ ಸಂಬಳ ತಗೆದುಕೊಳ್ಳುತ್ತಿದ್ದ ಅಕ್ಷಯ್​ ಈಗ 1000 ಪೌಂಡ್​ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಭಾರತೀಯ ಮೂಲದ ಯುವಕರು ವಿದೇಶದಲ್ಲಿ ಮಿಂಚಿ ಮುಂದಿನ ಪೀಳಿಗೆಗೆ ಮಾದರಿಯಾಗುತ್ತಿರುವುದು ದೇಶ ಹೆಮ್ಮೆಪಡುವಂತಹ ಸಂಗತಿ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top