Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಪಾರ್ಟ್​ ಟೈಮ್​ ಉದ್ಯೋಗ ಮಾಡ್ತಾ ಅತ್ಯಂತ ಕಿರಿ ವಯಸ್ಸಲ್ಲೇ ವೈದ್ಯನಾದ ಅರ್ಪಣ್​

Thursday, 20.07.2017, 11:53 AM       No Comments

ಲಂಡನ್​: ಭಾರತೀಯ ಮೂಲದ ವೈದ್ಯ ಅರ್ಪಣ್​ ದೋಶಿ ಅವರು ಕಿರಿಯ ವಯಸ್ಸಿಗೆ ವೈದ್ಯಕೀಯ ಪದವಿ ಪೂರ್ಣಗೊಳಿಸುವ ಮೂಲಕ ಬ್ರಿಟನ್​ನ ಅತ್ಯಂತ ಕಿರಿಯ ವೈದ್ಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಷೆಫೀಲ್ಡ್ ವಿಶ್ವವಿದ್ಯಾಲಯದಿಂದ ಅರ್ಪಣ್​ ದೋಶಿ ಬ್ಯಾಚುಲರ್​ ಆಫ್​ ಮೆಡಿಸಿನ್​ ಮತ್ತು ಬ್ಯಾಚುಲರ್​ ಆಫ್​ ಸರ್ಜರಿ ಪದವಿಯನ್ನು ಪಡೆದಿದ್ದಾರೆ. ಅರ್ಪಣ್​ ಕಳೆದ ಸೋಮವಾರ ಪದವಿ ಪ್ರಮಾಣ ಪತ್ರ ಪಡೆಯುವ ಮೂಲಕ ಈ ಸಾಧನೆ ಮಾಡಿದ ಬ್ರಿಟನ್​ನ ಅತ್ಯಂತ ಕಿರಿಯ ವೈದ್ಯ ಎಂಬ ಗೌರವಕ್ಕೆ ಪಾತ್ರರಾದರು.

ಅರ್ಪಣ್​ ಪ್ರತಿಭೆಯನ್ನು ಗುರುತಿಸಿದ ವಿಶ್ವವಿದ್ಯಾಲಯ, ವಿದ್ಯಾರ್ಥಿ ವೇತನ ನೀಡಿ ಬೆಂಬಲಿಸಿತು. ಅರ್ಪಣ್​ ಪಾರ್ಟ್​ ಟೈಮ್​ ಉದ್ಯೋಗ ಮಾಡಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಅರ್ಪಣ್​ 21 ವರ್ಷ 335 ದಿನ ವಯಸ್ಸಿನಲ್ಲಿ ವೈದ್ಯ ಪದವಿ ಪಡೆದಿದ್ದಾರೆ. ಈ ಮೊದಲು 2010ರಲ್ಲಿ ರಾಚಲ್​ ಫಾಯೆ ಹಿಲ್​ ಅವರು 21 ವರ್ಷ 352 ದಿನ ವಯಸ್ಸಿನಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. ಈಗ ಅರ್ಪಣ್​ ಈ ದಾಖಲೆಯನ್ನು ಉತ್ತಮ ಪಡಿಸಿದ್ದಾರೆ. ಮುಂದಿನ ತಿಂಗಳಿಂದ ಅರ್ಪಣ್​ ಕಿರಿಯ ವೈದ್ಯರಾಗಿ ವೃತ್ತಿಯನ್ನು ಆರಂಭಿಸಲಿದ್ದಾರೆ.

ಅರ್ಪಣ್​ ಗುಜರಾತ್​ ಮೂಲದವರಾಗಿದ್ದು, 13ನೇ ವಯಸ್ಸಿನವರೆಗೆ ಗಾಂಧಿನಗರದಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. ಆ ನಂತರ ಅರ್ಪಣ್​ ತಂದೆ ಕುಟುಂಬ ಸಮೇತ ಫ್ರಾನ್ಸ್​ಗೆ ತೆರಳಿ ನೆಲೆಸಿದರು. ಫ್ರಾನ್ಸ್​ನಲ್ಲಿ ಅರ್ಪಣ್​ ತಮ್ಮ ವ್ಯಾಸಂಗವನ್ನು ಮುಂದುವರೆಸಿದರು. ವೈದ್ಯ ಪದವಿ ಪಡೆಯುವ ಹಂಬಲ ಹೊಂದಿದ್ದ ಅರ್ಪಣ್​ ತಮ್ಮ 17ನೇ ವರ್ಷದ ಹುಟ್ಟು ಹಬ್ಬದ ನಂತರ ಷೆಫೀಲ್ಡ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾದರು. ( ಏಜೆನ್ಸೀಸ್​ )

Leave a Reply

Your email address will not be published. Required fields are marked *

Back To Top