Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಆಸ್ಟ್ರೇಲಿಯಾದಲ್ಲಿ ಆಟಕ್ಕೂ ಮುನ್ನ ಸೊಲೊಪ್ಪಿಕೊಂಡ ಕಿರಿಯರ ಮಹಿಳಾ ಹಾಕಿ ತಂಡ

Thursday, 07.12.2017, 1:31 PM       No Comments

<< ಸರಿಯಾದ ಸಮಯಕ್ಕೆ ಮೈದಾನ ತಲುಪಲು ಆಗದೆ ನಿರಾಶೆ >>

ಅಡಿಲೇಡ್​: ಮೂಲಭೂತ ವ್ಯವಸ್ಥೆ ಕೊರತೆ ಅನುಭವಿಸಿ, ಸರಿಯಾದ ಸಮಯಕ್ಕೆ ಮೈದಾನ ತಲುಪಲು ಆಗದೆ ಭಾರತೀಯ ಕಿರಿಯರ ಮಹಿಳಾ ಹಾಕಿ ತಂಡ ಆಸ್ಟ್ರೇಲಿಯಾದಲ್ಲಿ ಸೋಲೊಪ್ಪಿಕೊಂಡಿದ್ದು, ಅಲ್ಲಿನ ಭಾರತ ಸರ್ಕಾರದ ಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ದಾಖಲಿಸಿದೆ.

ಪೆಸಿಫಿಕ್ ಸ್ಕೂಲ್ ಗೇಮ್ಸ್​​ನ ಅಡಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತೀಯ ಶಾಲೆಗಳ ಮಕ್ಕಳಿಗಾಗಿ ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ ನೂರಕ್ಕಿಂತ ಹೆಚ್ಚು ಮಕ್ಕಳು ಆಸ್ಟ್ರೇಲಿಯಾಕ್ಕೆ ತೆರಳಿ ಊಟ, ಕೊಠಡಿ, ಪ್ರಯಾಣದ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡಿದ್ದಾರೆ.

ಡಿ.​ 4ರಂದು ಪಂದ್ಯದಲ್ಲಿ ಭಾಗವಹಿಸಬೇಕಿದ್ದ ಭಾರತದ ಕಿರಿಯರ ಮಹಿಳಾ ಹಾಕಿ ತಂಡ ಬಸ್​ ವ್ಯವಸ್ಥೆ ಇಲ್ಲದೆ ತಡವಾಗಿ ಮೈದಾನ ತಲುಪಿದೆ. ಸಮಯ ಮೀರಿದ್ದರಿಂದ ಕಣಕ್ಕಿಳಿಯಲು ಸಾಧ್ಯವಾಗದೆ ಅನಿವಾರ್ಯವಾಗಿ ಸೋಲನ್ನೊಪ್ಪಿಕೊಂಡಿದೆ.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಹಾಕಿ ಇಂಡಿಯಾ ತಾವು ಯಾವುದೇ ತಂಡವನ್ನು ಭಾರತ ಪ್ರತಿನಿಧಿಸಲು ಕಳುಹಿಸಿಲ್ಲ ಎಂದಿದೆ.

ಭಾರತದ ಶಾಲಾ ಮಕ್ಕಳ ಕ್ರೀಡಾ ಒಕ್ಕೂಟದ ಪರವಾಗಿ ತಂಡ ಆಸ್ಟ್ರೆಲೀಯಾಕ್ಕೆ ತೆರಳಿದ್ದು, ಈ ಒಕ್ಕೂಟ ಭಾರತದ ಯುವ ಹಾಗೂ ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದಿದ್ದಾಗಿದೆ.

ಸಂವಹನದಲ್ಲಾದ ಸಣ್ಣ ಗೊಂದಲದಿಂದ ಈ ತೊಂದರೆಯಾಗಿದೆ. ಆದರೆ, ಸದ್ಯಕ್ಕೆ ಎಲ್ಲ ಸಮಸ್ಯೆಗಳು ಬಗೆಹರಿದಿವೆ ಎಂದು ತಂಡದ ತರಬೇತುದಾರ ಪ್ರದೀಪ್​ ಕುಮಾರ್​ ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top