Monday, 16th July 2018  

Vijayavani

ಡ್ಯಾಂಗಳು ತುಂಬಿವೆ, ಸಿಎಂ ರಿಂದ ಕಣ್ಣೀರಧಾರೆ - ಸಿಎಂ ಕಣ್ಣೀರಿಗೆ ಆಯನೂರು ವ್ಯಂಗ್ಯ - ಕಲ್ಲು ಹೃದಯಗಳಿಗೆ ಕಣ್ಣೀರು ಬರಲ್ಲ ಅಂತಾ ಸಚಿವ ನಾಡಗೌಡ ಟಾಂಗ್‌        ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವೆ, ಪ್ರಮುಖ ಖಾತೆ ಬಿಟ್ಟಿದ್ದೇವೆ - ಸಿಎಂ ‘ವಿಷಕಂಠ’ ಹೇಳಿಕೆಗೆ ಎ. ಮಂಜು ಟಾಂಗ್‌ - ದೋಸ್ತಿ ಸರ್ಕಾರದಲ್ಲಿ ಮತ್ತೇ ಜಂಗೀ ಕುಸ್ತಿ        ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆಶಿ - ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ - ಉಪಚುನಾವಣೆಗೆ ದೋಸ್ತಿಗಳ ಅಡಿಪಾಯ        ಸಿದ್ದು ಅನ್ನಭಾಗ್ಯದಲ್ಲಿ ಮಿಂಚಿದ್ದವನಿಗೆ ದೌರ್ಭಾಗ್ಯ - ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯ ಪರದಾಟ - ಜಾಹೀರಾತಿಗೆ ಬಳಸಿಕೊಂಡು ಕೈಬಿಟ್ಟ ಸರ್ಕಾರ        ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮಹಾದಾಯಿ ಹೋರಾಟ - ದಯಾಮರಣಕ್ಕಾಗಿ ರೈತರಿಂದ ಮನವಿ - ರಾಜ್ಯ ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ        ಮುಂದಿನ ಲೋಕಸಭೆ ಚುನಾವಣೆ ಭರ್ಜರಿ ತಯಾರಿ- 25 ಸ್ಥಾನ ಗೆಲ್ಲಲು ಬಿಜೆಪಿ ಬಿಗ್‌ ಪ್ಲಾನ್‌ - ಜುಲೈ 28 ಕ್ಕೆ ಅಮಿತ್‌ ಷಾ ರಾಜ್ಯಕ್ಕೆ ಆಗಮನ       
Breaking News

ಭಾರತೀಯ ಸೇನೆ ಮೇಜರ್​ ಅಮಿತ್​ ದ್ವಿವೇದಿ ಪತ್ನಿ ಕೊಲೆ

Sunday, 24.06.2018, 10:56 AM       No Comments

ನವದೆಹಲಿ: ಭಾರತೀಯ ಸೇನೆ ಮೇಜರ್​ ಅಮಿತ್​ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿ (35) ಶವ ಕತ್ತು ಕೊಯ್ದ ಸ್ಥಿತಿಯಲ್ಲಿ ದೆಹಲಿ ಮೆಟ್ರೋ ಸ್ಟೇಶನ್​ ಬಳಿ ಪತ್ತೆಯಾಗಿದೆ. ಅಲ್ಲದೆ ಅವರ ದೇಹದ ಮೇಲೆ ಹಲವು ಬಾರಿ ಕಾರನ್ನು ಓಡಿಸಿದ ಗುರುತೂ ಇದೆ.
ಪೊಲೀಸರು ಈ ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಇನ್ನೊಬ್ಬ ಮೇಜರ್​ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು ಶೈಲಜಾ ಹಾಗೂ ಆಕೆಯ ಪತಿಗೆ ಇಬ್ಬರಿಗೂ ಸ್ನೇಹಿತನಾಗಿದ್ದು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಲ್ಲದೆ ಫೋನ್​ ಕೂಡ ಸ್ವಿಚ್​ ಆಫ್​ ಬರುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪೊಲೀಸ್​ ಜಂಟಿ ಕಮಿಷನರ್​ ಮಧುಪ್​ ತಿವಾರಿ, ಶೈಲಜಾ ಕೊಲೆ ಪ್ರಕರಣ ಮೊದಲು ನೋಡಿದರೆ ಅದೊಂದು ಅಪಘಾತವೆಂದೆನಿಸುತ್ತದೆ. ಆದರೆ ಪ್ರಾಥಮಿಕ ತನಿಖೆಯಿಂದ ಇದು ಕೊಲೆಯೆಂಬುದು ಸಾಬೀತಾಗಿದೆ ಎಂದಿದ್ದಾರೆ.
ಶೈಲಜಾ ಅವರು ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಆರ್ಮಿ ವಾಹನದಲ್ಲಿ ದೆಹಲಿ ಬೇಸ್​ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಸೆಶನ್​ಗೆಂದು ತೆರಳಿದ್ದಾರೆ. ಅದು ಮುಗಿದ ಬಳಿಕ ಡ್ರೈವರ್​ ಆಕೆಯನ್ನು ಕರೆತರಲು ಹೋದಾಗ ಶೈಲಜಾ ಸೆಶನ್​ನಲ್ಲಿ ಪಾಲ್ಗೊಂಡಿಲ್ಲ ಎಂಬ ಮಾಹಿತಿ ತಿಳಿದಿದೆ. ಆಕೆ ಆಸ್ಪತ್ರೆಯಲ್ಲಿ ಇಲ್ಲವೆಂದು ತಿಳಿದ ಬಳಿಕ ವಾಪಸ್​ ಪರೇಡ್​ ಮೈದಾನಕ್ಕೆ ಹೋಗಿ ಅಮಿತ್​ ದ್ವಿವೇದಿಗೆ ಮಾಹಿತಿ ನೀಡಿದ್ದಾರೆ. ಆಗ ಅಮಿತ್​ ಅವರು ಪತ್ನಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ.

ಸುಮಾರು 1.28ರಷ್ಟೊತ್ತಿಗೆ ಮೆಟ್ರೋ ಸ್ಟೇಶನ್​ ಬಳಿ ದಾರಿಹೋಕರೊಬ್ಬರು ಮಹಿಳೆಯ ಶವವಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಮಧ್ಯಾಹ್ನ 4.30ಕ್ಕೆ ನಾರೈನ ಪೊಲೀಸ್​ ಠಾಣೆಯಲ್ಲಿ ಅಮಿತ್​ ತಿವಾರಿ ಪತ್ನಿ ಕಾಣೆಯಾದ ಬಗ್ಗೆ ದೂರು ನೀಡಲು ಹೋದಾಗ ಅನುಮಾನಗೊಂಡ ಪೊಲೀಸರು ಮೃತಪಟ್ಟ ಮಹಿಳೆಯನ್ನು ತೋರಿಸಿದ್ದಾರೆ.

ಶೈಲಜಾ ಆಸ್ಪತ್ರೆಗೆಂದು ಹೋದರೂ ಅಲ್ಲಿಗೆ ಹೋಗಿಲ್ಲ. ಅಲ್ಲಿಂದ ಇನ್ಯಾರೋ ಪರಿಚಯದವರೇ ಬೇರೆ ವಾಹನದಲ್ಲಿ ಆಕೆಯನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ಆಕ್ಸಿಡೆಂಟ್​ ಎಂದು ತೋರಲು ಕಾರಿನಿಂದ ಡಿಕ್ಕಿ ಹೊಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top